Header Ads Widget

ಸರ್ಚ್ ಕೂರ್ಗ್ ಮೀಡಿಯ

ಫೆ.10 ರಂದು ಉದ್ಯೋಗ ಮೇಳ


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಸಹಯೋಗದಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆಯ ಅಡಿಯಲ್ಲಿ ಫೆಬ್ರವರಿ, 10 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ ನಡೆಯಲಿದೆ.

ಈ ಉದ್ಯೋಗ ಮೇಳದಲ್ಲಿ ಟಾಟಾ ಕಾಫಿ, ರಾಣಿ ಮದ್ರಾಸ್ ಪ್ರೈ.ಲಿ., ಎನ್ಟಿಟಿಎಫ್, ಹಿಂದುಜಾ ಗ್ಲೋಬಲ್ ಸೊಲ್ಯೂಷನ್ಸ್, ವುಡ್ಲ್ಯಾಂಡ್, ಮಹೀಂದ್ರ ಹಾಲಿಡೇಸ್ ಮತ್ತು ರೆಸಾಟ್ರ್ಸ್, ಯುರೇಕಾ ಪೋಬ್ರ್ಸ್, ಹಿಮತ್ಸಕಂಗ ಲಯನ್ಸ್, ಇಬ್ಬನಿ ರೆಸಾಟ್ರ್ಸ್, ತಾಜ್ ರೆಸಾಟ್ರ್ಸ್, ಪರ್ಪ್ಲ್ ಫಾಮ್ಸ್, ರೆಸಾಟ್ರ್ಸ್ ಮತ್ತು ಸ್ಪಾ-ಕೂರ್ಗ್, ಮಾಂಡೋವಿ ಮೋಟಾರ್ಸ್, ಅಲ್ಪಾ ಟೆಕ್ನಾಲಾಜಿಸ್, ಸಿಫೆಟ್ ಮೈಸೂರು, 3 ಟೆಕ್ನಾಲಾಜೀಸ್, ಜಸ್ಟ್ ಡಯಲ್, ನವಭಾರತಿ ಪರ್ಟಿಲೈಜರ್ಸ್, ವಿನ್ಮ್ಯಾನ್ ಸಾಫ್ಟ್ವೇರ್ ಇಂಡಿಯಾ ಲಿ., ಯಂಗ್ ಇಂಡಿಯಾ, ಸಿಫೆಟ್ ಮೈಸೂರು, ಸ್ಟಾರ್ ಮಾರ್ಕ್ ಸಾಫ್ಟ್ವೇರ್, ವುಡ್ ಸ್ಟಾಕ್ ರೆಸಾಟ್ರ್ಸ್, ಕಾಗೆಂಟ್ ಇ-ಸರ್ವಿಸಸ್, ದಿ ತಾಮರ ರೆಸಾಟ್ರ್ಸ್, ವಿ2ಸಾಪ್ಟ್, ಎಕ್ಸ್ಟ್ರೀಮ್ ಸಾಫ್ಟ್ ಟೆಕ್, ಪಿಎಂಕೆವಿವೈ ಮತ್ತು ಇತರೆ ಸಂಸ್ಥೆಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಅಂದಾಜು 600 ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಅಂತರ್ಜಾಲ ತಾಣದಲ್ಲಿರುವhttps://forms.gle/NPj4zgKAVjrjmjfD9 ಎಂಬ ಲಿಂಕನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳುವುದು. ಉದ್ಯೋಗಾಕಾಂಕ್ಷಿಗಳ ನೋಂದಣಿ ಹಾಗೂ ಸಂದರ್ಶನ ಉಚಿತವಾಗಿರುತ್ತದೆ.
ಅಭ್ಯರ್ಥಿಗಳು ಕನಿಷ್ಠ 10 ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಜಿಲ್ಲಾ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.