Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೇರಳದಿಂದ ಕೊಡಗಿಗೆ ಕೊರೋನ ಆತಂಕ...!!!


ಕೊರೋನ ಆತಂಕದಿಂದ ಒಂದಷ್ಟು ಚೇತರಿಸಿಕೊಂಡ ರಾಜ್ಯ ಇದೀಗ ಒಮ್ಮಲೇ ಬೆಚ್ಚಿಬಿದ್ದಿದ್ದು, ಕೇರಳಕ್ಕೆ ಅಂಟಿಕೊಂಡಿರುವ ಹಾಗೂ ಕೇರಳದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಆತಂಕ ಮನೆಮಾಡಿದ್ದು , ಕೇರಳದಲ್ಲಿ ಕೊರೋನ ಅಟ್ಟಹಾಸ ಎಲ್ಲೆ ಮೀರುತ್ತಿದೆ ಎಂಬ ಆತಂಕಕಾರಿ ವಿಷಯ ಹೊರಬೀಳುತ್ತಿದ್ದಂತೆ ಜಿಲ್ಲೆಯ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ.

ಈ ಕುರಿತು ಜಿಲ್ಲಾಡಳಿತ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು ಕೇರಳ ಗಡಿಯಿಂದ ಜಿಲ್ಲೆಗೆ ಸರಾಗವಾಗಿ ವಾಹನಗಳ ಸಾಲು ಹರಿದುಬರುತ್ತಿದೆ. ಅಲ್ಲಿಂದ(ಕೇರಳದಿಂದ) ಇಲ್ಲಿಗೆ ಬಂದು ಜೀವನ ಕಂಡುಕೊಂಡಿರುವ ಕೇರಳದ ಮಂದಿ ಈಗಾಗಲೇ ತಮ್ಮ ಊರುಗಳಿಗೆ ಹೋಗಿರುವವರು ಒಮ್ಮೆ ಜಿಲ್ಲೆಯೊಳಗೆ (ಕೊಡಗು) ಹೋಗಿ ತಮ್ಮ ವ್ಯಾಪಾರ ವ್ಯವಹಾರ ನೋಡಿ ಕೊಂಡರೆ ಸಾಕು ಎಂಬಂತೆ ಜಿಲ್ಲೆಗೆ ಬರುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಮತ್ತೆ ಎಲ್ಲಿ ಕೊರೋನ ಬಂದು ಜಿಲ್ಲೆಗೆ ಅಪ್ಪಳಿಸಲಿದೆ ಎಂಬ ಭಯ ಜಿಲ್ಲೆಯ ಮಂದಿಯನ್ನು ಕಾಡುತ್ತಿದೆ. 

ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ 24ಗಂಟೆಯೊಳಗಿನ ಕೊರೋನ ಪರೀಕ್ಷೆಯ ರಿಪೋರ್ಟ್ ಇದ್ದವರನ್ನು ಮಾತ್ರ ಜಿಲ್ಲೆಯೊಳಗೆ ಬಿಡಲು ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದ್ದು ಮತ್ತೆ ಜಿಲ್ಲಾಡಳಿತಕ್ಕೆ ತಲೆನೋವು ಬೇಡ. ಕೇವಲ ಕೇರಳ ಗಡಿ ಮಾತ್ರವಲ್ಲ ಹೊರಜಿಲ್ಲೆಯ ಮೂಲಕ ಜಿಲ್ಲೆಗೆ ಬರುತ್ತಿರುವ ಕೇರಳಿಗರಿಗೆ ಕಡ್ಡಾಯ ಕೊವೀಡ್ ಟೆಸ್ಟ್ ರಿಪೋರ್ಟ್ ಎಂದು ಆದೇಶ ಹೊರಡಿಸಬೇಕಿದೆ, ಹಾಗೇ ಕೊಡಗಿನ ಹೋಂಸ್ಟೇ ರೆಸಾರ್ಟ್'ಗಳ ಮೇಲೆ ನಿಗಾ ವಹಿಸಬೇಕೆದೆ. ಈ ಮೂಲಕ ಕೊಡಗಿನಲ್ಲಿ ಮತ್ತೊಮ್ಮೆ ಕೊರೋನ ಹರಡದಂತೆ ಎಚ್ಚರವಹಿಸಬೇಕಿದೆ ಎನ್ನುವುದು ಜಿಲ್ಲೆಯ ಮಂದಿಯ ಒತ್ತಾಯವಾಗಿದೆ. 

ಹಾಗೇ ಹೊರಜಿಲ್ಲೆಯಲ್ಲಿರುವ ಹಾಗೂ ಜಿಲ್ಲೆಯಲ್ಲಿರುವ ಕೇರಳಿಗರು ಜಿಲ್ಲೆಯ ಹಿತದೃಷ್ಟಿಯಿಂದ ತಾವಾಗಿಯೇ ಸದ್ಯದಮಟ್ಟಿಗೆ ಓಡಾಟಕ್ಕೆ ಕಡಿವಾಣ ಹಾಕಿ ಯಾವುದಾದರೊಂದು ಕಡೆಯಲ್ಲಿ ಸುರಕ್ಷತೆಯಿಂದ ಇರಬೇಕಾಗಿದೆ. ಇದನ್ನು ಮೀರಿ ಓಡಾಟ ಕಂಡುಬಂದಲ್ಲಿ ತಮ್ಮ ವ್ಯಾಪಾರ ವ್ಯವಹಾರಕ್ಕೆ ಜನರೆ ಕಡಿವಾಣ ಹಾಕುತ್ತಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ಮರೆಯಬೇಡಿ. ಎಲ್ಲಾರು ಒಂದಾಗಿ ಕೊಡಗಿಗೆ ಮತ್ತೆ ಕೊರೋನ ಅಪ್ಪಳಿಸದಂತೆ ತಡೆಯೋಣ.


✍️ಚಮ್ಮಟೀರ ಪ್ರವೀಣ್ ಉತ್ತಪ್ಪ

📲9880967573