Header Ads Widget

Responsive Advertisement

ಮೇಕೇರಿಯಲ್ಲಿ ಜನೌಷಧಿ ಸಪ್ತಾಹದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ


ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮಡಿಕೇರಿ - ಸ್ವಾಗತ ಯುವಕ ಸಂಘ (ರಿ) ಮೇಕೇರಿ  ಹಾಗೂ ಸಮರ್ಥ ರೋಟರಿ ಸಮುದಾಯದಳ ಮೇಕೇರಿ ಇವರುಗಳ  ಸಂಯುಕ್ತಾಶ್ರಯದಲ್ಲಿ ಜನೌಷಧಿ ಸಪ್ತಾಹದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮೇಕೇರಿಯ ಸರಕಾರಿ ಶಾಲೆಯಲ್ಲಿ ನಡೆಯಿತು. 

ಆರ್. ಆರ್ . ಆಸ್ಪತ್ರೆಯ ಡಾ|| ನವೀನ್ ಹಾಗೂ   ಡಾ|| ಉದಯ್ ಕುಮಾರ್ ರವರ ನೇತೃತ್ವದಲ್ಲಿ ನಡೆದ ಆರೋಗ್ಯ ತಪಾಸಣೆಯಲ್ಲಿ ಮೇಕೇರಿ ಸುತ್ತಮುತ್ತಲಿನ ಸುಮಾರು 40 ಕ್ಕೂ ಹೆಚ್ಚು ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.  

ಮಡಿಕೇರಿಯ ಜನೌಷಧ ಕೇಂದ್ರದ ಮಾಲೀಕರಾದ ಶ್ರಿ  ದಿನೇಶ್ ಕುಮಾರ್ ರವರು ಶಿಬಿರಕ್ಕೆ ಉಚಿತವಾಗಿ  ಔಷಧಿಗಳನ್ನು ಒದಗಿಸಿದರು. ತದ ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ|| ನವೀನ್ ಕುಮಾರ್ ರವರು ಭಾರತದ ಪ್ರತೀ ಪ್ರಜೆಯೂ ಔಷಧಿಗಳ ಬೆಲೆ ದುಬಾರಿಯೆನ್ನುವ ಕಾರಣಕ್ಕೆ ಅನಾರೋಗ್ಯದ ಸಮಸ್ಯೆ ಎದುರಿಸಬಾರದೆನ್ನುವ  ಪರಿಕಲ್ಪನೆ ಹಾಗೂ ಪ್ರತಿಯೊಬ್ಬರು ಆರೋಗ್ಯವಂತರಾಗಬೇಕೆಂಬ ಸದುದ್ದೇಶದೊಂದಿಗೆ ಕೇಂದ್ರ ಸರಕಾರವು ಜನೌಷದ ಕೇಂದ್ರವನ್ನು ದೇಶಾದ್ಯಂತ ಆರಂಭಿಸಿತು.ಜನೌಷಧಿ ಕೇಂದ್ರಗಳಲ್ಲಿ  ಅತೀ ಕಡಿಮೆ ಬೆಲೆಗೆ ಔಷಧಿಗಳು ಸಿಗುತ್ತದೆಂಬ ಕಾರಣಕ್ಕೆ   ಔಷಧಿಯ ಗುಣಮಟ್ಟದ ಬಗ್ಗೆ ಯಾರಿಗೂ ಸಂಶಯ ಬೇಡವೆಂದು ಡಾಕ್ಟರ್ ನವೀನ್  ಈ ಸಂದರ್ಭ ಮಾಹಿತಿ ನೀಡಿದರು. 

ಜನೌಷಧಿ ಕೇಂದ್ರ ಆರಂಭವಾದ ಬಳಿಕ ದೇಶದ ಬಡ ಜನತೆಗೆ   ಸಾಕಷ್ಟು ಅನುಕೂಲವಾಗಿದ್ದೂ ಜನೌಷಧಿಯ ಬಗ್ಗೆ ಗ್ರಾಮ ಗ್ರಾಮಗಳಲ್ಲೂ ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದರು. ಕಾರ್ಯಕ್ರಮದಲ್ಲಿ ಜನೌಷಧಿ ಕೇಂದ್ರದ ಪ್ರಮುಖರು ಮತ್ತು  ಸ್ವಾಗತ ಯುವಕ ಸಂಘ ಹಾಗೂ ರೋಟರಿ ಸಮುದಾಯದಳದ ಪದಾಧಿಕಾರಿಗಳು  ಉಪಸ್ಥಿತರಿದ್ದರು.


Search Coorg Media

Coorg's Largest Online Media Network