Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಪ್ಪಂಗಳದಲ್ಲಿ ನಡೆದ ಸಂಬಾರ ಬೆಳೆ ಸುಧಾರಿತ ತಂತ್ರಜ್ಞಾನ ಬಗ್ಗೆ ರೈತರಿಗೆ ತರಬೇತಿ ಕಾರ್ಯಗಾರ


ಅಪ್ಪಂಗಳದ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಕೋಜಿಕೋಡು ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಪ್ರಾಯೋಜಿತ ಸಂಬಾರ ಬೆಳೆಗಳ ಸುಧಾರಿತ ಉತ್ಪಾದನ ತಂತ್ರಜ್ಞಾನ (ಕಾಳುಮೆಣಸು, ಏಲಕ್ಕಿ ಮತು ಶುಂಠಿ) ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವು ಬುಧವಾರ ನಡೆಯಿತು.

ಈ ಕಾರ್ಯಕ್ರಮವನ್ನು ಡಾ.ಹೊನ್ನಪ್ಪ ಆಸಂಗಿ ಅವರು ನೆರವೇರಿಸಿಕೊಟ್ಟರು. ಸೋಮವಾರಪೇಟೆ ಕಾಫಿ ಮಂಡಳಿಯ ಹಿರಿಯ ಕ್ಷೇತ್ರಾಧಿಕಾರಿ ಮುರಳಿಧರ್ ಮತ್ತು ಕೊಡ್ಲಿಪೇಟೆ ಪ್ರಗತಿಪರ ರೈತರಾದ ಮೊಹಮದ್ ರಜಾಕ್ ಉದ್ಘಾಟಿಸಿದರು. ಅಪ್ಪಂಗಳದ ಐಸಿಎಆರ್-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ, ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಏಲಕ್ಕಿ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.


ತರಬೇತಿ ಕಾರ್ಯಕ್ರಮದಲ್ಲಿ ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿಯ ಆಧುನಿಕ ಉತ್ಪಾದನೆ ಬಗ್ಗೆ ಒತ್ತು ನೀಡಲಾಯಿತು. ಸಂಬಾರ ಬೆಳೆಗಳ ಇಳುವರಿ ಮತ್ತು ಗುಣಮಟ್ಟವನ್ನು ವೃದ್ಧಿಸಲು ಸುಧಾರಿತ ತಳಿಗಳ ಪಾತ್ರ, ಗುಣಮಟ್ಟದ ಸಸ್ಯಾಭಿವೃಧ್ದಿಯ ವಿಧಾನ ಮತ್ತು ಸಾಂಬಾರ ಬೆಳೆಗಳ ವೈಜ್ಞಾನಿಕ ಕೃಷಿ, ಕೀಟ ಮತ್ತು ರೋಗಗಳ ನಿರ್ವಹಣೆ ಬಗ್ಗೆ ಐ.ಸಿ.ಎ.ಆರ್-ಐ.ಐ.ಎಸ್.ಆರ್.ನ ನುರಿತ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು.

ಪ್ರಗತಿಪರ ರೈತರು ಸಂಬಾರ ಬೆಳೆಗಳ ಕೃಷಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ಸಮಯದಲ್ಲಿ ಪ್ರದರ್ಶನ ಮಳಿಗೆಯನ್ನು ಸಹ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ 80 ಕ್ಕೂ ಹೆಚ್ಚು ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಹಾಗೂ 30 ಕ್ಕೂ ಹೆಚ್ಚು ಜನ ಅಂತರ್ಜಾಲ ರೈತರ ತರಬೇತಿಯಲ್ಲಿ ಭಾಗವಹಿಸಿದ್ದರು.

Search Coorg Media

Coorg's Largest Online Media Network