ಕರೋನಾ ಅವಧಿಯಲ್ಲಿ, ಸಾಮಾಜಿಕ ಅಂತರ ಮತ್ತು ಸೋಂಕಿನ ಭಯದಿಂದಾಗಿ ಪರಿಸ್ಥಿತಿ ಇನ್ನಷ್ಟು ನಿರ್ಣಾಯಕವಾಗುತ್ತಿದ್ದು, ರಕ್ತವನ್ನು ದಾನ ಮಾಡಲು ಕಡಿಮೆ ಸಂಖ್ಯೆಯ ದಾನಿಗಳು ಬರುತ್ತಿದ್ದಾರೆ.ಇದರ ಪರಿಣಾಮವಾಗಿ ಸಕಾಲದಲ್ಲಿ ರಕ್ತದ ಅವಶ್ಯಕತೆ ದೊರಕದಿದ್ದಾಗ ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳಲಾಗುತ್ತಿದೆ. ರಕ್ತದಾನದ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಮತ್ತು ಈ ದಿಕ್ಕಿನಲ್ಲಿ ಸಾಮೂಹಿಕ ಪ್ರಯತ್ನಗಳಿಂದ ಇಡೀ ಸನ್ನಿವೇಶವನ್ನು ಬದಲಾಯಿಸಬಹುದು ಮತ್ತು ದೇಶದಲ್ಲಿ ರಕ್ತದಾನದ ಕೊರತೆಯನ್ನು ಶಾಶ್ವತವಾಗಿ ನಿವಾರಿಸಬಹುದು.
ಈ ಚಿಂತನೆಯೊಂದಿಗೆ, 2021 ರ ಮಾರ್ಚ್ 23 ರಂದು ಶಹೀದ್ ಇ ಅಜಮ್ ಭಗತ್ ಸಿಂಗ್, ರಾಜ್ಗುರು ಮತ್ತು ಸುಖದೇವ್ ಅವರ 90 ನೇ ಹುತಾತ್ಮ ದಿನವಾದ, ಸಂವೇದನ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಅಂತರರಾಷ್ಟ್ರೀಯ ರಕ್ತ ಮತ್ತು ಪ್ಲಾಸ್ಮಾ ದಾನ ಜಾಗೃತಿ ಅಭಿಯಾನದ ರಾಷ್ಟ್ರವ್ಯಾಪಿ ರಕ್ತದಾನ ಶಿಬಿರದ ಚಾಲನೆಯನ್ನು ನಡೆಸಲು “ನ್ಯಾಷನಲ್ ಇಂಟಿಗ್ರೇಟಡ್ ಫೋರಂ ಆಫ್ ಆರ್ಟಿಸ್ಟ್ ಆಂಡ್ ಆಕ್ಟಿವಿಸ್ಟ್ಸ್”(NIFAA) ಸಂಸ್ಥೆಯಿಂದ ಬೃಹತ್ ರಕ್ತದಾನ ಶಿಬಿರ ನಡೆಸಲಾಗುತ್ತಿದೆ.
ಮಡಿಕೇರಿ ನಗರ ಬಿ.ಜೆ.ಪಿ. ಯುವ ಮೋರ್ಚಾ, ನೀಮಾ ಕೊಡಗು ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಯೋಗದಲ್ಲಿ ದಿನಾಂಕ 23-03-2021 ರಂದು ಮಡಿಕೇರಿ ನಗರದ ಬಾಲಭವನದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ 100 ಕ್ಕೂ ಹೆಚ್ಚು ರಕ್ತದಾನಿಗಳು ಹಾಗೂ ನಗರ ಯುವಮೋರ್ಚಾದ ಅಧ್ಯಕ್ಷರಾದ ನವೀನ್ ಪೂಜಾರಿ ಪದಾಧಿಕಾರಿಗಳಾದ ವಿಘ್ನೇಶ್, ಜಗದೀಶ್, ವಿವೇಕ್ ನರೇನ್ , ಶ್ರೇಯಾಂಕ್, ಅರುಣ್, ತೀರ್ಥಕುಮಾರ್ ಭಾಗವಹಿಸಿದ್ದರು.
Search Coorg Media
Coorg's Largest Online Media Network