ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮತ್ತು ವಿರಾಜಪೇಟೆ ಕಾವೇರಿ ಕಾಲೇಜು ಇವರ ಸಹಯೋಗದಲ್ಲಿ “ಕೊಡವ ಪಾಜೆ-ತರ್ಜುಮೆ ಕಾರ್ಯಗಾರ” ಎಂಬ ಕಾರ್ಯಕ್ರಮವು ಅರ್ಥ ಪೂರ್ಣವಾಗಿ ನಡೆಯಿತು.
ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಉದ್ಘಾಟನೆಯನ್ನು ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ತರ್ಜುಮೆ ಕಾರ್ಯಗಾರದ ಸಂಚಾಲಕರಾದ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರು ಕಾರ್ಯಗಾರಕ್ಕೆ ಎಲ್ಲರನ್ನು ಸ್ವಾಗತಿಸಿ ಈ ಕಾರ್ಯಗಾರದ ಬಗ್ಗೆ ಮಾತನಾಡಿದರು.
ನಂತರ ವಿಚಾರಗೊಷ್ಠಿ-1 ರಲ್ಲಿ ಡಾ.ಉಳ್ಳಿಯಡ ಎಂ.ಪೂವಯ್ಯ ಇವರು ಮಾತನಾಡುತ್ತಾ “ತರ್ಜುಮೆ ಸಾಹಿತ್ಯತ್ರ ಅವಶ್ಯಕತೆ” ಯ ಬಗ್ಗೆ ಅಂದರೆ ಸಾಹಿತ್ಯ ಹೇಗೆ ಬೆಳೆಯಿತು, ಸಾಹಿತ್ಯ ಅಂದರೆ ಏನು, ಎಂಬುದರ ಬಗ್ಗೆ ತಿಳಿಸಿದರು.
ಅಜ್ಜಿನಿಕಂಡ ಪ್ರಮಿಳ ನಾಚಯ್ಯ ಅವರು “ಕೊಡವ ಪಾಜೆ ತರ್ಜುಮೆ–ಕ್ರಮ” ಈ ವಿಷಯದ ಕುರಿತಾದ ವಿಚಾರ ಎಲ್ಲರೊಂದಿಗೆ ಹಂಚಿಕೊಂಡರು. ಅಲ್ಲದೆ ನಾಗೇಶ್ ಕಾಲೂರು ಅವರು “ತರ್ಜುಮೆ ಸಾಹಿತ್ಯತ್ರ ಸವಾಲ್” ಎಂಬ ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಿದರು.
ನಂತರ ನಡೆದ ಚರ್ಚೆಯಲ್ಲಿ ಡಾ.ತೀತಿಮಾಡ ಪೂವಮ್ಮ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಮತ್ತು ಕರೋಟಿರ ಶಶಿ ಸುಬ್ರಮಣಿ ಇವರು ಕೊಡವ ಭಾಷೆಯ ತರ್ಜುಮೆ ಸಾಹಿತ್ಯದ ಬಗ್ಗೆ ಚರ್ಚೆ ನಡೆಸಿದರು. ನಂತರ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಕೊಡವ ಸಾಹಿತ್ಯ ತರ್ಜುಮೆಯಿಂದ ಹೇಗೆ ಕೊಡವ ಸಾಹಿತ್ಯ ಬೆಳೆಯುವುದು ಎಂಬ ಬಗ್ಗೆ ಮಾಹಿತಿ ನೀಡಿದರು. ಹಾಗೂ ಮುಂದಿನ ದಿನಗಳಲ್ಲಿ ತರ್ಜುಮೆ ಸ್ಪರ್ಧೆ ಅಕಾಡೆಮಿ ಮೂಲಕ ನಡೆಯುವುದೆಂದು ಮಾಹಿತಿ ನೀಡಿದರು.
Search Coorg Media
Coorg's Largest Online Media Network