ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ರಾಷ್ಟ್ರೀಯ ಹಸಿರು ಪಡೆ, ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವಿಶ್ವ ಜಲ ದಿನದ ಅಂಗವಾಗಿ ಏರ್ಪಡಿಸಿದ್ದ ಜಲ ಸಂರಕ್ಷಣಾ ಜನಜಾಗೃತಿ ಅಭಿಯಾನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರು ಮಾನವ ಕುಲದ ಅಸ್ತಿತ್ವ ಹಾಗೂ ಪುನಶ್ಚೇತನಕ್ಕೆ ಜೀವನಾಧಾರ ದ್ರವವಾಗಿದ್ದು, ಮನುಷ್ಯನಿಗೆ ಗಾಳಿಯಂತೆಯೇ ನೀರು ಅತಿ ಅಮೂಲ್ಯ ಎಂದರು.
ವಿಶ್ವ ಜಲದಿನ’ದ ಅಂಗವಾಗಿ ನೀರಿನ ಮಹತ್ವ ಮತ್ತು ನೀರಿನ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಲಾಗುತ್ತಿದೆ. ಆದರೆ ನೀರಿನ ಸಂರಕ್ಷಣೆ ಮತ್ತು ಅದರ ಮಿತ ಬಳಕೆಯನ್ನು ಸಾಮಾನ್ಯ ಜನರ ಬದ್ಧತೆಯ ವಿಷಯವನ್ನಾಗಿ ರೂಪಿಸುವ ಪ್ರಯತ್ನ ಇನ್ನೂ ನಿರೀಕ್ಷಿತ ಫಲ ಕಂಡಿಲ್ಲ. ಈ ದಿಸೆಯಲ್ಲಿ ನಾವು ಈಗಲಾದರೂ ನೀರಿನ ಸಂರಕ್ಷಣೆಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶ್ರೀಧರನ್ ಹೇಳಿದರು.
'ಜಲ ಸಂರಕ್ಷಣೆ' ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ನೀರಿನ ಮಹತ್ವ, ನೀರಿನ ಮಿತಬಳಕೆ ಹಾಗೂ ನೀರಿನ ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.
ವಿಶ್ವ ಜಲದಿನದ ಅಂಗವಾಗಿ ಜನರಿಗೆ ಶಾಲೆಯ ಇಕೋ ಕ್ಲಬ್ ಗಳ ಮೂಲಕ ನೀರಿನ ಮಹತ್ವ, ಶುದ್ಧ ಕುಡಿಯುವ ನೀರಿನ ಸದ್ಬಳಕೆ, ನೀರಿನ ಅಪವ್ಯಯ ತಡೆಗಟ್ಟುವ ಸಲುವಾಗಿ ನೀರಿನ ಮಿತ ಬಳಕೆ ಹಾಗೂ ನೀರಿನ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಪ್ರಮಾಣ ಕ್ಷೀಣಿಸಿರುವುದರಿಂದ ಜಲಮೂಲಗಳು ಬತ್ತಿಹೋಗಿವೆ. ಇದರಿಂದ ದಿನೇ ದಿನೇ ನೀರಿನ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ನೀರಿಗೆ ಸಂಬಂಧಿಸಿದಂತೆ ಮುಂದೊಂದು ದಿನ ನೀರಿಗಾಗಿ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ಪ್ರೇಮಕುಮಾರ್ ಅಭಿಪ್ರಾಯಪಟ್ಟರು.
ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್, ಜಲ ಸಂರಕ್ಷಣೆ ಕುರಿತ ಘೋಷಣೆಗಳುಳ್ಳ ಫಲಕಗಳನ್ನು ಬಿಡುಗಡೆಗೊಳಿಸಿದರು. ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಬಿ.ಸಾವಿತ್ರಿ, ಉಪನ್ಯಾಸಕರಾದ ವಿ.ವಿಜಯ್, ಕೆ.ಜಿ.ನೀಲಕಂಠಪ್ಪ, ಸಿದ್ದೇಶ್ ಕುಮಾರ್ , ಧನಂಜಯ್, ಗೀತಾ, ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಇಸಿಓ ಕೆ.ಬಿ.ರಾಧಾಕೃಷ್ಣ, ಡಿ.ಎಡ್., ಪ್ರಶಿಕ್ಷಣಾರ್ಥಿಗಳು ಇದ್ದರು.
ನಂತರ ನಡೆದ ಜಾಗೃತಿ ಅಭಿಯಾನದಲ್ಲಿ ಪ್ರಶಿಕ್ಷಣಾರ್ಥಿಗಳು ಜಲ ಸಂರಕ್ಷಣೆ ಕುರಿತಂತೆ ಪರಿಸರ ಘೋಷಣಾ ಫಲಕಗಳನ್ನು ಹಿಡಿದು ಜನಜಾಗೃತಿ ಮೂಡಿಸಿದರು. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ, ನೀರನ್ನು ಮಿತವಾಗಿ ಬಳಸಿ- ಉತ್ತಮ ಭವಿಷ್ಯಕ್ಕಾಗಿ ನೀರು ಸಂರಕ್ಷಿಸಿ, ಅಂತರ್ಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಜಲವೇ ಜೀವಜಾಲ, ಕುಡಿಯಿರಿ ಶುದ್ಧಜಲ- ಉಳಿಸಿರಿ ಅಂತರ್ಜಲ ಎಂಬಿತ್ಯಾದಿ ಜಲ ಸಂರಕ್ಷಣೆ ಕುರಿತು ಪ್ರಚುರಪಡಿಸಲಾಯಿತು.
ಸುದ್ದಿ-ಚಿತ್ರ: ಟಿ.ಜಿ.ಪ್ರೇಮಕುಮಾರ್
Search Coorg Media
Coorg's Largest Online Media Network