ಹಲಸಿನ ಮರದಲ್ಲಿ ಹೂವು ಬಿಡುವುದು ಹಲಸಿನ ಕಾಯಿಯಾಗಲು. ಹಲಸಿನ ಕಾಯಿಯ ಮಿಡಿಯೇ ಅದರ ಹೂವು. ಕಳ್ಳಿಗೆ ಮತ್ತು ಮೈ ಕಳ್ಳಿಗೆ ಎಂದು ಕರೆಯುವ ಇದು ಹೆಣ್ಣು ಮತ್ತು ಗಂಡು ಹೂವುಗಳು.
# ಚಳಿಗಾಲ ಪ್ರಾರಂಭವಾಗುವ ಸಮಯದಿಂದ ಆರಂಭವಾಗಿ ಶಿವರಾತ್ರೆ ತನಕ ಹಲಸಿನ ಮರ ಹೂವು ಬಿಡುವ ಕಾಲ.
# ಈ ಸಮಯದಲ್ಲಿ ಕೆಲವು ಬೇಗ ಹೂವು ಬಿಟ್ಟರೆ ಮತ್ತೆ ಕೆಲವು ನಿಧಾನವಾಗಿ ಶಿವರಾತ್ರೆ ನಂತರವೂ ಹೂವು ಬಿಡುತ್ತವೆ.
# ಗಾಳಿ ಬಂದಾಗ ಹೂವು ಬಿಡುವಿಕೆ ಜಾಸ್ತಿ ಎನ್ನುತ್ತಾರೆ.
ವಾಸ್ತವವಾಗಿ ಹಾಗಲ್ಲ. ಶುಷ್ಕ ವಾತಾವರಣ ಇದ್ದಾಗ ಹೂ ಬಿಡುವಿಕೆ ಹೆಚ್ಚು.
# ಹಲಸಿನ ಮರದಲ್ಲಿ ಎಲ್ಲಾ ಮರಗಳಂತೆ ಎಲೆ ಬಾಗದಲ್ಲಿ ಹೂ ಬಿಡುವುದಲ್ಲ.
ಕಾಂಡ ಮತ್ತು ದಪ್ಪದ ರೆಂಬೆಗಳಲ್ಲಿ ಮಾತ್ರ ಹೂ ಬಿಡುತ್ತದೆ.
# ಅಧಿಕ ಸಂಖ್ಯೆಯಲ್ಲಿ ಹೂ ಬಿಡುತ್ತವೆಯಾದರೂ ಅದರಲ್ಲಿ ಫಲಿತ ಗೊಳ್ಳುವ ಹೆಣ್ಣು ಹೂವು ಕೆಲವೇ ಕೆಲವು ಮಾತ್ರ.(ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಹೂವು ಎನ್ನುತ್ತೇವೆ.
# ಇದು ಗಂಡು ಮತ್ತು ಹೆಣ್ಣು ಮಿಡಿಗಳು) ಕೆಲವು ಮರಗಳಲ್ಲಿ ನೆಲಮಟ್ಟದಲ್ಲೂ ಮಿಡಿ ಬಿಡುತ್ತದೆ.
# ಹೆಣ್ಣು ಮಿಡಿಗಳು ಗೊಂಚಲುಗಳಲ್ಲಿ ಗಂಡು ಮಿಡಿಗಳ ಸಮೇತವಾಗಿ ಬಿಡುವುದು ಜಾಸ್ತಿ.
# ಗಂಡು ಮಿಡಿಗಳು ಬೇರೆ ಕಡೆಯಲ್ಲೂ ಬಿಡುವುದಿದೆ.
# ಗಂಡು ಮಿಡಿಗಳ ಆಕಾರ ಮತ್ತು ಹೆಣ್ಣು ಮಿಡಿಗಳ ಆಕಾರ ಭಿನ್ನವಾಗಿರುತ್ತದೆ.ಮೇಲ್ಮೈ ಸಹ ಭಿನ್ನವಾಗಿರುತ್ತದೆ.
# ಗಂಡು ಮಿಡಿಗಳ ಮೇಲ್ಮೈ ನಯವಾಗಿದು, ಹೆಣ್ಣು ಮಿಡಿಗಳಲ್ಲಿ ಮುಳ್ಳುಗಳ ರಚನೆ ಇರುತ್ತವೆ.
# ಗಂಡು ಸಣ್ಣದಾಗಿರುತ್ತದೆ. ಹೆಣ್ಣು ದೊಡ್ಡದಿರುತ್ತದೆ.ಗಂಡು ಮಿಡಿಗಳಲ್ಲಿ ಬರೇ ಪರಾಗ ಇರುವ ಹೂ ಮಾತ್ರ ಇರುತ್ತವೆ.
# ಹೆಣ್ಣು ಮಿಡಿಗಳಲ್ಲಿ ಅಂಡಾಶಯ ಮತ್ತ್ತು ಶಲಾಖೆಗಳೆರಡೂ ಇರುತ್ತವೆ.
# ಗಂಡು ಮಿಡಿ ತನ್ನ ರಕ್ಷಾ ಪೊರೆಯನ್ನು ಬಿಡಿಸಿದ ಮರು ದಿನದಲ್ಲಿ ಕಪ್ಪ್ಪಗಾಗುತ್ತಾ ಕೆಲವೇ ದಿನದಲ್ಲಿ ಉದುರುತ್ತದೆ.
# ಹೆಣ್ಣು ಮಿಡಿಯ ರಕ್ಷಾ ಪೊರೆ ಬಿಡಿಸಿದ ತರುವಾಯ ಮುಳ್ಳಿನ ಮೇಲಿರುವ ಹೂವುಗಳು ಅರಳಿ ಪರಾಗಸ್ಪರ್ಷಕ್ಕೆ ಸಜ್ಜಾಗುತ್ತವೆ.
# ಇದು 4-6 ದಿನಗಳ ತನಕವೂ ಮುಂದುವರಿಯುತ್ತವೆ.
# ಪರಾಗಸ್ಪರ್ಷ ಆದ ತರುವಾಯ ಮುಳ್ಳಿನ ತುದಿ ಭಾಗ ಕಪ್ಪಗಾಗುತ್ತದೆ.
# ಹೆಣ್ಣು ಮಿಡಿಯನ್ನು ಪರೆ ಬಿದ್ದ ತಕ್ಷಣ ಕಾಗದಲ್ಲಿ ಸುತ್ತಿಟ್ಟರೆ ಅದು ಪರಾಗಸ್ಪರ್ಷ ಆಗದೆ ಉದುರಿ ಬೀಳುತ್ತದೆ.
# ಅದ ಕಾರಣ ಹಲಸು ಅನ್ಯ ಪರಾಗಸ್ಪರ್ಷದಿಂದ ಫಲಿಸುವ ಕಾಯಿಯಾಗಿದೆ.
# ಗಂಡು ಹೂವಿನ ಪರಾಗವು ಹೆಣ್ಣು ಹೂವಿಗೆ ಲಭ್ಯವಾಗುತ್ತದೆ. ಅದು ಗಾಳಿಯ ಮೂಲಕ ಪರಾಗ ವರ್ಗಾವಣೆಯಾಗುತ್ತದೆ.
# ಆ ಸಮಯದಲ್ಲಿ ಘಾಢ ಪರಿಮಳ ಬರುತ್ತದೆ. ಬರೇ ಗಾಳಿಯಲ್ಲದೆ ಕೀಟಗಳು, ಇರುವೆಗಳೂ ಸಹ ಪರಾಗ ಸ್ಪರ್ಷಕ್ಕೆ ಹೆಚ್ಚಾಗಿ ಸಹಕರಿಸುತ್ತವೆ.
# ಇದೇ ಕಾರಣಕ್ಕೆ ಹಲಸು ಬೀಜದಿಂದ ಸಸ್ಯಾಭಿವೃದ್ದಿಯಾದಾಗ ತನ್ನ ಮಾತೃ ಗುಣದಿಂದ ಭಿನ್ನವಾದ ಕಾಯಿ ಬಿಡುವುದು.
# ಇಂದೇ ನಿಮ್ಮ ಹಲಸಿನ ಮರ ಹೂ ಬಿಡುವ ಸಮಯದಲ್ಲಿ ಇದನ್ನು ಗಮನಿಸಿ.ಹಲಸಿನ ಮರದಲ್ಲಿ 95-96 % ಗಂಡು ಹೂ ಮಿಡಿಗಳೇ ಇರುತ್ತದೆ.
# ಹೆಣ್ಣು ಮಿಡಿ ಇರುವ ಸಮಯದುದ್ದಕ್ಕೂ ಇದು ಇರುತ್ತದೆ.
ಅಪರೂಪದಲ್ಲಿ ಕೆಲವು ಮರಗಳಲ್ಲಿ ಹೆಣ್ಣು ಹೂ ಮಿಡಿಗಳು ಜಾಸ್ತಿ ಇರುತ್ತವೆ. ಅಂತವುಗಳಲ್ಲಿ ಅಧಿಕ ಸಂಖ್ಯೆಯ ಕಾಯಿಯಾಗುತ್ತದೆ.ಸಮರ್ಪಕವಾಗಿ ಪರಾಗ ಸ್ಪರ್ಷ ಆಗದೇ ಇದ್ದ ಕಾಯಿ ಅಲ್ಲಲ್ಲಿ ಪೊಳ್ಳು ಆಗುವುದನ್ನು ಕಾಣಬಹುದು.
Search Coorg Media
Coorg's Largest Online Media Network