Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೂಡಿಗೆ ಡಯಟ್‌ನಲ್ಲಿ ‘ಶಾಲಾಸಿದ್ಧಿ’ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ

ಸರ್ಕಾರಿ ಶಾಲಾ ಕಾಲೇಜಿನ  ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ‘ಶಾಲಾಸಿದ್ಧಿ’ ಕಾರ್ಯಕ್ರಮ ಸಹಕಾರಿ : ಡಿಡಿಪಿಐ ಮಚ್ಚಾಡೋ 


‘ಶಾಲಾಸಿದ್ಧಿ’ ಕಾರ್ಯಕ್ರಮವು ಸರ್ಕಾರಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಕಲಿಕೆ, ಶೈಕ್ಷಣಿಕ ಪ್ರಗತಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸಹಕಾರಿಯಾಗಿದೆ’ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಆಡಳಿತ) ಪೆರಿಗ್ರಿನ್ ಎಸ್.ಮಚ್ಚಾಡೋ ತಿಳಿಸಿದರು.

   ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು (ಕೆ.ಎಸ್.ಕ್ಯೂ.ಎ.ಎ.ಸಿ.) ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ೨೦೨೦-೨೧ ನೇ ಸಾಲಿನ ‘ಶಾಲಾಸಿದಿ’್ಧ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಕುರಿತು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶೂಪಾಲರು, ಶಿಕ್ಷಣಾಧಾರಿಗಳು ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ, ‘ಶಾಲಾಸಿದ್ಧಿ’ ಅನುಷ್ಠಾನಗೊಳಿಸುವ ಕುರಿತು ತಿಳಿಸಿದರು. 

   ಕೆ.ಎಸ್.ಕ್ಯೂ.ಎ.ಎ.ಸಿ. ವತಿಯಿಂದ ೨೦೨೦-೨೧ ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲಾಸಿದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಶಾಲಾ/ಪದವಿ ಪೂರ್ವ ಕಾಲೇಜು ಹಂತದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಖ್ಯ ಶಿಕ್ಷಕರು/ಪ್ರಾಂಶುಪಾಲರು, ಶಿಕ್ಷಕರು/ಉಪನ್ಯಾಸಕರು ಹಾಗೂ ಎಸ್.ಡಿ.ಎಂ.ಸಿ./ಸಿ,ಬಿ.ಸಿ. ಸದಸ್ಯರನ್ನೊಳಗೊಂಡAತೆ ಸ್ವ-ಮೌಲ್ಯಮಾಪನದ ಮೂಲಕ ಶಾಲೆ/ಕಾಲೇಜಿನ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದರು.

  ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿಷ್ಣಮೂರ್ತಿ ಮಾತನಾಡಿ, ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದ ಸಮನ್ವಯತೆ ಹಾಗೂ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗೂ ಶಾಲಾ-ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

    ಡಯಟ್‌ನ ಪ್ರಾಂಶುಪಾಲರೂ ಆದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಅಭಿವೃದ್ಧಿ) ಎ.ಶ್ರೀಧರನ್ ಮಾತನಾಡಿ, ಈ ಕಾರ್ಯಕ್ರಮದಡಿ ಸಂಸ್ಥೆಗಳ ಸ್ವ ಮೌಲ್ಯಮಾಪನದ ನಂತರ ಜಿಲ್ಲೆಯ ಡಯಟ್‌ನ ಪ್ರಾಂಶುಪಾಲರು/ಸAಪನ್ಮೂಲ ಉಪನ್ಯಾಸಕರ ನೇತೃತ್ವದಲ್ಲಿ ಬಾಹ್ಯ ಮೌಲ್ಯಮಾಪನ ತಂಡವು ಶಾಲೆಗಳಿಗೆ ಭೇಟಿ ನೀಡಲಾಗುವುದು ಎಂದರು. 

ಕಾರ್ಯಕ್ರಮದ ಉದ್ದೇಶಗಳ ಕುರಿತು ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಾಗದ ಜಿಲ್ಲಾ ನೋಡಲ್ ಅಧಿಕಾರಿ ಕೆ.ವಿ.ಸುರೇಶ್,   ಶಾಲಾಸಿದ್ಧಿ ಕಾರ್ಯಕ್ರಮವು ಶಾಲೆಗಳ ಸಂಪೂರ್ಣ ಮತ್ತು ಸಮಗ್ರ ಸುಧಾರಣೆಗೆ ಬೆಂಬಲ ನೀಡುತ್ತದೆ. ಎಲ್ಲಾ ಶಾಲೆ/ಕಾಲೇಜುಗಳು ಸ್ವ ಸುಧಾರಣೆಯಲ್ಲಿ ತೊಡಗಿಕೊಳ್ಳಲು ಧನಾತ್ಮಕ ದೃಷ್ಠಿಕೋನಗಳನ್ನು ಹೊಂದಿದ್ದು, ಮೌಲ್ಯಮಾಪನವು ಒಂದು ಸಾಧನವಾಗಿ ಶಾಲೆಯ ಸುಧಾರಣೆಯ ಗುರಿ ಹೊಂದಿದೆ ಎಂದರು. ಈ ಕಾರ್ಯಕ್ರಮದಡಿ ಜಿಲ್ಲೆಯ ೧೪ ಸರ್ಕಾರಿ ಪಿಯೂ ಕಾಲೇಜುಗಳು, ೪೭ ಸರ್ಕಾರಿ ಪ್ರೌಢಶಾಲೆಗಳು ಹಾಗೂ ೪೫೦ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಳಪಡಲಿವೆ ಎಂದು ತಿಳಿಸಿದರು. 

    ಪದವಿ ಪೂರ್ವ ಶಿಕ್ಷಣ ಇಲಾಖೆ ವಿಭಾಗದ ಜಿಲ್ಲಾ ನೋಡಲ್ ಅಧಿಕಾರಿ ಸಿ.ಎಂ.ಮಹಾಲಿAಗಯ್ಯ,  ಶಾಲಾ/ಕಾಲೇಜಿನ ಸಾಮರ್ಥ್ಯಗಳು ಮತ್ತು ಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳನ್ನು ಗುರುತಿಸಿ ಯೋಜಿತ ಮಾರ್ಗದರ್ಶನದ ಮೂಲಕ ಶಾಲೆ/ಕಾಲೇಜನ್ನು ಸಬಲೀಕರಣಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.

   ಸಂಪನ್ಮೂಲ ಶಿಕ್ಷಕರಾದ ಸತೀಶ್, ಮಂಜುಳ,  ಶಾಂತಕುಮಾರ್ ಶಾಲಾಸಿದ್ಧಿ ಕಾರ್ಯಕ್ರಮದ ಅನುಷ್ಠಾನದ ಕುರಿತು ಪಿ.ಪಿ.ಟಿ.ಮೂಲಕ ಮಾಹಿತಿ ನೀಡಿದರು.

   ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬೀಳಗಿ, ಟಿ.ಎನ್.ಗಾಯತ್ರಿ, ಬಿಆರ್‌ಸಿಗಳಾದ ವನಜಾಕ್ಷಿ, ಶಶಿಧರ್,  ಶಿಕ್ಷಣ ಸಂಯೋಜಕರು, ಸಿ.ಆರ್.ಪಿ.,ಗಳು, ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. 


ಸುದ್ದಿ-ಚಿತ್ರ: ಟಿ.ಜಿ.ಪ್ರೇಮಕುಮಾರ್ 


Search Coorg Media

Coorg's Largest Online Media Network