Header Ads Widget

Responsive Advertisement

ಮಡಿಕೇರಿ ನಗರಸಭಾ ಚುನಾವಣೆ: ಪರಿಶಿಷ್ಟ ಜಾತಿ ಮೀಸಲಾತಿಯ ಏಕೈಕ ಸ್ಥಾನಕ್ಕೆ ಸಮಾಜ ಸೇವಕ ಪಿ.ಎಂ. ರವಿ ಸ್ಪರ್ಧೆ ಖಚಿತ



ಮಡಿಕೇರಿ ನಗರಸಭೆ ಚುನಾವಣಾ ಕದನಕ್ಕೆ ಮುಹೂರ್ತ ನಿಗದಿಯಾಗಿದ್ದು, ರಾಜ್ಯ ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ 27 ರಂದು ಚುನಾವಣೆಯನ್ನು ನಿಗದಿಮಾಡಲಾಗಿದೆ.

ಮಡಿಕೇರಿ ನಗರಸಭಾ ಚುನಾವಣೆಯ  ಪರಿಶಿಷ್ಟ ಜಾತಿ ಮೀಸಲಾತಿಯ ಏಕೈಕ ಸ್ಥಾನಕ್ಕೆ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಜನಾನುರಾಗಿ ಸಮಾಜ ಸೇವಕರಾದ ಪಿ.ಎಂ. ರವಿಯವರು ಸ್ಪರ್ಧಿಸುವುದು ಬುಹುತೇಕ ಖಚಿತವಾಗಿದೆ.


ಕಡು ಬಡತನದಿಂದ ಹಂತ ಹಂತವಾಗಿ ಸಮಾಜಮುಖಿ ಸೇವೆಯನ್ನು ಮಾಡುತ್ತಾ, ಸರಿ ಸುಮಾರು 25 ವರ್ಷಗಳಿಂದ ತಮ್ಮದೇ ಆದ ರೀತಿಯಲ್ಲಿ ಹಲವಾರು ಜನೋಪಯೋಗಿ ಕಾರ್ಯದಲ್ಲಿ ಮಗ್ನರಾಗಿರುವ, ಸಮಾಜ ಸೇವಕರಾದ ಪಿ.ಎಂ. ರವಿಯವರು ತಮ್ಮ ವಾಸಸ್ಥಳವಿರುವ ವಾರ್ಡ್‌ ನಂ. 5ರ ಪರಿಶಿಷ್ಟ ಜಾತಿ ಮೀಸಲಾತಿಯ ಏಕೈಕ ಸ್ಥಾನಕ್ಕೆ ಸ್ಫರ್ಧಿಸಲು ನಿಶ್ಚಯಿಸಿದ್ದಾರೆ.


ಬಿ.ಜೆ.ಪಿ. ಯಿಂದ ಟಿಕೇಟ್‌ ಆಕಾಂಕ್ಷಿಯಾಗಿರುವ ಪಿ.ಎಂ. ರವಿಯವರು ಬಿ.ಜೆ.ಪಿ. ಪಕ್ಷದಿಂದ ಅಧೀಕೃತವಾಗಿ ಟಿಕೇಟ್‌ ಘೋಷಣೆಯಾಗುವುದೊಂದೆ ಬಾಕಿಯಿದೆ. ಪಿ.ಎಂ. ರವಿಯವರು ವಾರ್ಡ್ ನಂ. 5ರಲ್ಲಿ ಸ್ಪರ್ಧಿಸಿದಲ್ಲಿ  ಮಡಿಕೇರಿ ನಗರಸಭೆಯ ಇತಿಹಾಸದಲ್ಲೇ ಅತ್ಯಧಿಕ ಮತಗಳಿಂದ ಅಯ್ಕೆಯಾಗುವ ಏಕೈಕ ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.


ವಾರ್ಡ್‌ ನಂ.  5ರಲ್ಲಿ ಪಿ.ಎಂ. ರವಿಗೆ ಪ್ರತಿಯೋಬ್ಬರು ಆಪ್ತರೇ. ರವಿಯವರಿಗೆ ಆಪ್ತರಲ್ಲದವರು ಯಾರಿದ್ದಾರೆ ಎಂದು ಹುಡುಕುವುದೆ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಪಿ.ಎಂ. ರವಿಯವರ ಎದುರು ಸ್ಪರ್ಧಾಳುಗಳು ಇಲ್ಲದಿದ್ದರೆ ಅವಿರೋದ ಆಯ್ಕೆಗೆ ಯಾವುದೇ  ಸಂಶಯವಿಲ್ಲ.


ಒಬ್ಬ ಉತ್ತಮ ಸಮಾಜಮುಖಿ ಚಿಂತನೆಯುಳ್ಳ ಪಿ.ಎಂ. ರವಿಯಂತವರು ಮಡಿಕೇರಿ ನಗರಸಭೆಗೆ ಆಯ್ಕೆಯಾಗಿ ಬಂದಲ್ಲಿ ಜನತೆ ಉತ್ತಮವಾದ ಕೆಲಸ ಕಾರ್ಯಗಳ ಬಗ್ಗೆ  ತುಂಬು ಭರವಸೆಯನ್ನು ಇಟ್ಟುಕೊಳ್ಳಬಹುದು.


ಪಿ.ಎಂ. ರವಿಯವರು ಮಡಿಕೇರಿ ನಗರಸಭಾ ಚುನಾವಣಾ ಸ್ಪರ್ಧಾ ಕಣದಲ್ಲಿ ಸ್ಪರ್ಧಿಸಿ ಜಯಶೀಲಾರಾಗಿ ಬರಲೆಂದು ವಾರ್ಡ್‌ ನಂ. 5ರ ನಿವಾಸಿಗಳು ಒಕ್ಕೊರಳಿನಿಂದ ಶುಭ ಹಾರೈಸಿದ್ದಾರೆ.



Search Coorg Media

Coorg's Largest Online Media Network