ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯು ೦೯.೦೫.೨೦೨೧ ರಂದು ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನಕ್ಜೆ ಕೇಶವ ಕಾಮತ್ ಸ್ಪರ್ಧಿಸುತಿದ್ದು ದಿನಾಂಕ ೦೫.೦.೪.೨೦೨೧ ರ ಸೋಮವಾರ ಬೆಳಿಗ್ಗೆ ೧೦.೩೦ ಗಂಟೆ ಸಮಯದಲ್ಲಿ ಮಡಿಕೇರಿಯಲ್ಲಿರುವ ಕುವೆಂಪು ಪುತ್ಥಳಿಗೆ ಹಾರ ಹಾಕಿ ನಂತರ ೧೧.೦೦ ಗಂಟೆಗೆ ಮಡಿಕೇರಿಯ ತಹಶಿಲ್ದಾರರ ಕಚೇರಿಯಲ್ಲಿ ಮಡಿಕೇರಿಯ ಕಸಾಪ ಚುನಾವಣಾಧಿಕಾರಿ ಮತ್ತು ತಹಶಿಲ್ದಾರರಾದ ಮಹೇಶ್ ರವರಿಗೆ ನಾಮಪತ್ರ ಸಲ್ಲಿಸಿದರು.
ಆ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್, ಮಾಜಿ ತಾಲೂಕು ಅಧ್ಯಕ್ಷರುಗಳಾದ ಕೆ ಟಿ ಬೇಬಿ ಮ್ಯಾಥ್ಯೂ, ಎಸ್ ಐ ಮುನೀರ್ ಅಹಮದ್, ಪೊನ್ನಂಪೇಟೆ ಹೋಬಳಿ ಮಾಜಿ ಅಧ್ಯಕ್ಷ ರಾದ ಬಿ ಎನ್ ಪ್ರಕಾಶ್,ಕಸಾಪ ಜಿಲ್ಲಾ ನಿರ್ದೇಶಕರಾದ ಕೆ. ಆರ್ ಬಾಲಕೃಷ್ಣ ರೈ, ಕಸಾಪ ಸದಸ್ಯರುಗಳಾದ, ಮನುಶೆಣೈ, ಕಾವೇರಮ್ಮ ಸೋಮಣ್ಣ ವಿ.ಟಿ ಶ್ರೀನಿವಾಸ್, ಚುಮ್ಮಿ ದೇವಯ್ಯ, ಅಂಬೆಕಲ್ ನವೀನ್, ಜಿ ಆರ್ ರಾಜು, ವಿ ಟಿ ಮಂಜುನಾಥ್, ನಾರಾಯಣ ಸ್ವಾಮಿ ನಾಯ್ಡು, ಶರತ್ ಕಾಂತ್, ಟಿ ಎಲ್ ಶ್ರೀನಿವಾಸ್, ಸಂಧ್ಯಾ ಕಾಮತ್, ಶ್ರೀನಾಥ್ ಭಟ್, ಸಂಗೀತಾ ಕಾಮತ್, ಶ್ರೀಧರ ಹೂವಲ್ಲಿ, ಲಿಯಾಕತ್ ಆಲಿ, ಎಸ್ ಎಂ ಚಂಗಪ್ಪ, ಕೆ.ಎಂ.ಆದಮ್, ಚಂದನ್ ಕಾಮತ್, ಎಂ.ಇ.ಮೊಯಿದ್ದಿನ್, ಪಿ.ಕೆ.ಪ್ರವೀಣ್, ಟಿ ಎಂ ಮುದ್ದಯ್ಯ, ಎಂ ಎಂ ಸೋಮಪ್ಪ, ಎಂ.ಎಸ್ ಅಶೋಕ್, ಪಿ.ಜಿ ರಾಜಶೇಖರ್, ನಗರ ಸಭಾ ಮಾಜಿ ಸದಸ್ಯರಾದ ಸುನಿಲ್ ನಂಜಪ್ಪ, ಪ್ರಭು ರೈ ಉಪಸ್ಥಿತರಿದ್ದರು.
Search Coorg Media
Coorg's Largest Online Media Network