ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಮಡಿಕೇರಿ ನಗರ ವತಿಯಿಂದ ಛತ್ತೀಸ್ ಗಢ ದಾಳಿಯಲ್ಲಿ ವೀರಮರಣ ಹೊಂದಿದ ನಮ್ಮ ಭಾರತದ ಹೆಮ್ಮೆಯ ವೀರ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಇಂದು "ನಗರದ ಯುದ್ಧ ಸ್ಮಾರಕದಲ್ಲಿ” ದೀಪ ಬೆಳಗುವ ಮೂಲಕ ಯೋಧರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸಿ ಅರ್ಥಪೂರ್ಣಾವಾಗಿ ನಡೆಸಲಾಯಿತು. ನಗರ ಯುವ ಮೋರ್ಚಾ ಅಧಕ್ಷ ನವೀನ್ ಪೂಜಾರಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಆರ್.ಎಸ್.ಎಸ್ ನ ಹಿರಿಯ ಸ್ವಯಂಸೇವಕರಾದ ಸೋಮೇಶ್ ಮಾತನಾಡಿ ರಾಷ್ಟಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಯೋಧರ ತ್ಯಾಗಕ್ಕೆ ಸರಕಾರವು ಪ್ರತ್ಯುತ್ತರ ನೀಡುತ್ತದೆ ಎಂದು ವಿಶ್ವಾಸವಿದೆ, ನಕ್ಸಲರು ನಮ್ಮೊಡನೆಯೆ ಮಾರು ವೇಶದಲ್ಲಿದ್ದುಕೊಂಡು ದೇಶದ್ರೋಹ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ಅವರನ್ನು ಗುರುತಿಸಬೇಕಾಗಿದೆ, ಮತ್ತು ನಕ್ಸಲ್ ಚಟುವಟಿಕೆಗಳು ನಡೆಯದ ಹಾಗೆ ಜಾಗೃತಿ ಮೂಡಿಸುವ ಕೆಲಸ ಯುವ ಮೋರ್ಚಾದ ಕಾರ್ಯಕರ್ತರಿಂದ ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ನಗರ ಬಿ.ಜೆ.ಪಿ ಅಧ್ಯಕ್ಷರಾದ ಮನು ಮಂಜುನಾಥ್, ಕಜಾಂಚಿ ಮುರುಗನ್, ಹಾಗೂ ಬಿ.ಜೆ.ಪಿ ಮಹಿಳಾ ಮೋರ್ಚಾ, ಯುವ ಮೋರ್ಚ ಮತ್ತು ಜಿಲ್ಲಾ ಮತ್ತು ನಗರ ಬಿ.ಜೆ.ಪಿ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. #YodaNamana #SainikSamman #NaxalAttack #Chattisgarh #BJYMKarnataka #BJYMMadikeri
Search Coorg Media
Coorg's Largest Online Media Network