Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೋವಿಡ್ ಮತ್ತು ಮಳೆಯ ನಡುವೆ ಸಂಕಷ್ಟ ಪರಿಸ್ಥಿತಿಯಿಯಲ್ಲಿ ಕೊಡಗಿನ ಜನತೆ

ಕೋವಿಡ್ ಮತ್ತು ಮಳೆಯ ನಡುವೆ ಸಂಕಷ್ಟ ಪರಿಸ್ಥಿತಿಯಿಯಲ್ಲಿ ಕೊಡಗಿನ ಜನತೆ




ಕೊಡಗಿನ ಜನತೆ ಕಳೆದ ಕೆಲವು ವರ್ಷಗಳಿಂದ ಸತತ ಒಂದಲ್ಲಾ ಒಂದು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದ್ದು,  ಇದೀಗ ಮತ್ತೊಮ್ಮೆ ಮಳೆಯ ಆತಂಕ ಎದುರಾಗಿದೆ. 

ಕೊರೊನ ಮಹಾಮಾರಿಯಿಂದ ಈಗಾಗಲೇ ಕೂಲಿಕಾರ್ಮಿಕರು ವ್ಯಾಪಾರಸ್ಥರು ಮಧ್ಯಮ ವರ್ಗದವರಿಗೆ ಜೀವನ ನಡೆಸಲು  ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಹುತೇಕ ಜನರಿಗೆ ವ್ಯಾಪಾರ ವಹಿವಾಟು ಇಲ್ಲದೆ ಕಾರ್ಮಿಕರಿಗೆ ಕೆಲಸವಿಲ್ಲದೆ ಬೆಳೆಗಾರರು ಕೃಷಿ ಫಸಲುಗಳು ಮಾಡಲು ಸಾಧ್ಯವಾಗದೇ ಸಂಕಷ್ಟದಲ್ಲಿದ್ದಾರೆ.

ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತಗೊಂಡ ಹಿನ್ನಲೆ ಪ್ರವಾಸೋದ್ಯಮವನ್ನೇ ನಂಬಿ ಬದುಕುವವರ ಪರಿಸ್ಥಿತಿ ಕೂಡ  ಕಂಗಾಲಾಗಿದೆ. ಕೆಲವು ಕಡೆ ಆಟೋ ಚಾಲಕರು‌, ಬದುಕಿನ ಬುತ್ತಿಕಟ್ಟಿಕೊಳ್ಳಲು ಲೊಡರ್ಸ್ ಕೆಲಸಕ್ಕೂ ಮುಂದಾಗಿದ್ದಾರೆ. ಲಾಕ್ ಡೌನ್ ಕಾರಣ ವಾಹನ ಚಾಲಕರು ಕಂಗಾಲಾಗಿದ್ದು, ನಿತ್ಯ ಜೀವನ ನಡೆಸಲು ಸಾಧ್ಯವಾಗದ ಕಾರಣ ಹಲವು ರೀತಿಯ  ಕೂಲಿ ಕೆಲಸಕ್ಕೆ ಮೊರೆ ಹೋಗಿದ್ದಾರೆ.

ಅಂಗಡಿ ಮುಂಗಟ್ಟುಗಳಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕೆಲವು  ಕೆಲಸಗಾರರು ಆದಾಯ ಇಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಸಿಗುವ ಕೂಲಿ ಕೆಲಸ  ಮಾಡಿ ಜೀವನ ಸಾಗುಸುತ್ತಿದ್ದಾರೆ. ಖಾಸಗಿ ಶಾಲೆಯನ್ನು ಮಾತ್ರ  ನಂಬಿ ಜೀವನ ಸಾಗುಸಿತಿದ್ದ ಶಿಕ್ಷರ ಜೀವನ ಮಾರ್ಗವು ಸ್ತಂಭವಾಗಿದೆ.

ಕೊಡಗು ಜಿಲ್ಲೆಯಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳು ಹಾಗೂ ಬೆಳಗಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಳೆದ ಹಲವು ವರ್ಷಗಳಿಂದಲೂ ಪ್ರಕೃತಿ ವಿಕೋಪ ಪ್ರವಾಹ ಮಳೆಯ ಪರಿಣಾಮದಿಂದ ಬೆಳದ ಫಲಸಲುಗಳು ನಾಶವಾಗಿ ತೋಟಗಳಿಗೆ  ತೆರಳಿ ಕೆಲಸ ಮಾಡಲು ಸಾಧ್ಯವಾಗದೆ ಕಾರ್ಮಿಕರ ಕೊರೆತೆ ನಡುವೆ ಬೆಳಗಾರರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. 

ಗೋಣಿಕೊಪ್ಪಲುವಿನ ಕೀರೆಹೊಳೆ ಸಮೀಪ ವಾಸವಿರುವ ಬಡ ಕುಟುಂಬದ ನಿವಾಸಿಗಳಿಗೆ  ಶಾಶ್ವತ ಪರಿಹಾರ ಈವರೆಗೂ ಸರ್ಕಾರ ಹಾಗೂ ಜನಪ್ರತಿನಿಧಿಗಳು  ನೀಡಿಲ್ಲ. ಮಳೆಗಾಲದ ಸಂದರ್ಭದಲ್ಲಿ ಬಹುತೇಕ ಕೀರೆಹೊಳೆ ಸಮೀಪ ವಾಸವಿರುವ ಬಡ ಕುಟುಂಬಗಳು ಗಂಜಿ ಕೇಂದ್ರವನ್ನೇ ಆಶ್ರಯಪಡಬೇಕಾಗಿದೆ.

ಕಾಡುಪ್ರಾಣಿಗಳ ಹಾವಳಿ

ಕಾಡು ಪ್ರಾಣಿಗಳ ನಿರಂತರ ಹಾವಳಿಯಿಂದ ಕೃಷಿ ಫಸಲುಗಳು ಪ್ರಾಣಿಗಳ ಪಾಲುಗುತ್ತಿದ್ದು, ಇತ್ತ ಜಾನುವಾರುಗಳು ಹುಲಿ ಪಾಲಾಗುತ್ತಿದೆ. ಈಗಾಗಲೇ ಕಾಡುಪ್ರಾಣಿಗಳ ಹಾವಳಿಯಿಂದ ಸಾವು ನೋವು ಸಂಭವಿಸುತ್ತಲೇ ಇದ್ದರೂ ಸರ್ಕಾರ ಗಂಭೀರವಾಗಿ ಚಿಂತನೆ ಅರಿಸದೆ,  ವೈಜ್ಞಾನಿಕವಾಗಿ ತಡೆಗಟ್ಟಲು ಮುಂದಾಗದೆ ಇರುವುದರಿಂದ ಬೆಳಗಾರರೂ ಹಾಗೂ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಸಾಲ ಸೋಲ ಮಾಡಿ ವರ್ಷವಿಡೀ  ಬೆಳೆದ ಫಸಲುಗಳು ಪ್ರಾಣಿಗಳ ಪಾಲಾಗುತ್ತಿದ್ದು,ಬಹುತೇಕ ಬೆಳಗಾರರು ಭತ್ತ ಸೇರಿದಂತೆ ಪ್ರಮುಖ ಬೆಳೆಗಳನ್ನು ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಮತ್ತೊಮ್ಮೆ ಮಳೆಯ ಮುನ್ಸೂಚನೆ ಎದುರಾಗಿರುವ ಕಾರಣ ಸತತ ಮೂರು ವರ್ಷಗಳಿಂದಲೂ ಬೆಳಗಾರರೂ ಕಾರ್ಮಿಕರುಗಳು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. 

ಕೊಡಗು ಜಿಲ್ಲೆಗೆ ಹಿಂದೆಂದೂ ಕಂಡರಿಯದಂಥ ಹಲವು ಘಟನೆಗಳು ನಡೆದಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಬೆಳೆ ಹಾನಿಗೆ ಸರಿಯಾಗಿ ಪರಿಹಾರ ನೀಡುತಿಲ್ಲ, ಕಾಡುಪ್ರಾಣಿಗಳ ಹಾವಳಿಯನ್ನು ತಡೆಗಟ್ಟಲು ಮುಂದಾಗುತ್ತಿಲ್ಲ.  ಇಂತಹ ಹಲವಾರು ದೂರುಗಳು ಕೇಳಿಬರುತ್ತಿದ್ದು, ಜನರು ತುಂಬಾ ಸಂಕಷ್ಟದ ಜೀವನ ನಡೆಸುವಂತಾಗಿದೆ. ಪ್ರತೀ ಬಾರಿಯೂ ಪ್ರವಾಹ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನಪ್ರತಿನಿಧಿಗಳು ಆಶ್ವಾಸನೆ ನೀಡುತ್ತಿದ್ದು, ಕಾರ್ಯ ಯೋಜನೆಗಳನ್ನು ಮಾಡಲು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.  ಜಿಲ್ಲೆಯ ಜನರ ಸಮಸ್ಯೆಗಳಿಗೆ  ಸರ್ಕಾರಗಳು ಸ್ಪಂದಿಸಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡಬೇಕೆಂದು ಬೆಳೆಗಾರರು ಒತ್ತಾಯ ಮಾಡಿದ್ದಾರೆ. 

ಕೊಡಗಿನ ಇಂಥಹ ಸಂಕಷ್ಟದ ಸಮಸ್ಯೆಗಳಿಗೆ ಕೊಡಗಿಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಯೋಜನೆಗಳನ್ನು ರೂಪಿಸುವ ಮೂಲಕ ವಿಶೇಷ ಪ್ಯಾಕೇಜ್ ಘೋಷಿಸಿ ಬೆಳಗಾರರೂ, ಕಾರ್ಮಿಕರು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.


✍️ವಿಶೇಷ ವರದಿ: ಶರಫುದ್ದೀನ್ ಗೋಣಿಕೊಪ್ಪ.



( ಶರಫುದ್ದೀನ್ ಗೋಣಿಕೊಪ್ಪ)



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,