Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿಶ್ವಾಸದ ಚಪ್ಪರ ಕಟ್ಟಿಕೊಂಡು ಬದುಕಿಬಿಡೋಣ

ವಿಶ್ವಾಸದ ಚಪ್ಪರ ಕಟ್ಟಿಕೊಂಡು ಬದುಕಿಬಿಡೋಣ



ಹಳ್ಳಿಯ ಸುಂದರವಾದ ಶುದ್ಧ ಗಾಳಿ, ಕಾಡಿನಲ್ಲಿ ದೊರೆಯುವ ತರಹೇವಾರಿ ಹಣ್ಣುಗಳು, ಸುಗಂಧಭರಿತ ವಿವಿಧ ಹೂವುಗಳ ಸೊಬಗು, ತೋಟದ ಆ ಬದಿಯಲ್ಲಿ ಜುಳುಜುಳು ಎಂದು ಸದ್ದು ಮಾಡುತ್ತಾ ಹರಿಯುವ ನದಿ, ಆಟ ಆಡಿ ಹಸಿದು ಬರುವಾಗ ಅಮ್ಮ ಮಾಡಿ ಕೊಡುತ್ತಿದ್ದ ಬಗೆ ಬಗೆಯ ತಿಂಡಿಗಳು, ರುಚಿ ರುಚಿಯಾದ ಊಟ, ಅಕ್ಕ-ತಂಗಿ, ಅಣ್ಣ-ತಮ್ಮನ ಜೊತೆ ಸೇರಿ ಆಡುತ್ತಿದ್ದ ಆಟ, ಮಾಡುತ್ತಿದ್ದ ಜಗಳ, ದೂರುಗಳನ್ನು ಪರಿಹರಿಸಲು ಕೆಂಪೇರುತ್ತಿದ್ದ ಅಪ್ಪನ ಕಣ್ಣುಗಳು, ಆ ಹೊತ್ತು ರಕ್ಷಣೆಯ ಕವಚವಾಗುತ್ತಿದ್ದ ಅಮ್ಮನ ಬೆಚ್ಚಗಿನ ಸೆರಗು. ಎಲ್ಲಾ ಇತ್ತು. ಜೊತೆಗೆ ಒಂದು ರೀತಿಯ ಬಡತನವೂ. ಏನೇ ಆದರೂ ಹೊಟ್ಟೆ ತುಂಬ ಊಟ ಮನೆಯ ಮಂದಿಗೆ ಮಾತ್ರ ಅಲ್ಲ, ಮನೆಗೆ ಬಂದ ಅತಿಥಿಗಳಿಗೂ ಇರುತಿತ್ತು.

ಭತ್ತದ ಕೃಷಿಯೇ ಜೀವಾಳವಾಗಿದ್ದ ಕೊಡಗಿನಲ್ಲಿ ಹಬ್ಬ ಹರಿದಿನಗಳೆಲ್ಲವೂ ಅದರ ಸುತ್ತಲೆ ಆಚರಣೆಯಾಗುತ್ತಿದೆ. ಇನ್ನು ಮಳೆಗಾಲವೂ ಕೂಡ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತಿತ್ತು. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಿದ್ದರು. ಅಲ್ಲಿಂದ ಶುರುವಾಗುವ ಭತ್ತದ ಕೃಷಿ ಚಟುವಟಿಕೆ ಮುಗಿಯುತ್ತಿದ್ದದ್ದು ಆಗಸ್ಟ್ ತಿಂಗಳಲ್ಲಿ. ಮುಂಗಾರು ಆರಂಭಗೊಳ್ಳುತ್ತಿದೆ ಎನ್ನುವಾಗಲೇ ಜನ ಮಳೆಗಾಲವನ್ನು ಎದುರಿಸಲು ರ‍್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದರು. ಮಳೆಗಾಲಕ್ಕೆ ಬೇಕಾದ ಕೊಡೆ, ರೈನ್ ಕೋಟ್, ಗಂಬೂಟು, ಪ್ಲಾಸ್ಟಿಕ್, ಕೊರಂಬು ಹೀಗೆ ಎಲ್ಲವನ್ನೂ ಖರೀದಿಸುತ್ತಿದ್ದರು. ಜೊತೆಗೆ ಮಳೆಗಾಲಕ್ಕಿರಲೆಂದು ಗೆಣಸು, ಬೆಲ್ಲ, ಕಾಯಿಗಳು, ಕಾಳುಕಡ್ಡಿ ಸೇರಿದಂತೆ ಹಾಳಾಗದ ಒಂದಷ್ಟು ಪದರ‍್ಥಗಳು, ಸೌದೆ, ದಿನಸಿ ಸಾಮಾನುಗಳನ್ನು ಸಂಗ್ರಹಿಸಿಡುತ್ತಿದ್ದರು. ಏಕೆಂದರೆ ಗದ್ದೆ ಕೆಲಸ ಆರಂಭವಾದ ಬಳಿಕ ಹೊರ ಪ್ರಪಂಚದ ಸಂರ‍್ಕವೇ ಇರುತ್ತಿರಲಿಲ್ಲ. ಜತೆಗೆ ಸಮಯವೂ ಸಿಗುತ್ತಿರಲಿಲ್ಲ.

ಕೊಡಗಿನಲ್ಲಿ ಮುಖ್ಯವಾದ ಆಹಾರದ ಬೆಳೆ ಭತ್ತ, ಆದಿ ಕಾಲದಿಂದಲೂ ಬೇರೆ ಧಾನ್ಯಗಳ ಉಪಯೋಗ ಮಾಡಿದರೂ ಸಹ ಪ್ರಮುಖ ಆಹಾರ ಬೆಳೆಯಾಗಿ ಭತ್ತದ್ದೇ ಪಾರುಪತ್ಯ. ಇನ್ನು ಗದ್ದೆಗಳು ಕೇವಲ ಆಹಾರಕ್ಕಾಗಿ ಮಾತ್ರವಲ್ಲದೆ ಎಷ್ಟೋ ಜಲಚರವಾಸಿಗಳ, ಮತ್ಸ್ಯ ಸಂಕುಲದ ಉಳಿವಿಗೆ ಸಹಕಾರಿ. ಹಾಗೆಯೇ ಭತ್ತದ ಗದ್ದೆಗಳಲ್ಲಿ ನೀರು ಕಟ್ಟಿ ನಿಲ್ಲಿಸುವುದರಿಂದ ಅಂರ‍್ಜಲಕ್ಕೆ ಮಹತ್ತರ ಕೊಡುಗೆ. ಜೊತೆಗೆ ಕೊಡಗಿನ ಸಂಸ್ಕೃತಿಯ ಶ್ರೀಮಂತಿಕೆ ಭತ್ತದ ಗದ್ದೆಗಳಿಂದಲೇ ಹೆಚ್ಚಾದದ್ದು ಎಂಬುದನ್ನು  ಒಪ್ಪಲೆ ಬೇಕಾದ ನಿಜ ಸತ್ಯ. 

ಕೃಷಿಯಲ್ಲಿ ದಿಢೀರ್ ಹಣ ಕಾಣಬೇಕು ಅಂದ್ರೆ ಸ್ವಲ್ಪ ಕಷ್ಟ. ಅದಕ್ಕಾಗಿ ಕಾಯುವ ತಾಳ್ಮೆ ಇರಬೇಕು. ಕೃಷಿಯಲ್ಲಿ ಡೈರೆಕ್ಟ್ ಬೆನಿಫಿಟ್ ಗಳಿಗಿಂತ ಹೆಚ್ಚಾಗಿ ಇನ್‌ಡೈರೆಕ್ಟ್ ಬೆನಿಫಿಟ್ ಗಳು ಸಾಕಷ್ಟಿವೆ. ಸಾಕಷ್ಟು ಸಮಯ ಸಿಗುತ್ತದೆ. ಒತ್ತಡ ಅಂತೂ ಇಲ್ಲವೇ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಇದ್ದೆ ಇದೆ. ಕುಟುಂಬದ ಜತೆ ಹೆಚ್ಚು ಕಾಲಕಳೆಯಬಹುದು. ಪ್ರತಿದಿನದ ಓಡಾಟ, ಧಾವಂತ ಇರುವುದಿಲ್ಲ. ಒಳ್ಳೆಯ ಗಾಳಿ, ನೀರು, ನಿಶ್ಯಬ್ದ ಎಲ್ಲವೂ ಧಾರಾಳವಾಗಿ ಸಿಗುತ್ತವೆ. 

ಲಾಭ ನಷ್ಟಗಳ ಲೆಕ್ಕಾಚಾರ ಮಾಡಿದ ಬಹಳಷ್ಟು ರೈತರು ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಪಾಳು ಬಿಟ್ಟರು. ಇನ್ನು ಕೆಲವರು ನಿವೇಶನಗಳನ್ನಾಗಿ ಪರಿರ‍್ತಿಸಿದರು. ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ಹಸು, ದನ, ಎಮ್ಮೆ, ಕೋಣ ಸಾಕೋರು ಇಲ್ಲ ಹೀಗಾಗಿ ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೆ ಕೆಲಸ ಕರ‍್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುತ್ತಿರುವ ರೈತ ಈಗ ಸಂಕಷ್ಟವನ್ನೇ ಅನುಭವಿಸುತ್ತಿದ್ದಾನೆ. ನಮ್ಮ ಉಳಿವಿಗೆ, ಜೀವನಕ್ಕೆ ಅಗತ್ಯವಾಗಿರುವ ಅನ್ನಕ್ಕಾಗಿ ಕೃಷಿ ಮಾಡುವುದು ಅನಿವಾರ್ಯವಾಗಿದೆ.

ಇಂದಿನ ಪೀಳಿಗೆಯ ಹಳ್ಳಿಗರಿಗೆ ಕೃಷಿಯ ಯಾವೊಂದೂ ಗುಟ್ಟು ಸರಿಯಾಗಿ ತಿಳಿದಿಲ್ಲ. ಹಿಂದಿನವರು ಇಂತಹುದರಲ್ಲಿ ಎಷ್ಟು ಪರಿಣತರಾಗಿದ್ದರೆಂದರೆ; ಯಾವೊಂದೂ ರಾಸಾಯನಿಕ ಗೊಬ್ಬರವಿಲ್ಲದೆ, ಕೀಟನಾಶಕವಿಲ್ಲದೆ, ಸರಿಯಾದ ನೀರಾವರಿ ವ್ಯವಸ್ಥೆಯಿಲ್ಲದೆ, ಮಳೆಯನ್ನೇ ಅವಲಂಭಿಸಿ ಒಳ್ಳೆಯ ಇಳುವರಿ ಪಡೆಯುತ್ತಿದ್ದರು. ಇದರ ಜೊತೆಗೆ ವಾತಾವರಣದ ಬದಲಾವಣೆಯನ್ನು ಕಣ್ಣಲ್ಲೇ ನೋಡಿ ಹೀಗೇ ಆಗುತ್ತದೆ ಎಂದು ಹೇಳಿಬಿಡುತ್ತಿದ್ದರು.

ಇಂದು ಸುತ್ತ ಮುತ್ತಲಿನ ಗಿಡ ಮರ ಬಳ್ಳಿಗಳು, ದಾರಿ ಉದ್ದಕ್ಕೂ ಹಾಸಿದಂತಿದ್ದ ಹೂವಿನ ರಾಶಿ, ಹಕ್ಕಿಗಳ ಕಲರವ, ದನಕರುಗಳ ಕೂಗು, ದೂರದ ದೇವಸ್ಥಾನದ ಆವರಣದಿಂದ ಕೇಳುತ್ತಿದ್ದ ಸುಪ್ರಭಾತ ಎಲ್ಲವೂ ಕ್ಷೀಣವಾಗತೊಡುಗುತ್ತಿದೆ.  ಜೊತೆಗೆ ಬಾಲ್ಯದ ದಿನಚರಿಯೂ ಇಲ್ಲವಾಗಿದೆ.

ಅಪರೂಪದ ಸಾಧನೆ, ಕ್ಲಿಷ್ಟಕರ ಸಾಹಸ, ಅಪ್ರತಿಮ ಅಂಕಗಳಿಕೆ, ಅಪಾರ ಸಂಪತ್ತಿನ ಸಂಗ್ರಹ, ಸಂಕಷ್ಟ ಮೀರಿದ ಸುಖ, ಅಸಾಮಾನ್ಯ ಕೌತುಕ, ಅಲೌಕಿಕ ಚಾತರ‍್ಯ. ಇವೆಲ್ಲವೂ ಆಯಾ ಸನ್ನಿವೇಶದಲ್ಲಿ ಪ್ರತಿಭೆಗೆ ಮಾನದಂಡವಾಗಿಯೇ ನಿಲ್ಲುತ್ತವೆ. ಆದರೆ ಸುಖಕರ, ಸುಸ್ಥಿರ ಬದುಕಿಗೆ, ಆರೋಗ್ಯಕರ ಸಮಾಜಕ್ಕೆ ಅನ್ವಯಿಕವೆನಿಸದಿದ್ದ ಮೇಲೆ ಅದಕ್ಕೆ ರ‍್ಥವಿಲ್ಲವೆನಿಸುತ್ತದೆ. 

ಕೃಷಿ ಹಾಗೂ ನಿರ‍್ಗ ಮನುಷ್ಯನ ಮೂಲಭೂತ ಅಂಶಗಳಲ್ಲೊಂದು. ಮಾನವ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದಾಗ ನಮ್ಮ ವೈಜ್ಞಾನಿಕವೆಂದು ಹೇಳಿಕೊಳ್ಳುವ ಸಂಶೋಧನೆಗಳು, ಅಭಿವೃದ್ಧಿ ನಮಗೇ ಅರಿವಿಲ್ಲದಂತೆ ಬದುಕನ್ನು ಹಳಿ ತಪ್ಪಿಸಿವೆ. ಅದೇ ಸಂರ‍್ಭದಲ್ಲಿ ಹಳ್ಳಿಯ ಬಡ ರೈತ, ಬಡಗಿ, ಕಮ್ಮಾರ, ಚಮ್ಮಾರರು ಕೈಗೊಳ್ಳುವ ಪುಟ್ಟ ಪುಟ್ಟ ಶೋಧಗಳು ಬದುಕಿನ ಮರ‍್ಗದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತವೆ.

ಇಂದಿನ ಜಗತ್ತು ಜಾಗತೀಕರಣದಿಂದಾಗಿ ಒಂದು ಹಳ್ಳಿಯಾಗಿದೆ. ನಾವಿರುವ ವಾಸ್ತವ ಯಾವಾಗಲೂ ಮುಳ್ಳು, ದೂರದ ಬೆಟ್ಟ ನುಣ್ಣಗೆ. ವಾಸ್ತವದ ಅರಿವಿಲ್ಲದೆ ಕರೆಯುವ ಪಟ್ಟಣದ ವಾಸಿಗಳಾಗುತ್ತಿದ್ದೇವೆ. ಜೊತೆಗೆ ಕೆಲವರ ಮನೆ ಪರಿಸ್ಥಿತಿಯೂ ಚೂರು ಪಾರು ದುಡಿಮೆಗಾಗಿ ಪಟ್ಟಣದತ್ತ ಮೊಗಮಾಡುವ ಅವಶ್ಯಕತೆ ಸೃಷ್ಟಿಸಿದೆ. ಕೃಷಿಯ ಅರಿವೇ ಇಲ್ಲದಂತೆ ಬದುಕಬೇಕಾಗಿರುವುದರಿಂದ ಪಟ್ಟಣದ ವಾಸ್ತವಗಳನ್ನೆಲ್ಲ ತಿಳಿಯುವ ವೇಳೆಗೆ ವಿಧಿಯಿಲ್ಲದೆ ಸಂಪರ‍್ಣ ಪಟ್ಟಣ ಜೀವನಕ್ಕೆ ಒಗ್ಗಿಕೊಂಡಂತಾಗಿ, ನಿಜವಾದ ನೆಮ್ಮದಿ ಸುಖ ಎಲ್ಲಿ ಎಂಬ ಹುಡುಕಾಟಕ್ಕೆ ಉತ್ತರ ಸಿಗುವ ವೇಳೆಗೆ ನಾವು ಬಡವಾಗಿರುತ್ತೇವೆ.

2018ರ ಮಹಾಮಳೆಯ ಗಂಡಾಂತರದಿಂದ ತತ್ತರಿಸಿದ ಕೊಡಗಿಗೆ 2019ರಲ್ಲೂ ಮತ್ತದೆ ಮಹಾ ಮಳೆಯ ಪ್ರಳಯಕಾಲ. ಇನ್ನೇನು ಕಷ್ಟಕಾಲದಿಂದ ವ್ಯಾಪಾರ, ವಹಿವಾಟು, ಉದ್ಯೋಗ, ಕೃಷಿಯಿಂದ ರ‍್ಥಿಕತೆ ಚೇತರಿಸಿಕೊಳ್ಳುತ್ತದೆ ಎನ್ನುವಷ್ಟರಲ್ಲಿ 2020ರ ರ‍್ಷ ಕೊರೋನಾ ಹಾವಳಿಯಿಂದ ಕಂಗೆಡೆವುವಂತಾಯಿತು. ಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಕೆಲವರಿಗಷ್ಟೆ ಜೀವನದಲ್ಲಿ ಮೂರು ಬಾರಿ ಸಾಡೇಸಾತ್‌ ಬಾಧಿಸುತ್ತದೆ ಎನ್ನಲಾಗುತ್ತದೆ. ಆದರೆ ಕೊರೋನಾ ಎರಡನೇ ಅಲೆಯಿಂದ ಮೂರು ಬಾರಿ ಕಳೆದು ಇದೀಗ ನಾಲ್ಕನೆ ಬಾರಿ ತೊಂದರೆಗಳ ಸರಮಾಲೆ ಸಾಗುತ್ತಿದೆ. ಒಟ್ಟಿನಲ್ಲಿ ಸುತ್ತಿಗೆಯ ಬಲವಾದ ಪೆಟ್ಟು ಬಿದ್ದ ಬಂಡೆಯಂತಾಗುವತ್ತ ಸಾಗುತ್ತಿದೆ ಕೊಡಗಿನ ಜನತೆಯ ಬದುಕು. ಉತ್ತರವಿಲ್ಲದ ಪ್ರಶ್ನೆಗಳು? ಸಾವಿರಾರು.

ಕಷ್ಟಕಾಲದಲ್ಲಿರುವ ಮನುಷ್ಯ ಪರಿಸ್ಥಿತಿ ಕೈ ಮೀರಿದಾಗ ಈ ಎಲ್ಲವೂ ಕ್ಷಣರ‍್ಧದಲ್ಲಿ ಬದಲಾಗಿ ಎಲ್ಲಾ ಕಷ್ಟಗಳೂ ಕಣ್ಮುಚ್ಚಿ ತೆರೆವಷ್ಟರಲ್ಲಿ ನಿವಾರಣೆಯಾಗಿಬಿಟ್ಟಿದ್ದರೆ ಎಷ್ಟು ಚೆನ್ನ ಎಂದು ಯೋಚಿಸುತ್ತಾನಲ್ಲ, ಹಾಗೆ ಬದಲಾಯಿಸುವ ಸಾಧ್ಯತೆ ಇರುವ ಶಕ್ತಿಯನ್ನು ಅರಸುತ್ತಾನಲ್ಲ, ಹಾಗೆ ಇಲ್ಲಿ ಸಮಸ್ಯೆ ಪರಿಹಾರವಾಗುತ್ತದೋ ಇಲ್ಲವೋ ಎಂಬ ಫಲಿತಾಂಶ ಅಷ್ಟು ಮಹತ್ವ ಪಡೆದುಕೊಳ್ಳುವುದಿಲ್ಲ. ಬದಲಿಗೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯೇ ಹೆಚ್ಚು ಮುಖ್ಯ. ಹಾಗಾಗಿ ವಿಶ್ವಾಸದ ಚಪ್ಪರ ಕಟ್ಟಿಕೊಂಡು ಬದುಕಿಬಿಡೋಣ ಇನ್ನೊಂದಿಷ್ಟು ದಿನಗಳು.


✍️.... ಅರುಣ್‌ ಕೂರ್ಗ್‌ 

            (ಪತ್ರಕರ್ತರು)


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,