Header Ads Widget

Responsive Advertisement

ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ಗುರುತಿಸಲು ಹೊಸ ತಂತ್ರಾಂಶ

ವೆಂಟಿಲೇಟರ್ ಅಗತ್ಯವಿರುವ ರೋಗಿಗಳನ್ನು ಗುರುತಿಸಲು ಹೊಸ ತಂತ್ರಾಂಶವು ಸಹಾಯ ಮಾಡುತ್ತದೆ ಇದರಿಂದಾಗಿ ತುರ್ತು ಮತ್ತು ಐಸಿಯು ಅಗತ್ಯಗಳನ್ನು ಮೊದಲೇ ಪತ್ತೆ ಮಾಡಬಹುದು.


ಒಂದು ಹೊಸ ತಂತ್ರಾಂಶವು ಈಗ ಐಸಿಯು ಮತ್ತು  ವೆಂಟಿಲೇಟರ್ ಬೆಂಬಲ ಅಗತ್ಯವಿರುವ ರೋಗಿಗಳನ್ನು ಗುರುತಿಸುವುದು ಮತ್ತು ತುರ್ತುಸ್ಥಿತಿಯು ಬರುವ ಮೊದಲೇ ಅಗತ್ಯ ವ್ಯವಸ್ಥೆಗಳನ್ನು ಮಾಡಲು ನೆರವಾಗುವುದು. ಕೋವಿಡ್ ಸೆವೆರಿಟಿ ಸ್ಕೋರ್ (ಸಿಎಸ್ಎಸ್) ಸಾಫ್ಟ್‌ವೇರ್ ಎಂಬ ತಂತ್ರಾಂಶವು ಒಂದು ನಿಯತಾಂಕಗಳನ್ನು ಅಳೆಯುವ ಅಲ್ಗಾರಿದಮ್ ಅನ್ನು ಒಳಗೊಂಡಿದೆ. ಇದು ಪ್ರತಿ ರೋಗಿಗೆ ಪ್ರೀ-ಸೆಟ್ ಡೈನಾಮಿಕ್ 

ಅಲ್ಗಾರಿದಮ್ ಗೆ ಪ್ರತಿಯಾಗಿ ಅನೇಕ ಬಾರಿ ಅಂಕಗಳನ್ನು (ಸ್ಕೋರ್) ತೋರಿಸುತ್ತದೆ  ಮತ್ತು ಕೋವಿಡ್ ಸೆವೆರಿಟಿ ಸ್ಕೋರ್ (ಸಿಎಸ್ಎಸ್) ಅನ್ನು ಚಿತ್ರಾತ್ಮಕ ಪ್ರವೃತ್ತಿಯಲ್ಲಿ  ಹೊಂದಾಣಿಕೆಯ ಪ್ರಕ್ರಿಯೆಯನ್ನು ಮಾಡುತ್ತದೆ.

ಕೋಲ್ಕತ್ತಾದ ಮೂರು ಸಮುದಾಯ ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಉಪನಗರಗಳಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ, ಕೋಲ್ಕತ್ತಾದ ಬರಾಕ್‌ ಪೋರ್‌ನಲ್ಲಿ 100 ಹಾಸಿಗೆಗಳ ಸರ್ಕಾರದ  ಮೀಸಲಾದ ಕೋವಿಡ್ ಆರೈಕೆ ಕೇಂದ್ರವೂ ಸೇರಿದೆ.

ಸಾಂಕ್ರಾಮಿಕ ಸಮಯದಲ್ಲಿ  ಆಸ್ಪತ್ರೆಗಳಿಗೆ ಹಠಾತ್ ಐಸಿಯು ಮತ್ತು ಇತರ ತುರ್ತು ಅವಶ್ಯಕತೆಗಳನ್ನು ನಿರ್ವಹಿಸುವುದು ಒಂದು ಸವಾಲಾಗಿದೆ. ಅಂತಹ ಸಂದರ್ಭಗಳ ಬಗ್ಗೆ ಸಮಯೋಚಿತ ಮಾಹಿತಿಯು  ಇಂತಹ  ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ, ಸಮಾನತೆ, ಸಬಲೀಕರಣ ಮತ್ತು ಅಭಿವೃದ್ಧಿ (ಸೀಡ್) ವಿಭಾಗದ ಬೆಂಬಲದೊಂದಿಗೆ ಕೋಲ್ಕತ್ತಾದ ಫೌಂಡೇಶನ್ ಫಾರ್ ಇನ್ನೋವೇಶನ್ಸ್ ಇನ್ ಹೆಲ್ತ್ ಸಂಸ್ಥೆಯು ಐಐಟಿ ಗುವಾಹಟಿ, ಡಾ. ಕೆವಿನ್ ಧಲಿವಾಲ್, ಎಡಿನ್ ಬರ್ಗ್ ವಿಶ್ವವಿದ್ಯಾಲಯ ಮತ್ತು ಡಾ. ಡಬ್ಲ್ಯುಎಚ್ಒ ಬಂಡೋಪಾಧ್ಯಾಯ ( ಹಿಂದೆ ವಿಶ್ವ ಆರೋಗ್ಯ ಸಂಸ್ಥೆ. ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯವರು) ರ ಸಹಯೋಗದೊಂದಿಗೆ   ಕೋವಿಡ್ ಸೋಂಕಿತ ರೋಗಿಯ ಲಕ್ಷಣಗಳು, ಚಿಹ್ನೆಗಳು, ಪ್ರಮುಖ ನಿಯತಾಂಕಗಳು, ಪರೀಕ್ಷಾ ವರದಿಗಳು ಮತ್ತು ಕೊಮೊರ್ಬಿಡಿಟಿಗಳನ್ನು ಅಳೆಯುವ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದೆ ಮತ್ತು ಮೊದಲೇ ನಿಗದಿಪಡಿಸಿದ ಡೈನಾಮಿಕ್ ಅಲ್ಗಾರಿದಮ್‌ನ ಪ್ರತಿಯಾಗಿ ಅನೇಕ ಬಾರಿ ಅಂಕಗಳನ್ನು (ಸ್ಕೋರ್) ತೋರಿಸುತ್ತದೆ ಮತ್ತು  ಹೀಗೆ ಕೋವಿಡ್ ಸೆವೆರಿಟಿ ಸ್ಕೋರ್ (ಸಿಎಸ್ಎಸ್) ಅನ್ನು  ನಿಗದಿಪಡಿಸುತ್ತದೆ. ಸೀಡ್ ಪ್ರಾಜೆಕ್ಟ್ ಬೆಂಬಲದ ಮೂಲಕ  ಕಡಿಮೆ ಸಂಪನ್ಮೂಲ ವ್ಯವಸ್ಥೆಗಳಿರುವ  ಪ್ರಾಥಮಿಕ ಆರೈಕೆ ಇ-ಹೆಲ್ತ್ ಚಿಕಿತ್ಸಾಲಯಗಳಲ್ಲಿ ಈ ತಂತ್ರಜ್ಞಾನವನ್ನು ಒದಗಿಸಲಾಗಿದೆ.

ಮುಂಚೂಣಿ ಆರೋಗ್ಯ ಕಾರ್ಯಕರ್ತರು ನ್ಯಾಷನಲ್ ಸ್ಕಿಲ್ಸ್ ಕ್ವಾಲಿಫಿಕೇಶನ್ಸ್ ಫ್ರೇಮ್ವರ್ಕ್ (ಎನ್ಎಸ್ ಕ್ಯೂ ಎಫ್) ಹೊಂದಿಸಿದ ಮಾದರಿಯಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (ಎನ್ಎಸ್ ಡಿಸಿ) ಯಿಂದ ಪ್ರಮಾಣೀಕರಿಸಲ್ಪಟ್ಟಿದೆ, ಈ ಎಲ್ಲಾ ನಿಯತಾಂಕಗಳನ್ನು ಟ್ಯಾಬ್ ಕಂಪ್ಯೂಟರ್ ನಲ್ಲಿ ದಾಖಲಿಸಲು ತರಬೇತಿ ನೀಡಲಾಗಿದೆ.

‘ರಿಮೋಟ್’ ತಜ್ಞ ವೈದ್ಯರು ‘ಸಿಎಸ್ಎಸ್’ ಅನ್ನು ನಿಯಮಿತವಾಗಿ ಅನೇಕ ಬಾರಿ ಮೇಲ್ವಿಚಾರಣೆ ಮಾಡುತ್ತಾರೆ, ಹೀಗಾಗಿ ಇದು ಪ್ರತಿ ರೋಗಿಗೆ ವೈದ್ಯರ ಸಮಾಲೋಚನೆಯ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ವೈದ್ಯರ ಪ್ರಯಾಣದ ಅಗತ್ಯವನ್ನು ಕಡಿಮೆ ಮಾಡುತ್ತದೆ. ಐಸಿಯು ಮತ್ತು   ವೆಂಟಿಲೇಟರ್ ಬೆಂಬಲ ಅಗತ್ಯವಿರುವ ರೋಗಿಗಳ ಆರಂಭಿಕ ಗುರುತಿಸುವಿಕೆಗೆ ಇದು ಸಹಾಯ ಮಾಡುತ್ತದೆ, ನಿರ್ಣಾಯಕ ಆರೈಕೆ ಬೆಂಬಲ ಅಗತ್ಯವಿಲ್ಲದವರಿಗೆ ಆಸ್ಪತ್ರೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಹೆಚ್ಚಿನ ಹಾಸಿಗೆಗಳು  ಆಸ್ಪತ್ರೆಯಲ್ಲಿ ಲಭ್ಯವಾಗುತ್ತವೆ.   ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲದಂತಹ ವಸತಿ ಇರುವಂತಹವರಿಗಾಗಿ, ಅಥವಾ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗದ ರೋಗಿಗಳಿಗೆ  ವೈದ್ಯಕೀಯ ನೆರವು ನೀಡಲು ಸಹ ಇದು ಸಹಾಯ ಮಾಡುತ್ತದೆ.  ಹಾಸಿಗೆಗಳು ಮತ್ತು ಆಮ್ಲಜನಕದ ಸೌಲಭ್ಯವನ್ನು ಹೊಂದಿರುವ ‘ಕೋವಿಡ್ ಕೇರ್ ಸೆಂಟರ್‌’ಗಳಿಗೆ ಈ ಸೌಲಭ್ಯವು ಒಂದು ದೊಡ್ಡ ಅನುಕೂಲವಾಗಲಿದೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,