ಮಹಿಳಾ ವಿಜ್ಞಾನಿಗಳ ಪಯಣ: ಸಾಮಾನ್ಯ ವೃತ್ತಿ ಜೀವನದಿಂದ ಪೇಟೆಂಟ್(ಹಕ್ಕುಸ್ವಾಮ್ಯ) ವೃತ್ತಿಪರರಾಗುವ ತನಕ
ಸಾಮಾನ್ಯ ವೃತ್ತಿ ಜೀವನದಿಂದ ವಿಜ್ಞಾನ ಕ್ಷೇತ್ರಕ್ಕೆ ಮರಳಿ ಸಾಧನೆಯ ಹಾದಿಯಲ್ಲಿ ಸ್ಫೂರ್ತಿದಾಯಕ ಪಯಣ ನಡೆಸಿದ 100 ಮಹಿಳಾ ವಿಜ್ಞಾನಿಗಳ ಯಶೋಗಾಥೆಯನ್ನು ದಾಖಲಿಸಿ, ಕಿರುಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಇಲ್ಲಿ ಕಾಣಿಸಿಕೊಂಡಿರುವ ಮಹಿಳಾ ವಿಜ್ಞಾನಿಗಳು ಕುಟುಂಬದ ಜವಾಬ್ದಾರಿಗಳು ಮತ್ತು ಸಾಮಾಜಿಕ ಕಾರಣಗಳಿಂದಾಗಿ ವಿಜ್ಞಾನ ರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಮುನ್ನಡೆಸಲಾಗಲಿಲ್ಲ, ಅದನ್ನು ತೊರೆಯಬೇಕಾಯಿತು. ಆದರೆ, ಹಲವಾರು ಅಡೆತಡೆಗಳ ನಡುವೆಯೂ ತಮ್ಮ ವೃತ್ತಿಜೀವನವನ್ನು ವಿಜ್ಞಾನ ರಂಗದಲ್ಲೇ ಪುನರಾರಂಭಿಸಿದ ಅವರ ಶ್ರಮದಾಯಕ ಮತ್ತು ಸ್ಫೂರ್ತಿದಾಯಕ ಪ್ರಯಾಣವನ್ನು ನಿರೂಪಿಸುವ ಈ ಕೈಪಿಡಿಯು ಇದೇ ರೀತಿಯ ಸಮಸ್ಯೆಗಳಲ್ಲಿರುವ ಅಪಾರ ಸಂಖ್ಯೆಯ ಭಾರತೀಯ ಮಹಿಳೆಯರಿಗೆ ದಾರಿದೀಪವಾಗಬಹುದು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ‘ಸಂಶೋಧನಾ ಪ್ರಗತಿಯಲ್ಲಿ ಜ್ಞಾನ ಪೋಷಣೆ ವಿಭಾಗ (ಕಿರಣ್)’ವು (ಇದೀಗ ವೈಸ್-ಕಿರಣ್ ಎಂದು ಕರೆಯಲಾಗುತ್ತದೆ) ಮಹಿಳಾ ವಿಜ್ಞಾನಿಗಳ ಯೋಜನೆ ಅಡಿ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ವಿವಿಧ ವೃತ್ತಿಗಳಿಂದ ಮರಳಲು ಬಯಸುವ ಮಹಿಳಾ ವೃತ್ತಿಪರರಿಗೆ ಬೆಂಬಲ ನೀಡುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮಹಿಳಾ ವಿಜ್ಞಾನಿಗಳ ಯೋಜನೆಯ (ಡಬ್ಲ್ಯುಒಎಸ್) ವಿವಿಧ ಘಟಕಗಳ ಮೂಲಕ, ವಿಜ್ಞಾನ ರಂಗದಲ್ಲಿ ವೃತ್ತಿ ಜೀವನ ತೊರೆಯಲು ಕಾರಣವಾದ ಪ್ರಮುಖ ಸವಾಲುಗಳನ್ನು ಬಗೆಹರಿಸಿ, ಅಂತಹ ಮಹಿಳೆಯರನ್ನು ಮತ್ತೆ ವಿಜ್ಞಾನದ ಮುಖ್ಯವಾಹಿನಿಗೆ ತರಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಹಿಳಾ ವಿಜ್ಞಾನಿಗಳ ಯೋಜನೆಯ ಸಿ ಘಟಕದಡಿ, ವೈಜ್ಞಾನಿಕ ತರಬೇತಿ ಪೂರ್ಣಗೊಳಿಸಿ, ತಮ್ಮ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿರುವ ಆಯ್ದ ಮಹಿಳೆಯರ ಯಶೋಗಾಥೆಗಳನ್ನು ಈ ಕಿರುಪುಸ್ತಕದಲ್ಲಿ ದಾಖಲಿಸಲಾಗಿದೆ.
ಈ ಕೃತಿಯಲ್ಲಿ 100 ಮಹಿಳಾ ವಿಜ್ಞಾನಿಗಳ ಯಶೋಗಾಥೆ ಒಳಗೊಂಡಿವೆ. ಜೀವನದಲ್ಲಿ ಎದುರಾದ ಅನೇಕ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿ ನಿಂತು, ವೈಜ್ಞಾನಿಕ ರಂಗದಲ್ಲಿ ಮಾಡಿರುವ ತಮ್ಮದೇ ಆದ ಸಾಧನೆಗಳನ್ನು ಇಲ್ಲಿ ಅರ್ಥಪೂರ್ಣವಾಗಿ ಸೆರೆ ಹಿಡಿಯಲಾಗಿದೆ. ಈ ಕಿರು ಪುಸ್ತಕವು ಡಿಜಿಟಲ್ ಮತ್ತು ಮುದ್ರಣ ರೂಪದಲ್ಲಿ ಲಭ್ಯವಾಗಲಿದೆ. ಮುಂಬರುವ ವರ್ಷಗಳಲ್ಲಿ ಇನ್ನು ಅನೇಕ ಯಶೋಗಾಥೆಗಳು ಎಲ್ಲರಿಗೂ ಕಾಣುವಂತೆ ಮಾಡಲಾಗುವುದು ಎನ್ನುತ್ತಾರೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊಫೆಸರ್ ಅಶುತೋಷ್ ಶರ್ಮ.
ಮಹಿಳಾ ಸಾಧಕಿಯರ ಪಯಣದ ಜತೆಗೆ, ಅವರ ಶೈಕ್ಷಣಿಕ ಅರ್ಹತೆ, ಪಠ್ಯ ವಿಷಯ ವಿಶೇಷತೆ, ಪ್ರಸ್ತುತ ಉದ್ಯೋಗ ಸ್ಥಾನಮಾನ, ಅನುಭವ, ತರಬೇತಿ ಪೂರ್ಣಗೊಳಿಸಿದ ನಂತರ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಅವರ ತಾಂತ್ರಿಕ ಅರ್ಹತೆ ಮತ್ತಿತರ ಮಾಹಿತಿಯನ್ನು ಪುಸ್ತಕವು ಒಳಗೊಂಡಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಹಿಳಾ ವಿಜ್ಞಾನಿಗಳ ಸಿ ಯೋಜನೆಗೆ ಗೌರವಾನ್ವಿತ ರಾಷ್ಟ್ರಪತಿ ಅವರು 2015ರ ನಾರಿಶಕ್ತಿ (ರಾಣಿ ಲಕ್ಷ್ಮಿಬಾಯಿ ಪ್ರಶಸ್ತಿ) ಪುರಸ್ಕಾರ ನೀಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆ ‘ತಂತ್ರಜ್ಞಾನ ಮಾಹಿತಿ, ಮುನ್ಸೂಚನೆ ಮತ್ತು ಮೌಲ್ಯಮಾಪನ ಮಂಡಳಿ(ಟಿಫಾಕ್)’ಯು ಮಹಿಳಾ ವಿಜ್ಞಾನಿಗಳ ಸಿ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಒಂದು ವರ್ಷದ ತರಬೇತಿ ನೀಡಲಾಗುತ್ತದೆ. ವಿಜ್ಞಾನ, ಇಂಜಿನಿಯರಿಂಗ್, ವೈದ್ಯಕೀಯ ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕೋರ್ಸ್|ಗಳಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿರುವ ಮಹಿಳೆಯರನ್ನು ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಆನ್|ಲೈನ್ ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ .ನಡೆಯುತ್ತದೆ. 27ರಿಂದ 45 ವಯೋಮಾನದ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಏಕಸ್ವಾಮ್ಯ(ಪೇಟೆಂಟ್) ಫೈಲಿಂಗ್, ಪ್ರಾಸಿಕ್ಯೂಷನ್ ಮತ್ತು ಇತರ ಪೇಟೆಂಟ್-ಸಂಬಂಧಿತ ಕೆಲಸಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ.
ಭಾರತದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಸೃಜಿಸಲು, ಸಂರಕ್ಷಿಸಲು ಮತ್ತು ನಿರ್ವಹಿಸಲು ಅನುವಾಗುವಂತೆ ಮಹಿಳೆಯರಿಗೆ ಯಶಸ್ವೀ ತರಬೇತಿ ನೀಡಿ, ಸಜ್ಜುಗೊಳಿಸಲಾಗುತ್ತದೆ. ಇದುವರೆಗೆ 11 ತಂಡಗಳಲ್ಲಿ ಸುಮಾರು 800 ಮಹಿಳೆಯರಿಗೆ ಯಶಸ್ವೀ ತರಬೇತಿ ನೀಡಲಾಗಿದೆ ಮತ್ತು ಸುಮಾರು 270 ಮಹಿಳೆಯರು ಪೇಟೆಂಟ್ ಏಜೆಂಟ್|ಗಳಾಗಿ ನೋಂದಣಿಯಾಗಿದ್ದಾರೆ. ಇಲ್ಲಿ ತರಬೇತಿ ಪಡೆದ ಹಲವಾರು ಮಹಿಳೆಯರು ಸ್ವಂತ ಬೌದ್ಧಿಕ ಆಸ್ತಿ ಸಂಸ್ಥೆಗಳನ್ನು ಆರಂಭಿಸಿ, ಉದ್ಯಮಶೀಲರಾಗಿದ್ದಾರೆ. ಈ ಯೋಜನೆಯು ಮಹಿಳೆಯರನ್ನು ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಿಸುತ್ತಿದೆ. ಉದ್ಯೋಗವಿಲ್ಲದೆ ಮನೆಯಲ್ಲಿ ಕುಳಿತಿದ್ದ ಮಧ್ಯ ವಯಸ್ಸಿನ ಹಲವಾರು ಮಹಿಳೆಯರು ಇದೀಗ ಬೌದ್ಧಿಕ ಆಸ್ತಿ ವಲಯದ ವೃತ್ತಿಪರರಾಗಿದ್ದಾರೆ.
ಈ ಕಿರುಪುಸ್ತಕ(ಕೈಪಿಡಿ)ವು ಇದೀಗ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೆಬ್|ಸೈಟ್ https://dst.gov.in ನಲ್ಲಿ ಲಭ್ಯವಾಗಲಿದೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network