Header Ads Widget

Responsive Advertisement

ಏಲಕ್ಕಿಯ ಸುಧಾರಿತ ತಳಿಗಳು

ಏಲಕ್ಕಿಯ ಸುಧಾರಿತ ತಳಿಗಳು

✍️.... ಡಾ. ಹೆಚ್. ಜೆ. ಅಕ್ಷಿತ ಮತ್ತು ಡಾ. ಅಂಕೇಗೌಡ ಎಸ್. ಜೆ



ಸಂಬಾರ ಪಧಾರ್ಥಗಳ ರಾಣಿ ಎಂದು ಕರೆಯಲ್ಪಡುವ ಏಲಕ್ಕಿ ಸಂಬಾರ ಪದಾರ್ಥಗಳ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಕರ್ನಾಟಕವು ಏಲಕ್ಕಿ ಕೃಷಿಯಲ್ಲಿ ಎರಡನೆಯ ಸ್ಥಾನದಲ್ಲಿದೆ. ಏಲಕ್ಕಿಯ ಸುಧಾರಿತ ಹಾಗೂ ರೈತರ ತಳಿಗಳ ಬಗೆಗಿನ ಮಾಹಿತಿಯು ಈ ಕೆಳಗಿನಂತಿದೆ. 

ಐ.ಸಿ.ಎ.ಆರ್. - ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕ್ಯಾಲಿಕಟ್

ಐ.ಸಿ.ಎ.ಆರ್. - ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಕ್ಯಾಲಿಕಟ್‌ನ ಪ್ರಾದೇಶಿಕ ಕೇಂದ್ರ, ಅಪ್ಪಂಗಳದಿಂದ ನಾಲ್ಕು ತಳಿಗಳನ್ನು ಬಿಡುಗಡೆ ಮಾಡಲಾಗಿದೆ. 

ಅಪ್ಪಂಗಳ 1 

ತಳಿಯು ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು, ಶೀಘ್ರ ಪಕ್ವಕ್ಕೆ ಬರುತ್ತದೆ ಹಾಗೂ ಹೆಚ್ಚು ಸಾಂಧ್ರ ನಾಟಿಗೆ ಸೂಕ್ತ ತಳಿಯಾಗಿದೆ. ಕರ್ನಾಟಕದಲ್ಲಿನ ಏಲಕ್ಕಿ ಬೆಳೆಯುವ ಎಲ್ಲಾ ಪ್ರದೇಶಗಳು ಮತ್ತು ಕೇರಳದ ವೈನಾಡ್ ಪ್ರದೇಶದಲ್ಲಿ ಬೆಳೆಯಬಹುದು. 

ಐಐಎಸ್‌ಆರ್ ಅವಿನಾಶ್ 

ಐಐಎಸ್‌ಆರ್ ಅವಿನಾಶ್ ತಳಿಯು ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿ ಹಾಗೂ ಈ ತಳಿಯು ಬೇರು ಕಾಂಡದ ಕೊಳೆ ರೋಗಕ್ಕೆ ರೋಗ ನಿರೋಧಕ ಶಕ್ತಿ ಹೊಂದಿದೆ. ಈ ತಳಿಯ ಕಾಯಿಗಳು ಹಸಿರು ಬಣ್ಣದ್ದಾಗಿರುತ್ತವೆ ಮತ್ತು ಈ ತಳಿಯು ಕೊಡಗು, ಉತ್ತರ ವೈನಾಡ್, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹೊಂದಿಕೊಳ್ಳುತ್ತದೆ. 

ಐಐಎಸ್‌ಆರ್ ವಿಜೇತಾ 

ಐಐಎಸ್‌ಆರ್ ವಿಜೇತಾ ತಳಿಯು ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಇದು ಕಟ್ಟೆ ರೋಗವನ್ನು ಸಹಿಸುವ ಶಕ್ತಿ ಹೊಂದಿದೆ. 

ಅಪ್ಪಂಗಳ – 2 

ಇದು ಮಲಬಾರ್ ಪ್ರಭೇಧಕ್ಕೆ ಸೇರುವ ಸಂಕರಣ ತಳಿಯಾಗಿದೆ ಹಾಗೂ ಈ ತಳಿಯು ಕಟ್ಟೆ ರೋಗಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. 


ಭಾರತೀಯ ಏಲಕ್ಕಿ ಸಂಶೋಧನ ಸಂಸ್ಥೆ (ಸಂಬಾರ ಮಂಡಳಿ):

ಐಸಿಆರ್‌ಐ-1

ಐಸಿಆರ್‌ಐ-1, ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಶೀಘ್ರ ಪಕ್ವಕ್ಕೆ ಬರುವ ಹಸಿರು ಬಣ್ಣದ ದಪ್ಪನೆಯ ಕಾಯಿಗಳನ್ನು ಹೊಂದಿದೆ. ಕೇರಳದ ದಕ್ಷಿಣ ಇಡುಕ್ಕಿ ವಲಯಕ್ಕೆ ಹೊಂದಿಕೊಳ್ಳುವ ತಳಿಯಾಗಿದೆ. 

ಐಸಿಆರ್‌ಐ-2 

ಐಸಿಆರ್‌ಐ-2, ಮೈಸೂರು ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಅಜುಕಲ್ ರೋಗಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕೇರಳದ ವಂದನ್‌ಮೇಡು ಮತ್ತು ನೆಲಿಯಂಪಾಥಿ ಹಾಗೂ ತಮಿಳುನಾಡಿನ ಅಣ್ಣಮಲೈ ಮತ್ತು ಮೇಘ ಮಲೈ ಪ್ರದೇಶಗಳಿಗೆ ಹೊಂದಿಕೊಳ್ಳುತ್ತದೆ. 

ಐಸಿಆರ್‌ಐ-3 

ಐಸಿಆರ್‌ಐ-3, ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಕೊಳೆ ರೋಗಕ್ಕೆ ರೋಗ ನಿರೋಧಕ ಶಕ್ತಿ ಹೊಂದಿದೆ. ಕರ್ನಾಟಕದ ಏಲಕ್ಕಿ ಬೆಳೆಯುವ ಪ್ರದೇಶಗಳಿಗೆ ಹೊಂದಿಕೊಳ್ಳುವ ತಳಿಯಾಗಿದೆ. 

ಐಸಿಆರ್‌ಐ-4 

ಐಸಿಆರ್‌ಐ-4, ಮಲಬಾರ್ ಪ್ರಭೇಧಕ್ಕೆ ಸೇರಿದ ತಳಿ ಹಾಗೂ ಈ ತಳಿಯು ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಹೊಂದಿಕೊಳ್ಳುತ್ತದೆ. 

ಐಸಿಆರ್‌ಐ-5

ಐಸಿಆರ್‌ಐ-5, ಮಲಬಾರ್ ಪ್ರಭೇಧದ ಸಂಕರಣ ತಳಿಯಾಗಿದ್ದು ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ಹೊಂದಿಕೊಳ್ಳುತ್ತದೆ. 

ಐಸಿಆರ್‌ಐ-6 

ಐಸಿಆರ್‌ಐ-6, ಮಲಬಾರ್  ಪ್ರಭೇಧದ ತಳಿ. ಈ ತಳಿಯು ಕೊಳೆ ರೋಗ, ಥ್ರಿಪ್ಸ್ ಮತ್ತು ಕಾಂಡ ಕೊರಕ ಕೀಟಗಳಿಗೆ ಸಾಧಾರಣ ಸಹಿಷ್ಣುತೆಯನ್ನು ಹೊಂದಿದೆ. ಈ ತಳಿಯು ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ಹೊಂದಿಕೊಳ್ಳುತ್ತದೆ. 

ಐಸಿಆರ್‌ಐ-7

ಐಸಿಆರ್‌ಐ-7, ವಜುಕ್ಕ ಪ್ರಭೇಧಕ್ಕೆ ಸೇರುವ ತಳಿಯಾಗಿದ್ದು ಕಡು ಹಸಿರು ಬಣ್ಣದ ದಪ್ಪನೆಯ ಕಾಯಿಗಳನ್ನು ಹೊಂದಿರುತ್ತದೆ.  ಐಸಿಆರ್‌ಐ – 8 

ಐಸಿಆರ್‌ಐ – 8, ತಳಿಯು ಮಲಬಾರ್ ಪ್ರಭೇಧಕ್ಕೆ ಸೇರುತ್ತದೆ ಹಾಗೂ ಅಂಡಾಕಾರದ ದಪ್ಪನೆಯ ತಿಳಿ ಹಸಿರು ಬಣ್ಣದ ಕಾಯಿಗಳನ್ನು ಹೊಂದಿರುತ್ತದೆ. 


ಏಲಕ್ಕಿ ಸಂಶೋಧನಾ ಕೇಂದ್ರ, ಕೇರಳ ಕೃಷಿ ವಿಶ್ವವಿದ್ಯಾನಿಲಯ, ಪಂಪಡಂಪಾರ, ಕೇರಳ:

ಪಿವಿ-1 

ಪಿವಿ-1, ತಳಿಯು ಮಲಬಾರ್ ಪ್ರಭೇಧಕ್ಕೆ ಸೇರುವ ತಳಿಯಾಗಿದೆ ಹಾಗೂ ಈ ತಳಿಯು ಶೀಘ್ರ ಪಕ್ವಕ್ಕೆ ಬರುವ, ಉದ್ದನೆಯ ಕಾಯಿಗಳನ್ನು ಹೊಂದಿದೆ. ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಿಗೆ ಹೊಂದಿಕೊಳ್ಳುವ ತಳಿಯಾಗಿದೆ. 

ಪಿವಿ - 2

ಪಿವಿ - 2, ವಜುಕ್ಕ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಕಡು ಹಸಿರು ಬಣ್ಣದ ಕಾಯಿಗಳನ್ನು ಹೊಂದಿದೆ. 

ಪಿವಿ-3

ಪಿವಿ-3, ತಳಿಯು ಅಂಡಾಕಾರದ ಕಾಯಿಗಳನ್ನು ಹೊಂದಿದ್ದು ಕಾಯಿ ಕೊಳೆ ರೋಗ, ಕಾಂಡ ಕೊಳೆ ರೋಗ ಮತ್ತು ಥ್ರಿಪ್ಸ್ ಕೀಟಕ್ಕೆ ಸಾಮಾನ್ಯ ಸಹಿಷ್ಣುತೆಯನ್ನು ಹೊಂದಿದೆ. 


ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, (ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ), ಮೂಡಿಗೆರೆ: 

ಮೂಡಿಗೆರೆ - 1

ಮೂಡಿಗೆರೆ - 1, ಮಲಬಾರ್ ಪ್ರಭೇಧಕ್ಕೆ ಸೇರುವ ತಳಿ. ಥ್ರಿಪ್ಸ್ ಮತ್ತು ಕಾಂಡಕೊರಕ ಕೀಟಗಳಿಗೆ ಸಹಿಷ್ಣುತೆ ಹೊಂದಿದೆ. 

ಮೂಡಿಗೆರೆ-2

ಮೂಡಿಗೆರೆ-2, ಮಲಬಾರ್ ಪ್ರಭೇಧದ ತಳಿಯಾಗಿದ್ದು, ಕಣಿವೆ ಪ್ರದೇಶದಲ್ಲಿ ಬೆಳೆಯಲು ಸೂಕ್ತ ತಳಿಯಾಗಿದೆ. 

ಮೂಡಿಗೆರೆ - 3 

ಮೂಡಿಗೆರೆ - 3 ಮಲಬಾರ್ ಪ್ರಭೇಧಕ್ಕೆ ಸೇರುವ ತಳಿ. ಥ್ರಿಪ್ಸ್ ಮತ್ತು ಕಾಂಡಕೊರಕ ಕೀಟಗಳಿಗೆ ಸಹಿಷ್ಣುತೆ ಹೊಂದಿದೆ. ಈ ಮೂರು ತಳಿಗಳನ್ನು ಕರ್ನಾಟಕದ ಏಲಕ್ಕಿ ಬೆಳೆಯಲು ಸೂಕ್ತವಾದ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. 


ರೈತರ ತಳಿಗಳು:

ನೆಲ್ಯಾಯಿನಿ ಗ್ರೀನ್ ಗೋಲ್ಡ್ 

ನೆಲ್ಯಾಯಿನಿ ಗ್ರೀನ್ ಗೋಲ್ಡ್ ತಳಿಯು ವಜುಕ್ಕ ಪ್ರಭೇಧಕ್ಕೆ ಸೇರುವ ತಳಿಯಾಗಿದ್ದು, ಹೆಚ್ಚು ಇಳುವರಿ ನೀಡುತ್ತದೆ. ಈ ತಳಿಯ ಶೇ. 80 ರಷ್ಟು ಕಾಯಿಗಳು 7 ಮಿ. ಮೀ ಗಾತ್ರಕ್ಕಿಂತ ಹೆಚ್ಚಿನದ್ದಾಗಿರುತ್ತವೆ. 

ತಿರುಥಾಲಿ 

ತಿರುಥಾಲಿ ತಳಿಯು ಮಲಬಾರ್ ಪ್ರಭೇಧದ ತಳಿ, ಮಧ್ಯಮ ದಪ್ಪನೆಯ ಗಿಳಿ ಹಸಿರು ಬಣ್ಣದ ಕಾಯಿಗಳನ್ನು ಹೊಂದಿದೆ. 

ವಂಡರ್ ಕಾರ್ಡಮಮ್ 

ವಂಡರ್ ಕಾರ್ಡಮಮ್, ಮೈಸೂರು ಪ್ರಭೇಧಕ್ಕೆ ಸೇರಿದ ತಳಿ, ಈ ತಳಿಯ ಕೊತ್ತುಗಳು 1.5 ರಿಂದ 2 ಮೀಟರಿನಷ್ಟು ಉದ್ದನಾಗಿದ್ದು ದಪ್ಪನೆಯ, ಕಡು ಹಸಿರು ಬಣ್ಣದ ಕಾಯಿಗಳನ್ನು ಹೊಂದಿರುತ್ತದೆ. 

ಪನಿಕುಲಂಗರ ಗ್ರೀನ್ ಬೋಲ್ಡ್ – 1 

ಪನಿಕುಲಂಗರ ಗ್ರೀನ್ ಬೋಲ್ಡ್ – 1 ತಳಿಯ ಕಾಯಿಗಳು ಒಣಗಿಸಿದ ನಂತರವು ಆಕರ್ಷಕ ಹಸಿರು ಬಣ್ಣವನ್ನು ಕಾಯ್ದುಕೊಳ್ಳುತ್ತವೆ. 

ಪನಿಕುಲಂಗರ ಗ್ರೀನ್ ಬೋಲ್ಡ್ – 2 

ಪನಿಕುಲಂಗರ ಗ್ರೀನ್ ಬೋಲ್ಡ್ – 2 ತಳಿಯು ಅಜುಕಲ್ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. 

ವೈಟ್ ಪ್ಲವರ್ 

ವೈಟ್ ಪ್ಲವರ್ ತಳಿಯು ವಜುಕ್ಕ ಪ್ರಭೇಧಕ್ಕೆ ಸೇರಿದ ತಳಿಯಾಗಿದ್ದು ಸಂಪೂರ್ಣವಾದ ಬಿಳಿ ಬಣ್ಣದ ಹೂವುಗಳನ್ನು ಹೊಂದಿರುತ್ತದೆ. 

ಪಿ.ಎನ್.ಎಸ್ ವೈಗೈ 

ಪಿ.ಎನ್.ಎಸ್ ವೈಗೈ ತಳಿಯಲ್ಲಿ ಶೇ. 60-70 ರಷ್ಟು ಕಾಯಿಗಳ ಗಾತ್ರ 7 ಮಿ. ಮೀ ಗಿಂತ ಅಧಿಕವಾಗಿರುತ್ತದೆ. 

ಎಲರಾಜನ್

ಎಲರಾಜನ್ ತಳಿಯು ವಜುಕ್ಕ ಪ್ರಭೇಧದ ತಳಿಯಾಗಿದ್ದು ಈ ತಳಿಯ ಶೇ 80-90 ಭಾಗ ಕಾಯಿಗಳು 8-9 ಮಿ. ಮೀ ಗಾತ್ರವನ್ನು ಹೊಂದಿರುತ್ತವೆ. 

ಪಾಲಕುಡಿ

ಪಾಲಕುಡಿ ತಳಿಯು ಗೋಲಾಕಾರದ, ಕಡು ಹಸಿರು ಬಣ್ಣದ ಕಾಯಿಗಳನ್ನು ಹೊಂದಿರುತ್ತದೆ ಹಾಗೂ ಶೇ 60 ರಷ್ಟು ಕಾಯಿಗಳ ಗಾತ್ರ 7 ಮಿ ಮೀ ಗಿಂತ ಅಧಿಕವಾಗಿರುತ್ತದೆ. 

ಪಪ್ಪಲು

ಪಪ್ಪಲು ತಳಿಯು ಶೇ 25 ರಷ್ಟು ಒಣ ಚೇತರಿಕೆಯನ್ನು ನೀಡುತ್ತದೆ ಹಾಗೂ ಈ ತಳಿಯು ಥ್ರಿಪ್ಸ್, ಕಾಂಡ ಕೊರಕ ಕೀಟ ಮತ್ತು ಕಾಯಿ ಕೊಳೆ ರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿದೆ. 

ಅರ್ಜುನ್

ಅರ್ಜುನ್ ತಳಿಯು ಸಮುದ್ರ ಮಟ್ಟದಿಂದ ಸುಮಾರು 3000 ಅಡಿ ಎತ್ತರದ ಪ್ರದೇಶದಲ್ಲಿ ಸಾಗುವಳಿ ಮಾಡಲು ಸೂಕ್ತವಾಗಿದೆ. 

ಪಚ್ಚಕಾಯಿ

ಪಚ್ಚಕಾಯಿ ತಳಿಯು ದಪ್ಪನೆಯ ಕಡು ಹಸಿರು ಬಣ್ಣದ ಕಾಯಿಗಳನ್ನು ಹೊಂದಿರುತ್ತದೆ. 


✍️.... ಡಾ. ಹೆಚ್. ಜೆ. ಅಕ್ಷಿತ ಮತ್ತು ಡಾ. ಅಂಕೇಗೌಡ ಎಸ್. ಜೆ

ಐ.ಸಿ.ಎ.ಆರ್-ಭಾರತೀಯ ಸಾಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಮಡಿಕೇರಿ, ಕೊಡಗು, ಕರ್ನಾಟಕ spices.rsa@icar.gov.in

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,