Header Ads Widget

Responsive Advertisement

ಕೊಡಗಿನ ಸ್ಮಶಾನಗಳಲ್ಲಿ ಮತ್ತೆ ಬೆಂಕಿ ಉರಿ ಅಧಿಕವಾಗದಿರಲಿ

ಕೊಡಗಿನ ಸ್ಮಶಾನಗಳಲ್ಲಿ ಮತ್ತೆ ಬೆಂಕಿ ಉರಿ ಅಧಿಕವಾಗದಿರಲಿ

✍️....ಚಮ್ಮಟೀರ ಪ್ರವೀಣ್ ಉತ್ತಪ್ಪ


( ಸಾಂದರ್ಭಿಕ ಚಿತ್ರ )

ಕೊಡಗಿಗೆ ಮದುವೆ ಸಮಾರಂಭವೆಂದು ಹೊರ ಜಿಲ್ಲೆಯ ಜನರು ಎಗ್ಗಿಲ್ಲದೆ ಬರುತ್ತಿದ್ದ, ಇಂದು ಸಂಜೆ ಗೋಣಿಕೊಪ್ಪದಲ್ಲಿ ಶಿವಮೊಗ್ಗದಿಂದ ಒಂದು ಟಿ.ಟಿ  ಜನರು ಬಂದಿದ್ದಾರೆ. ಇಲ್ಲಿನ ಲಾಡ್ಜ್ ಒಂದರಲ್ಲಿ 8ರೂಂ ಬುಕ್ ಮಾಡಿದ್ದರು. ಯಾವ ಆಧಾರದಲ್ಲಿ ಲಾಡ್ಜ್ ಬುಕ್ಕಿಂಗ್ ತೆಗೆದುಕೊಂಡರು ಗೊತ್ತಿಲ್ಲ. ಈ ವಿಷಯ ತಿಳಿದು ಇಂದು ಸಂಜೆ 8.30ಕ್ಕೆ ಗೋಣಿಕೊಪ್ಪ ಹೋಗಿ ಒಂದಷ್ಟು ವಿಚಾರಿಸಿದಾಗ ಪ್ರವಾಸಿಗರು ಎಂಬ ಮಾಹಿತಿಯನ್ನು ನೀಡಿದ್ದರು. ನಂತರ ಗೋಣಿಕೊಪ್ಪ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲು ತಿಳಿಸಿ ನಂತರ ಅಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಬಂತು. ನಂತರ ಗೊತ್ತಾದದ್ದು ಇದು ಮದುವೆ ಸಮಾರಂಭಕ್ಕೆಂದು ಹೊರ ಜಿಲ್ಲೆಯಿಂದ ಬಂದಿರುವ ಮಂದಿ ಎಂದು. ನಮ್ಮ ಕಣ್ಣಿನ ಮುಂದೆ ಇಷ್ಟೊಂದು ಅನಾಹುತಗಳು ನಡೆಯುತ್ತಿದ್ದರು ಕೊಡಗಿನ ಜನರು ಏಕೇ ಎಚ್ಚೆತ್ತುಕೊಂಡಿಲ್ಲ ಗೊತ್ತಾಗುತ್ತಿಲ್ಲ. ಈಗಾಗಲೇ ಮದುವೆಗೆ 40 ಜನರಿಗೆ ಅವಕಾಶವಿದ್ದು, ಇದನ್ನೆ ಬಳಸಿಕೊಂಡ ಕೆಲವರು ಹೊರಜಿಲ್ಲೆಯಿಂದಲೂ ತಮ್ಮವರನ್ನು ಕರೆಸಿಕೊಳ್ಳುತ್ತಿದ್ದಾರೆ ಹಾಗೂ ಹೊರ ಜಿಲ್ಲೆಯ ವಧು ವರ ಎಂದು ಇಲ್ಲಿಗೆ ಬರುತ್ತಿದ್ದಾರೆ ಎಂದು.  ಬರುವವರು ಕೂಡ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ  ಜಿಲ್ಲೆಗೆ ಆಗಮಿಸುತ್ತಿದ್ದು ಮತ್ತೊಮ್ಮೆ ಕೊಡಗಿನಲ್ಲಿ ಕೊರೋನ ಉಲ್ಬಣಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಕೆಲವು ಅಧಿಕಾರಿಗಳನ್ನು ಕೇಳಿದ್ದಾಗ ಮದುವೆಗೆ ಹೊರಜಿಲ್ಲೆಯಿಂದ ಬರಲು ಅವಕಾಶವಿದೆ ಆದರೆ ಅನುಮತಿ ಬೇಕು ಎನ್ನುತ್ತಾರೆ. ಇನ್ನು ಕೆಲವು ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ಮತ್ತೆ ಕೆಲವು ಅಧಿಕಾರಿಗಳು ಹೇಳುವಂತೆ ಹೊರಜಿಲ್ಲೆಯಿಂದ ಮದುವೆಗೆ ಬರುವವರಿಗೆ ಕೋರೊನ ತಪಾಸಣೆ ಅಗತ್ಯ ಎನ್ನುತ್ತಾರೆ.  ಆದರೆ ಈಗಾಗಲೇ ಕೊಡಗಿಗೆ ಮದುವೆಯ ನೆಪ ಮಾತ್ರವಲ್ಲ ಪ್ರವಾಸಿಗರು ಕೂಡ ಯಾವುದೇ ಪ್ರಯಾಸವಿಲ್ಲದೆ ಪ್ರವಾಸ ಬರುತ್ತಿದ್ದು, ಜಿಲ್ಲೆಯ ಬಹುತೇಕ ಗಡಿಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ಆರಾಮವಾಗಿ ಬರುತ್ತಿದ್ದಾರೆ. ಈಗಾಗಲೇ ಕೊಡಗಿನ ಅದೆಷ್ಟು ಹೋಂಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್'ಗಳಲ್ಲಿ ಜನರು ಇಷ್ಟದಂತೆ ಬಂದು ಹೋಗುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಜಿಲ್ಲೆಯ ಮೇಲೆ ಕಾಳಜಿ ಇರುವ ಕೆಲವು ಹೋಂಸ್ಟೇ ರೆಸಾರ್ಟ್ ಮಾಲಿಕರು ಸಂಪೂರ್ಣವಾಗಿ ತಿರಸ್ಕರಿಸಿ ಪ್ರವಾಸಿಗರಿಂದ ದೂರ ಉಳಿದಿದ್ದಾರೆ. ಈಗಾಗಲೇ ಕೊಡಗಿನಲ್ಲಿ ಪಾಸಿಟಿವಿಟಿ ದರ ಹಾವುಏಣಿ ಆಟದಂತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೊಡಗಿನ ಪರಿಸ್ಥಿತಿ ಹೇಗೆ ಎಂದು ಗೊತ್ತಾಗುತ್ತಿಲ್ಲ. 3ನೇ ಅಲೆಯನ್ನು ಯೋಚನೆ ಮಾಡಿದ್ದರೆ ಈಗಲೇ ಭಯವಾಗುತ್ತಿದೆ, ಒಂದಷ್ಟು ಎಚ್ಚರ ತಪ್ಪಿದ್ದರು ಮತ್ತೊಮ್ಮೆ ಕೊಡಗು ಕೆಂಪು ವಲಯಕ್ಕೆ ತಲಪುವುದರಲ್ಲಿ ಯಾವುದೇ ಸಂಶಯವಿಲ್ಲ. ಜನರ ಹಿತದೃಷ್ಟಿಯಿಂದ ಕೊಡಗಿನಲ್ಲಿ ಒಂದಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ, ಗಡಿ ತಪಾಸಣೆ ಜೊತೆಗೆ ಮದುವೆ ಸಮಾರಂಭ ನಡೆಸುವವರು ಒಂದಷ್ಟು ಯೋಚಿಸಬೇಕಿದೆ. ನಾಳೆ ನಿಮ್ಮ ಮಕ್ಕಳ ಭವಿಷ್ಟದೊಂದಿಗೆ ಇತರರ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ಹಾಗೇ ಇಲಾಖಾಧಿಕಾರಿಗಳು ಕೂಡ ಒಂದಿಷ್ಟು ಯೋಚಿಸಬೇಕಿದೆ ನಿಮಗೂ ಒಂದು ಸಂಸಾರವಿದೆ. ನಿಮ್ಮ ಸಂಸಾರದ ಜೊತೆಯಲ್ಲಿ ಕೂಡ ನೀವು ಹಾಯಾಗಿರಬೇಕೆಂದರೆ ಕೊರೋನ ತೊಲಗಲೇಬೇಕು. ನಿಮಗೂ ಕೂಡ ಸಾಕು ಸಾಕಾಗಿದೆ ಎನ್ನುವುದು ನಮಗೂ ಗೊತ್ತು. ಇಂದು ನೀವು ಒಂದಿಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ನಾಳೆ ಹಾಯಾಗಿ ಸಂಸಾರದೊಂದಿಗಿರಬಹುದು. ನನ್ನನ್ನು ಸೇರಿದಂತೆ ಕೊಡಗಿನ ಬಗ್ಗೆ ಕಾಳಜಿ ವಹಿಸುವ ಇತರರಿಗೂ ಯಾರ ಮೇಲೂ ವೈಯುಕ್ತಿಕ ದ್ವೇಶವಿಲ್ಲ, ಕಳೆದ ಕೆಲ ತಿಂಗಳು ಸ್ಮಶಾನದಲ್ಲಿ ಆರದ ಬೆಂಕಿಯನ್ನು ಒಮ್ಮೆ ಯೋಚಿಸಿ ನೋಡಿ. ಇದೀಗ ಆ ಸ್ಮಶಾನ ಒಂದಿಷ್ಟು ತಂಪಾಗುತ್ತಿದೆ, ಮತ್ತೆ ಆ ಸ್ಮಶಾನ ಹೊತ್ತಿ ಉರಿಯದಿರಲಿ ಎನ್ನುವುದು ಮಾತ್ರ ನಮ್ಮ ಕಳಕಳಿ ಹೊರತು ಬೇರೇನೂ ಇಲ್ಲ. ಅಮ್ಮೆ ಹರಸಿದ ಸೀಮೆ ನಮ್ಮದು ಇರಲಿ ನಮ್ಮದ್ದು ನಮ್ಮಲ್ಲೆ. ಕೊಡಗನ್ನು ಕೊಡಗಾಗಿಯೇ ಉಳಿಸಲು ಎಲ್ಲಾರು  ಕೈ ಜೋಡಿಸಿ🤝 ಹಾಗೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿ ಎನ್ನುವುದು ಕೊಡಗಿನ ಜನತೆಯ ಪರವಾಗಿ ಒತ್ತಾಯವಾಗಿದೆ.🙏


✍️....ಚಮ್ಮಟೀರ ಪ್ರವೀಣ್ ಉತ್ತಪ್ಪ

                   ( ಪತ್ರಕರ್ತರು)

                   📲9880967573


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,