ಕೊಡಗು ಫುಟ್ಬಾಲ್ ಕ್ಲಬ್ - ಬೆಂಗಳೂರು ಸೂಪರ್ ಡಿವಿಷನ್ ಲೀಗ್ಗೆ ಪ್ರೊಫೆಷನಲ್ ಕ್ಲಬ್ ಆಗಿ ಸೇರ್ಪಡೆ
ಕೊಡಗಿನ ಫುಟ್ಬಾಲ್ ಪ್ರಿಯರಿಗೊಂದು ಹೆಮ್ಮೆಯ ವಿಷಯ. ಜಿಲ್ಲೆಯ ಕೊಡಗು ಫುಟ್ಬಾಲ್ ಕ್ಲಬ್ ಬೆಂಗಳೂರಿನ ಸೂಪರ್ ಡಿವಿಷನ್ ಲೀಗ್ಗೆ ಪ್ರವೇಶ ಪಡೆದಿದೆ. ಕೊಡಗು ಜಿಲ್ಲೆಯಲ್ಲಿ ದಿನೇದಿನೇ ಫುಟ್ಬಾಲ್ ಪ್ರಿಯರ ಮತ್ತು ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರತಿವರ್ಷ ಫುಟ್ಬಾಲ್ ಪಂದ್ಯಾಟಗಳನ್ನು ಆಯೋಜಿಸಲಾಗುತ್ತಿದೆ ಆದರೆ ಸ್ಥಳೀಯ ಪ್ರತಿಭೆಗಳು ಮುಂದಿನ ಅವಕಾಶ ವಂಚಿತರಾಗಿ ಇಲ್ಲಿಯೇ ಕಮರಿ ಹೋಗುತ್ತಿದ್ದಾರೆ.
ಇದನ್ನು ಮನಗಂಡ ಕುಶಾಲನಗರದ ಬಳಿ ಗುಡ್ಡೆಹೊಸೂರು ಗ್ರಾಮದಲ್ಲಿರುವ ಐ.ಎನ್.ಎಸ್ ಕ್ರೀಡಾ ಸಂಸ್ಥೆಯವರು 2020-21ರ ಸಾಲಿನಲ್ಲಿ ಕೊಡಗು ಫುಟ್ಬಾಲ್ ಕ್ಲಬ್ ತಂಡವನ್ನು ಕಟ್ಟಿ ಪ್ರತಿಭಾವಂತ ಆಟಗಾರರಿಗೆ ಬೆಂಗಳೂರಿನ ಸಿ ಡಿವಿಷನ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟರು. 2020-21ರ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ಕೊಡಗು ಫುಟ್ಬಾಲ್ ಕ್ಲಬ್ ತಂಡದ ಆಟಗಾರರು ಅದ್ಭುತ ಪ್ರದರ್ಶನ ನೀಡಿದರು. ಇದನ್ನು ಗಮನಿಸಿದ ರಾಜ್ಯ ಫುಟ್ಬಾಲ್ ಸಂಸ್ಥೆಯವರು ಬೆಂಗಳೂರು ಸೂಪರ್ ಡಿವಿಜನ್ ಪಂದ್ಯಾಟದಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಮೇರೆ ಕೊಡಗು ಫುಟ್ಬಾಲ್ ಕ್ಲಬ್ ತಾರೀಕು 24-6- 2021 ರಂದು ಬೆಂಗಳೂರು ಸೂಪರ್ ಡಿವಿಜನ್ ಲೀಗಿನಲ್ಲಿ ಭಾಗವಹಿಸಲು ನೋಂದಾಯಿತ ವಾಗಿದೆ ಎಂದು ಐಚೆಟ್ಟಿರ ನರೆನ ಸುಬ್ಬಯ್ಯ (ಐ.ಎನ್.ಎಸ್) ಕ್ರೀಡಾ ಸಂಸ್ಥೆಯ ಸಂಸ್ಥಾಪಕ ಐಚೆಟ್ಟಿರ ಪೊನ್ನಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ಸೂಪರ್ ಡಿವಿಷನ್ ಲೀಗ್, ಕೋಲ್ಕತ್ತಾದ ಲೀಗ್ ಪಂದ್ಯಾವಳಿಗೆ ಸಮಾನವಾಗಿದ್ದು ; ಸಂತೋಷ್ ಟ್ರೋಫಿ , ಐ-ಲೀಗ್, ಐಎಸ್ಎಲ್ ಮತ್ತು ರಾಷ್ಟ್ರೀಯ ತಂಡಗಳಲ್ಲಿ ಆಟಗಾರರನ್ನು ನೇಮಿಸಿಕೊಳ್ಳಲು ಬರುವ ಪ್ರತಿಷ್ಠಿತ ಸ್ಕೌಟ್ಸ್ (ಆಯ್ಕೆಗಾರರ) ಗಮನ ಸೆಳೆಯುತ್ತದೆ. ನಾವು ಯಾವಾಗಲೂ ಜಿಲ್ಲೆಯಿಂದ ಪ್ರತಿಭಾವಂತ ಆಟಗಾರರನ್ನು ಆ ವೇದಿಕೆಯಲ್ಲಿ ತೊಡಗಿಸಲು ಬಯಸಿದ್ದೆವು . ಇಂದು ಆ ವೇದಿಕೆಗೆ ನಾವು ಸೇರಿರುವುದು ಸಂತೋಷವಾಗಿದೆ. ಅನೇಕರ ಸಹಾಯವಿಲ್ಲದೆ ಇದು ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ.
ಕ್ರೀಡಾ ಅಭಿಮಾನಿಗಳಿಂದ ತುಂಬಿದ ಕೊಡಗು ಜಿಲ್ಲೆಗೆ ಫುಟ್ಬಾಲ್ನಲ್ಲಿ ಇದುವರೆಗೆ ಸೂಕ್ತ ವೇದಿಕೆ ಇರಲಿಲ್ಲ ಅದನ್ನೀಗ ಐ.ಎನ್.ಎಸ್ ಕ್ರೀಡಾಸಂಸ್ಥೆ ತುಂಬಿಕೊಟ್ಟಿದೆ. ಉತ್ತಮ ಪ್ರತಿಭೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶ್ರೀ ಪೊನ್ನಪ್ಪ ನವರು ಕೋರಿದ್ದಾರೆ.
ಕೊಡಗು ಫುಟ್ಬಾಲ್ ಕ್ಲಬ್ಬಿನ ಇಲ್ಲಿಯವರೆಗಿನ ಬೆಳವಣಿಗೆಯ ಕೀರ್ತಿ , ಇದನ್ನು ಬೆಂಬಲಿಸಿ ಪ್ರೋತ್ಸಾಹಿಸಿ , ಪೋಷಿಸಿ ದಂತಹ ದಾನಿಗಳು , ಪ್ರಾಯೋಜಕರು ಮತ್ತು ಶುಭ ಚಿಂತಕರಿಗೆ ಸಲ್ಲುತ್ತದೆ.
“ನಾವು ಮಾಡುವಂತದ್ದು ಬಹಳಷ್ಟಿದೆ, ಲೀಗ್ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ . ಐಎನ್ಎಸ್ ಕ್ರೀಡಾಸಂಸ್ಥೆ ಮುಂದಕ್ಕೆ ಬೆಂಗಳೂರು ದಿವಿಷನ್ ಮಟ್ಟದಲ್ಲಿ ಆಡಲು ಎರಡು ತಂಡಗಳನ್ನು ಹೊಂದಿರುತ್ತದೆ. ಕೊಡಗು ಫುಟ್ಬಾಲ್ ಕ್ಲಬ್, ಸೂಪರ್ ಡಿವಿಷನ್ ಮಟ್ಟದಲ್ಲಿ ಹಾಗೂ ಕೊಡಗು ಕೋಲ್ಟ್’s (COLTS) ಬೆಂಗಳೂರಿನ ಸಿ ಡಿವಿಜನ್ ಮಟ್ಟದಲ್ಲಿ ಆಡುತ್ತದೆ. ಕೊಡಗು ಕೋಲ್ಟ್’s ಅಂಡರ್ ಟ್ವೆಂಟಿ ತಂಡವಾಗಿದ್ದು, ಇದರ ಆಟಗಾರರು ಮುಂದಕ್ಕೆ ಸೂಪರ್ ಡಿವಿಷನ್ ತಂಡಕ್ಕೆ ಬೆಳೆಯಬೇಕಿದೆ. ಇದು ನಮ್ಮ ಮುಂದಿರುವ ಗುರಿ ಎಂದು ಶ್ರೀ ಪೊನ್ನಪ್ಪನವರು ತಿಳಿಸಿದ್ದಾರೆ .”
ಎರಡು ತಂಡಗಳು ಸೇರಿ 40 ಆಟಗಾರರಿಗೆ ಅವಕಾಶವಿದೆ . ಪೂರ್ತಿ ತಂಡವನ್ನು ಜಿಲ್ಲೆಯಿಂದಲೇ ಆಯ್ಕೆ ಮಾಡಿಕೊಳ್ಳುವುದು ನಮ್ಮ ಉದ್ದೇಶ. ಇದು ಸಾಧ್ಯವಾಗದಿದ್ದಲ್ಲಿ ಹೊರಗಿನಿಂದ ಕೆಲವರನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ತಂಡದ ಎಲ್ಲಾ ಆಟಗಾರರು ಜಿಲ್ಲೆಯವರೇ ಆಗಿರುವಂತೆ ಶ್ರಮವಹಿಸಲಾಗುವುದು ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ .
ಈ ದಿಶೆಯಲ್ಲಿ ಬೆಳೆಯಲು ಬಯಸುವವರು ಅಭ್ಯಾಸವನ್ನು ಈಗಿನಿಂದಲೇ ಪ್ರಾರಂಭಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಹೆಚ್ಚಿನ ವಿವರಗಳನ್ನು ಐ.ಎನ್.ಎಸ್ ಕ್ರೀಡಾ ಸಂಸ್ಥೆಯ ಕಚೇರಿಯಲ್ಲಿ ಪಡೆದುಕೊಳ್ಳಬಹುದು. ಅಥವಾ ಮೊಬೈಲ್ ನಂಬರ್ 9845002737 , 9880578554 ಅಲ್ಲಿ ಸಂಪರ್ಕಿಸಬಹುದು.
ಐಚೆಟ್ಟಿರ ಪೊನ್ನಪ್ಪ ,
ಐ.ಎನ್.ಎಸ್ ಕ್ರೀಡಾ ಸಂಸ್ಥೆ
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network