Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ 100ನೇ ವರ್ಷದ ಸಂಭ್ರಮಾಚರಣೆ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ 100ನೇ ವರ್ಷದ ಸಂಭ್ರಮಾಚರಣೆ

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಥಮವಾಗಿ ಅಂದಿನ ಸಹಕಾರಿ ಚಿಂತಕರುಗಳಾದ ಕೊಡಂದೇರ ಕುಟ್ಟಯ್ಯ, ಪುಲಿಯಂಡ ತಿಮ್ಮಯ್ಯ, ಕುಪ್ಪಂಡ ಬೆಳ್ಯಪ್ಪ, ಉದಿಯಂಡ ಮಾಚಯ್ಯ, ಇನ್ನಿತರ ಪ್ರಮುಖರ ಮುಂದಾಳತ್ವದಲ್ಲಿ 1921ರ ಜೂನ್, 28ರಂದು 45 ಸಹಕಾರ ಸಂಘಗಳು ಮತ್ತು 16 ಸದಸ್ಯರುಗಳೊಂದಿಗೆ ಕೇವಲ 4400 ರೂ. ಪಾಲು ಬಂಡವಾಳ ಮತ್ತು 10,000 ರೂ. ಠೇವಣಾತಿಯೊಂದಿಗೆ ಅಸ್ತಿತ್ವಕ್ಕೆ ಬಂದಿತು. ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ರಾವ್‌ಬಹದ್ದೂರು ಕೊಡಂದೇರ ಕುಟ್ಟಯ್ಯನವರು 1921ರಿಂದ 1927ರವರೆಗೆ ಸೇವೆ ಸಲ್ಲಿಸಿರುತ್ತಾರೆ. 1921ರ ಜೂನ್, 28ರಲ್ಲಿ ಪ್ರಾರಂಭವಾದ ಈ ಬ್ಯಾಂಕ್ 100ನೇ ವರ್ಷ ಪೂರೈಸಿದೆ. 

ಈ ಹಿನ್ನೆಲೆಯಲ್ಲಿ 2021ರ ಜೂನ್, 28ರಂದು  ಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಉದ್ದೇಶಿಸಲಾಗಿತ್ತಾದರೂ, ಕೋವಿಡ್ ಹಿನ್ನೆಲೆಯಿಂದ ಸರಳವಾಗಿ ಸ್ಥಾಪನಾ ದಿನಾಚರಣೆ  ಆಚರಿಸಲಾಯಿತು. ಅದರಂತೆ, ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು, ಪ್ರಧಾನ ವ್ಯವಸ್ಥಾಪಕರು ಮತ್ತು ಕೇಂದ್ರ ಕಚೇರಿಯ ಸಿಬ್ಬಂದಿ ವರ್ಗದವರ ಸಮ್ಮುಖದಲ್ಲಿ 100ರ ಸಂಭ್ರಮವೆಂಬಂತೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಲಾಯಿತು. 



ಇದೇ ರೀತಿ ಬ್ಯಾಂಕ್‌ನ ಕೊಡಗು ಜಿಲ್ಲೆಯಾದ್ಯಂತ ಹೊಂದಿರುವ 21 ಶಾಖೆಗಳಲ್ಲಿಯೂ ಕೇಕ್ ಕತ್ತರಿಸುವ ಮೂಲಕ ಗ್ರಾಹಕರಿಗೆ ಸಿಹಿಯನ್ನು ಹಂಚಿ ಶತಮಾನದ ಸಂಭ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಕೊಡಂದೇರ ಪಿ. ಗಣಪತಿ ಅವರು ಬ್ಯಾಂಕನ್ನು ಅಂದಿನ ದಿನಗಳಲ್ಲಿ ಸ್ಥಾಪಿಸಿದ ಸಹಕಾರಿಗಳನ್ನು ನೆನೆದರಲ್ಲದೆ, "ಅಂದಿನಿಂದ ಇಂದಿನವರೆಗೆ ಆಡಳಿತ ನಡೆಸಿದ ಅಧ್ಯಕ್ಷರು, ಆಡಳಿತ ಮಂಡಳಿಯನ್ನು ನೆನೆಯುತ್ತಾ, ಸಿಬ್ಬಂದಿಗಳು ಮತ್ತು ಗ್ರಾಹಕರ ಸಹಕಾರದಿಂದ ಬ್ಯಾಂಕ್ 100 ವರ್ಷಗಳನ್ನು ಪೂರೈಸಲು ಸಾಧ್ಯವಾಯಿತೆಂದು,'' ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

"ಶತಮಾನೋತ್ಸವ ಸಂಭ್ರಮದ ಸಾರ್ವಜನಿಕ ಕಾರ್ಯಕ್ರಮವನ್ನು 2021ರ ಆಗಸ್ಟ್, 20ರಂದು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ರಾಜ್ಯದ ಸಹಕಾರ ಸಚಿವರು, ಕೊಡಗು ಜಿಲ್ಲೆ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲೆಯ ಸಹಕಾರ ಸಂಘಗಳ ಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಬ್ಯಾಂಕಿನ ನಿವೃತ್ತ ಮತ್ತು ಹಾಲಿ ಸಿಬ್ಬಂದಿಗಳ ಸಮ್ಮುಖದಲ್ಲಿ ನೆರವೇರಿಸುವುದರ ಮೂಲಕ ಸಮಾರಂಭವನ್ನು ಏರ್ಪಡಿಸಲಾಗುವುದು,'' ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,