Header Ads Widget

Responsive Advertisement

ದುರಿತ ಕಾಲದಲ್ಲಿ ರಾಜಕೀಯ ಪಕ್ಷಗಳ ನೆರವು ಅಗತ್ಯ-ನರೇನ್ ಕಾರ್ಯಪ್ಪ

ದುರಿತ ಕಾಲದಲ್ಲಿ ರಾಜಕೀಯ ಪಕ್ಷಗಳ ನೆರವು ಅಗತ್ಯ-ನರೇನ್ ಕಾರ್ಯಪ್ಪ

ಕಾಂಗ್ರೆಸ್ ನಿಂದ ವಿಕಲಚೇತನರಿಗೆ ಆಹಾರ ಕಿಟ್ ವಿತರಣೆ

( ಬಾಳೆಲೆ ಸಮೀಪದ ಕೊಪ್ಪಲುವಿನಲ್ಲಿ ಆಹಾರ ಕಿಟ್ ವಿತರಿಸಿದ ಸಂದರ್ಭ)

ಪೊನ್ನಂಪೇಟೆ: ಪಕ್ಷ ರಾಜಕಾರಣ ಮಾತ್ರ ರಾಜಕೀಯ ಪಕ್ಷಗಳ ಆದ್ಯತೆಯಾಗಿರಬಾರದು.  ದುರಿತ ಕಾಲದಲ್ಲಿ ಸಂಕಷ್ಟ ಅನುಭವಿಸುವ ಜನರ ಕಣ್ಣೀರು ಒರೆಸುವ ಕೆಲಸಗಳನ್ನೂ ರಾಜಕೀಯ ಪಕ್ಷಗಳು ಮಾಡುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕರಾದ ಅಜ್ಜಿಕುಟ್ಟೀರ ಎಸ್. ನರೇನ್ ಕಾರ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ಕಾಲದ ಸಂಕಷ್ಟ ಎದುರಿಸುತ್ತಿರುವ ವಿಕಲಚೇತನರಿಗೆ ಮತ್ತು ಅವರ ಕುಟುಂಬದವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಎ. ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ ಆಹಾರ ಕಿಟ್ ಗಳನ್ನು ಪೊನ್ನಂಪೇಟೆ ತಾಲೂಕಿನ ಬಾಳೆಲೆ ಮತ್ತು ಮಾಯಮುಡಿ ಗ್ರಾ. ಪಂ. ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ  ವಿತರಿಸಿ ಮಾತನಾಡಿದ ಅವರು, ಜನ ಜೀವನವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೋವಿಡ್ ನಿಂದಾಗಿ ಇಂದು ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಪೈಕಿ ಬಹಳಷ್ಟು ಜನರು ತಮ್ಮ ಸಂಕಷ್ಟವನ್ನು ಯಾರೊಂದಿಗೂ ಹೇಳಿಕೊಳ್ಳದ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ಲಾಕ್ ಡೌನ್ ನಿಂದಾಗಿ ಜನ ಅನುಭವಿಸುತ್ತಿರುವ ಯಾತನೆಗಳನ್ನು ಅರ್ಥೈಸಿಕೊಂಡಿರುವ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಎ.ಎಸ್. ಪೊನ್ನಣ್ಣ ಅವರು ತೊಂದರೆ ಅನುಭವಿಸುತ್ತಿರುವ ಜನರ ಕಣ್ಣೀರು ಒರೆಸುವ ಪ್ರಯತ್ನದ ಭಾಗವಾಗಿ ಈ ಆಹಾರ ಕಿಟ್ ಗಳನ್ನು ಪ್ರಾಯೋಜಿಸಿದ್ದಾರೆ. ಅರ್ಹರಿಗೆ ಈ ಸೌಲಭ್ಯ ದೊರೆಯುವುದರ ಮೂಲಕ ಉದ್ದೇಶ ಈಡೇರಬೇಕು ಎಂಬ ಕಾರಣದಿಂದ ಸಂತ್ರಸ್ತರ ಮನೆ ಬಾಗಿಲಿಗೆ ತೆರಳಿ ಕಿಟ್ ಗಳನ್ನು  ವಿತರಿಸಲಾಗುತ್ತಿದೆ ಎಂದು ನರೇನ್ ಕಾರ್ಯಪ್ಪ  ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ. ಎನ್. ಪ್ರತ್ಯು ಅವರು ಮಾತನಾಡಿ, ಕೋವಿಡ್ ನಿಂದಾಗಿ ಕಳೆದ ವರ್ಷವೂ ಲಾಕ್ಡೌನ್ ಆದ ಸಂದರ್ಭದಲ್ಲಿ ಬಡಜನರಿಗೆ ಸಹಾಯ ಕಲ್ಪಿಸಿದ ಎ. ಎಸ್. ಪೊನ್ನಣ್ಣ ಅವರು, ಈ ಬಾರಿಯೂ ತಾಲೂಕಿನ ವಿಕಲಚೇತನರಿಗೆ ನೆರವು ನೀಡುತ್ತಿದ್ದಾರೆ. ಆದ್ದರಿಂದ ಬಡ ಜನತೆ ಆತಂಕ ಪಡುವ ಅಗತ್ಯವಿಲ್ಲ. ಮುಂದೆಯೂ ಸಂಕಷ್ಟ ಅನುಭವಿಸುವ ಜನರಿಗೆ ನೆರವು ನೀಡಲು ಕಾಂಗ್ರೆಸ್ ಪಕ್ಷ ಕೈಜೋಡಿಸಲಿದೆ ಎಂದು ಹೇಳಿದರು. 

4 ಜನರಿಗೆ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ವಿಕಲಚೇತನರಿಗೆ ಕಾಂಗ್ರೆಸ್ ಪ್ರಮುಖರ ತಂಡ ಅವರ ಮನೆಗಳಿಗೆ ಭೇಟಿ ನೀಡಿ ಹಸ್ತಾಂತರಿಸಿತು. ಸಂತ್ರಸ್ತರಿಗೆ ಕಿಟ್ ಗಳನ್ನು ವಿತರಿಸಿದ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಬಾಳೆಲೆಯ ಕಾಂಗ್ರೆಸ್ ಮುಖಂಡ ಆದೇOಗಡ ವಿನು ಉತ್ತಪ್ಪ ಮೊದಲಾದವರು ಹಾಜರಿದ್ದರು.


✍️....ರಫೀಕ್ ತೂಚಮಕೇರಿ

( ರಫೀಕ್ ತೂಚಮಕೇರಿ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,