Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾರ್ಮಿಕರಿಗೆ ಲಸಿಕೆ ನೀಡಲು ಯಶಸ್ವಿಯಾದ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು

ಶ್ರಿಮಂಗಲ ಪ್ರಾಥಮಿಕ ಅರೋಗ್ಯ ಕೆಂದ್ರದ ವ್ಯಾಪ್ತಿಯಲ್ಲಿ ಬರುವ ಕುರ್ಚಿ ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಸುತ್ತಮುತ್ತಲಿನ ಕಾರ್ಮಿಕರಿಗೆ ಲಸಿಕೆ ನೀಡಲು ಯಶಸ್ವಿಯಾದ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು 



ಕಳೆದ ಕೆಲವು ದಿವಸಗಳಿಂದ ಕೊಡಗು ಜಿಲ್ಲೆ ಯಾದ್ಯಂತ ದಾಖಲೆಗಳು ಇಲ್ಲದ ಕಾರ್ಮಿಕರಿಗೆ ಹಾಗೂ ದಾಖಲೆ ಇರುವ ಕಾರ್ಮಿಕರಿಗೆ ಲಸಿಕೆ ‌ನೀಡಲು ಅರೋಗ್ಯ ಇಲಾಖೆಯ ಅಧಿಕಾರಿಗಳು ಶಾಸಕರು ಹರಸಾಹಸ ಪಟ್ಟು ಕಾರ್ಮಿಕರ ಮನವೊಲಿಸಿ ಲಸಿಕೆ ನೀಡುತ್ತಿದ್ದರು ಅದೇ ರೀತಿ ಕುರ್ಚಿ ಗ್ರಾಮದ 2ನೇ ಅಂಗನವಾಡಿಯ ಸುತ್ತಮುತ್ತಲಿನ ಕಾರ್ಮಿಕರು ಲಸಿಕೆ ಪಡೆಯಲು ನಿರಾಕರಿಸಿದರು ಇವರ ಮನವೊಲಿಸಲು ಸ್ಥಳೀಯ ಮುಖಂಡರ ಸಹಾಯ ಪಡೆದ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಮಿಕರ ಮನವೊಲಿಸಿ 3 ದಿನದಿಂದ ಮದ್ಯಪಾನ ಮಾಡದಂತೆ ಮನವಿಮಾಡಿದರು ಇದಕ್ಕೆ ಒಪ್ಪಿ ಮದ್ಯಪಾನ ಮಾಡದೆ ಇರುವ ಕಾರ್ಮಿಕರ ಮಾಹಿತಿಯನ್ನು ಇವತ್ತು ಜಿಲ್ಲೆಯ ಲಸಿಕೆ ವಿತರಣಾ ಮುಖ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿ 46 ಜನರಿಗೆ ಇವತ್ತು ಲಸಿಕೆಯನ್ನು ನೀಡುವಂತೆ ಮನವಿಮಾಡಿ ತಾಲೂಕು ಅರೋಗ್ಯ ಅಧಿಕಾರಿಗಳ ಮೂಲಕ ಲಸಿಕೆ ತರಿಸಿ 35+2 ಕಾರ್ಮಿಕರಿಗೆ ಶ್ರಿಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯದ್ಯಾಧಿಕಾರಿ,ಅಧಿಕಾರಿಗಳು

ಸಿಬ್ಬಂದಿಗಳು  ಲಸಿಕೆ ನೀಡುವಲ್ಲಿ ಯಶಸ್ವಿಯಾದರು  9 ಕಾರ್ಮಿಕರು ಮದ್ಯಪಾನ ಮಾಡಿ  ಲಸಿಕೆ ಕೇಂದ್ರಕ್ಕೆ ಬರದ ಕಾರಣ ಆ ಹೆಚ್ಚುವರಿ ಇದ್ದ ಲಸಿಕೆ ವ್ಯರ್ಥವಾಗಬಾರದು ಎಂದು ಸ್ಥಳೀಯವಾಗಿ ಇರುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ನೀಡಲಾಯಿತು. ಹಲವು ದಿನಗಳ ಸತಪ್ರಯತ್ನದಿಂದ ಇಲ್ಲಿನ ಕಾರ್ಮಿಕರಿಗೆ ಲಸಿಕೆ ನೀಡಲು ಯಶಸ್ವಿಯಾದ ಶ್ರಿಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ,ಸಹಕರಿಸಿದ ಗ್ರಾಮಸ್ಥರಿಗೆ ಹಾಗೂ ಲಸಿಕೆ ನೀಡಿದ ತಾಲ್ಲೂಕು ಅರೋಗ್ಯ ಅಧಿಕಾರಿಗಳಿಗೆ ಹಾಗೂ ಜಿಲ್ಲೆಯ ಲಸಿಕೆ ವಿತರಣಾ ಮುಖ್ಯಸ್ಥರಿಗೆ ಗ್ರಾಮಸ್ಥರ ಪರ ಹಾಗೂ ಕಾರ್ಮಿಕರ ಪರ ಅನಂತ ಧನ್ಯವಾದಗಳು.


✍️....ಅಜ್ಜಮಾಡ ಟಿ ಚಂಗಪ್ಪ

          ಗ್ರಾಮಸ್ಥರು ಕುರ್ಚಿ ಗ್ರಾಮ, 

          ಶ್ರೀಮಂಗಲ-ಕೊಡಗು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,