Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ "ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಕ್ಕೆ ಸಮಾಪನ

ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ "ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಕ್ಕೆ ಸಮಾಪನ 

ಗಟ್ಟಿ ಸಾಹಿತ್ಯ- ಕಾವ್ಯಗಳಿಂದ ಸಮಾಜದ ಪರಿವರ್ತನೆ ಸಾಧ್ಯ : ಹೆಸರಾಂತ ಗಾಯಕ ಶಂಕರ್ ಶಾನುಭೋಗ್ 


ಕೊಡಗು ಜಿಲ್ಲಾ ‌ಲೇಖಕರ ಮತ್ತು ಕಲಾವಿದರ ಬಳಗದಿಂದ ವತಿಯಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣ‌ಗೊಳಿಸಲು ಅವಕಾಶ ಕಲ್ಪಿಸುವ ಸಲುವಾಗಿ ಗೂಗಲ್ ಮೀಟ್  ಮೂಲಕ ಒಂದು ವಾರ ಕಾಲ ಏರ್ಪಡಿಸಿರುವ "ಕೊರೋನಾ ಮರೆಯಲು ಭಾವಗೀತಾ ಸಪ್ತಾಹ"ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಶನಿವಾರ ( ಜೂ.19 ರಂದು) ಸಂಜೆ ಸಮಾಪನಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಭಾವಗೀತೆ ಹಾಡುವ ಮೂಲಕ ಸಮಾರೋಪಕ್ಕೆ ಚಾಲನೆ ನೀಡಿದ ನಾಡಿನ ಖ್ಯಾತ ಸುಗಮ ಸಂಗೀತ ಗಾಯಕ ಶಂಕರ್ ಶಾನುಭೋಗ್  ಮಾತನಾಡಿ, ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕೊಡಗು ಲೇಖಕರ ಮತ್ತು ಕಲಾವಿದರ ಬಳಗವು ಜಿಲ್ಲೆಯ ಗಾಯಕರಿಗೆ ವೈವಿಧ್ಯಮಯ ಸಾಹಿತ್ಯ ಮತ್ತು ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಗಾಯಕರಿಗೆ ಸೂಕ್ತ ಅವಕಾಶವನ್ನು ಒದಗಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಉತ್ತಮ ಸಂವಹನ ಮಾಧ್ಯಮವಾದ ಸಾಹಿತ್ಯ ಮತ್ತು ಸಂಗೀತದಿಂದ ಸಕಾರಾತ್ಮಕ ಚಿಂತನೆಗಳ ಮೂಲಕ ಸಮಾಜದಲ್ಲಿ ಪರಿವರ್ತನೆ ಕಂಡುಕೊಳ್ಳಲು ಸಾಧ್ಯ. ಡಿ.ವಿ.ಗುಂಡಪ್ಪ ಅವರ ಕಗ್ಗದ ಅರ್ಥ ವಿವರಣೆ ಹಾಗೂ ಮತ್ತಿತರ ಕವಿ - ಕಾವ್ಯಗಳು ಜನರನ್ನು ತಲುಪಿ ಸಮಾಜದ ಪರಿವರ್ತಿಸುವ ಶಕ್ತಿ ಹೊಂದಿವೆ ಎಂದರು.

ಕರೋನಾದಂತಹ ಸಂಕಷ್ಟದಲ್ಲಿ ಮಾನವೀಯತೆಯೊಂದೇ ಕರೋನಾವನ್ನು ಗಟ್ಟಿಯಾಗಿ ಎದುರಿಸಲು ಸಾಧ್ಯ ಎಂದರು. ಯಾವುದೇ ಗಾಯಕನಾಗಲೀ ಯಾವುದೇ ಆಮಿಷ, ಹಣ ಹಾಗೂ ಅಂತಸ್ತುಗಳಿಗೆ ಒಳಗಾಗದೇ ಸಂಗೀತ ಸುಧೆ ಮೂಲಕ ಸಮಾಜದ ಏಳ್ಗೆಗೆ ತೊಡಗಬೇಕು ಎಂದು ಶಾನುಭೋಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜಕ್ಕೆ ಪೂರಕವಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೊರೊನಾ ಸಂಕಷ್ಟದ ಇಂತಹ ಸನ್ನಿವೇಶದಲ್ಲಿ ಲೇಖಕರ ಬಳಗವು ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸುವ ಮೂಲಕ ಜನರ ಸಕಾರಾತ್ಮಕ ಭಾವನೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಹಮ್ಮಿಕೊಳ್ಳುತ್ತಿರುವ ವಿವಿಧ ಗಾಯನ ಕಾರ್ಯಕ್ರಮಗಳು ಯಶಸ್ಸು ಕಂಡಿರುವುದರಿಂದ ಮುಂದಿನ ದಿನಗಳಲ್ಲಿ ಕೂಡ ಬಳಗದ ವತಿಯಿಂದ ಗಾಯಕರಿಗೆ ಉತ್ತಮ ತರಬೇತಿ ನೀಡುವುದು ಸೂಕ್ತ ಎಂದು ಸಲಹೆ ನೀಡಿದರು. ಒಂದು ವಾರದ ಕಾಲ ನಡೆದ ಈ ಕಾರ್ಯಕ್ರಮದ ಮೂಲಕ ವಯಸ್ಸಿನ ಮಿತಿಯಿಲ್ಲದೆ ಮುಕ್ತವಾಗಿ ಎಲ್ಲರೂ ಹಾಡುವ ಮೂಲಕ ಪ್ರತಿದಿನ ಜಿಲ್ಲೆಯ ಶೋತೃಗಳನ್ನು ಭಾವನಲೋಕಕ್ಕೆ ಕೊಂಡೊಯ್ದಿದ್ದು ಜನರಿಗೆ ಮುದ ನೀಡಿದೆ. ಲೇಖಕರ ಬಳಗವು ವಿವಿಧ ಕಲೆ,ಸಾಹಿತ್ಯ ಚಟುವಟಿಕೆಗಳನ್ನು ಸಂಘಟಿಸುವುದು ಉಚಿತ ಎಂದರು.

ಅಧ್ಯಕ್ಷತೆ ವಹಿಸಿದ್ದ ಲೇಖಕರ ಬಳಗದ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ, ಕೊರೊನಾದ ಭೀಕರ ಸೋಂಕಿನ ಸಂದಿಗ್ದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರು ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕರೋನಾ ಮರೆಯುವ ಮೂಲಕ ಕರೋನಾ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ

ನಡೆಸಿದ ಭಾವಗೀತೆ ಗಾಯನ ಕಾರ್ಯಕ್ರಮಕ್ಕೆ ಅಭೂತಪೂರ್ವವಾಗಿ 130 ಮಂದಿ ಗಾಯಕರು ಭಾಗವಹಿಸುವ ಮೂಲಕ ಸುಶ್ರಾವ್ಯವಾಗಿ ಭಾವಗೀತೆಯ ಸಂಗೀತ ಸುಧೆ ನಡೆಸಿಕೊಟ್ಟಿದ್ದು ತುಂಬಾ‌ ಸಂತೋಷದಾಯಕವಾದುದು ಎಂದರು.

ಬಳಗದ ವತಿಯಿಂದ ಸಾಹಿತ್ಯ ಮತ್ತು ಕಲೆಗೆ  ಪೂರಕವಾಗಿ  ಕವಿ- ಕಾವ್ಯ ಪರಿಚಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದರು.

ಗಾಯಕರಾದ ಶಂಕರ್  ಅವರ ಪರಿಚಯ ಮಾಡಿದ ಜಿಲ್ಲೆಯ ಹಿರಿಯ ಗಾಯಕ ಜಿ. ಚಿದ್ವಿಲಾಸ್ ,  ಸಂಗೀತ ಕ್ಷೇತ್ರಕ್ಕೆ ಶಂಕರ್ ಶಾನುಭಾಗ್ ನೀಡುತ್ತಿರುವ ಸೇವೆ ಬಗ್ಗೆ ಗುಣಗಾನ ಮಾಡಿದರು.

ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಬಳಗದ  ಸಲಹೆಗಾರ ಟಿ.ಪಿ.ರಮೇಶ್, ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್, ಪ್ರಧಾನ ಕಾರ್ಯದರ್ಶಿ ವಿಲ್ಫ್ರಡ್ ಕ್ರಾಸ್ತಾ, ನಿರ್ದೇಶಕರಾದ ಬಿ.ಎ.ಷಂಶುದ್ದೀನ್, ಎಸ್.ಐ. ಮುನಿರ್ ಅಹ್ಮದ್, ,ಬಿ.ಎನ್.ಮನುಶೆಣೈ, ಲಿಖಾಯತ್ ಆಲಿ, ಲೋಕನಾಥ್ ಅಮೆಚೂರ್,  ಕೆ.ಟಿ.ಬೇಬಿ ಮ್ಯಾಥ್ಯೂ, ಟಿ.ಜಿ.ಪ್ರೇಮಕುಮಾರ್, ಉಮೇಶ್ ಭಟ್, ಕೆ.ಎ.ಶ್ವೇತ, ಬಿ.ಆರ್.ಜೋಯಪ್ಪ ಇತರರು ಇದ್ದರು. ಬಳಗದ ಕಾರ್ಯದರ್ಶಿ ವಿಲ್ಫರ್ಡ್  ಕ್ರಾಸ್ತಾ  ಸ್ವಾಗತಿಸಿದರು. ಬಳಗದ ಉಪಾಧ್ಯಕ್ಷೆ ಪುದಿನೆರವನ ರೇವತಿ ರಮೇಶ್  ವಂದಿಸಿದರು.ಬಳಗದ ನಿರ್ದೇಶಕ ಎಸ್.ಐ.ಮುನಿರ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು.

ತಾ.13 ರಂದು ಆರಂಭಗೊಂಡ ಈ ಗಾಯನ ಕಾರ್ಯಕ್ರಮವು ತಾ.19 ರ ವರೆಗೆ ಒಂದು ವಾರ ಕಾಲ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಬಾಲ ಪ್ರತಿಭೆಗಳು, ಉದಯೋನ್ಮುಖ ಗಾಯಕರು ಸೇರಿದಂತೆ 130 ಮಂದಿ ಭಾವಗೀತೆಯ ಗಾನಸುಧೆ ನಡೆಸಿಕೊಟ್ಟರು. ಪ್ರತಿ ದಿನ 18 ಮಂದಿ ಗಾಯಕರು ಸುಶ್ರಾವ್ಯವಾಗಿ ಭಾವಗೀತೆ ಹಾಡುವ ಮೂಲಕ ಮೆಚ್ಚುಗೆ ಪಡೆದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,