Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆ

ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆ


ಗೋಣಿಕೊಪ್ಪಲು, ಜೂ.13: ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಕಚೇರಿಯಲ್ಲಿಂದು ನೂತನ ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆಯ ಪೂರ್ವಭಾವಿ ಸಭೆ ನಡೆಯಿತು.

ವೀರಾಜಪೇಟೆ ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕೋವಿಡ್- 19 ರ ಹಿನ್ನೆಲೆ ಅಧಿಕ ಜನ ಸೇರಲು ಅವಕಾಶವಿಲ್ಲದ ಕಾರಣ ಲಾಕ್ ಡೌನ್ ತೆರವಾದ ನಂತರ ಬ್ರಹತ್ ಹೋರಾಟ ಸಮಿತಿ ಸಭೆ ಕರೆಯಲು ತೀರ್ಮಾನಿಸಲಾಯಿತು. ಗೋಣಿಕೊಪ್ಪಲು ಕೀರೆಹೊಳೆ, ಕೈಕೇರಿ ತೋಡು, ಕೈತೋಡುಗಳೂ ಸೇರಿದಂತೆ ಕೀರೆಹೊಳೆ,ಲಕ್ಷ್ಮಣತೀರ್ಥ ನದಿ ಮೂಲಕ ಕಾವೇರಿಯನ್ನು ಸೇರುವ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವ ಸಲುವಾಗಿ ಇಂದು 9 ಮಂದಿಯ ನಡುವೆ ಗಂಭೀರ ಚರ್ಚೆ ನಡೆಯಿತು.ಮುಂದೆ ಸಮಾನ ಮನಸ್ಕರ ಸುಮಾರು 25 ಮಂದಿಯನ್ನು ಆಯ್ಕೆ ಮಾಡಿ ವೇದಿಕೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಯಿತು.



ಸುದ್ದಿ ಸಂಸ್ಥೆಯ ಮುಖ್ಯಸ್ಥ ಟಿ.ಎಲ್.ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಭೆಯಲ್ಲಿ ಕೊಲ್ಲೀರ ಗೋಪಿ ಚಿಣ್ಣಪ್ಪ, ಪಡಿಕಲ್ ಕುಸುಮಾವತಿ ಚಂದ್ರಶೇಖರ್, ಜೆ.ಸೋಮಣ್ಣ, ನಾರಾಯಣ ಸ್ವಾಮಿ ನಾಯ್ಡು, ಪುಳಿಂಜನ ಪೂವಯ್ಯ ಹೊಳೆ ತೋಡು ಒತ್ತುವರಿ, ಸರ್ಕಾರಿ ಜಾಗದ ಒತ್ತುವರಿ ತೆರವು ಅಗತ್ಯ ಕುರಿತು ಮಾಹಿತಿ ಹಂಚಿಕೊಂಡರು. ಸಭೆಯಲ್ಲಿ ಹೆಚ್.ಎನ್.ಮಂಜುಳಾ, ರಾಜಕುಮಾರ್ ಉಪಸ್ಥಿತರಿದ್ದರು..ಹೆಚ್ಚಿನ ವಿವರ ಪತ್ರಿಕಾ ವರದಿಯಲ್ಲಿ ನೀಡಲಾಗುವದು.

ಸುದ್ದಿ- ಚಿತ್ರ ಮಾಹಿತಿ: ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,