Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (KAPY)

 ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ (KAPY)


ರೈತರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಪ್ರೇರೇಪಿಸುವ ದೃಷ್ಟಿಯಿಂದ ಸಾರ್ವಜನಿಕರ ಸಹಕಾರದಲ್ಲಿ ಖಾಸಗಿ ಜಮೀನುಗಳಲ್ಲಿ ಹೆಚ್ಚು ಹೆಚ್ಚು ಗಿಡ- ಮರಗಳನ್ನು ಬೆಳಸಿ, ಹಸಿರೀಕರಣದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಅರಣ್ಯ ಇಲಾಖೆ 2011-12 ನೇ ಸಾಲಿನಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಎಂಬ ವಿಶಿಷ್ಟ ಯೋಜನೆಯನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ರೈತರು, ಸಾರ್ವಜನಿಕರು ರಿಯಾಯಿತಿ ದರದಲ್ಲಿ ಹತ್ತಿರದ ಸಸ್ಯಕ್ಷೇತ್ರಗಳಿಂದ ಸಸಿಗಳನ್ನು ಪಡೆದು ಅವುಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟು ಪೋಷಿಸಿದರೆ, ಪ್ರತಿ ಬದುಕುಳಿದ ಸಸಿಗೆ ಮೊದಲನೇ ವರ್ಷದ ಅಂತ್ಯದಲ್ಲಿ ರೂ. 35/- ಗಳನ್ನು ಹಾಗೂ ಎರಡನೇ ಮತ್ತು ಮೂರನೇ ವರ್ಷದ ಅಂತ್ಯದಲ್ಲಿ ಕ್ರಮವಾಗಿ ರೂ. 40/- ಹಾಗೂ ರೂ. 50/- ಹೀಗೆ ಒಟ್ಟು ರೂ. 125/- ಗಳನ್ನು ಪ್ರೋತ್ಸಾಹ ಧನವನ್ನಾಗಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಈ ರೀತಿ ಪಡೆದ ಪ್ರೋತ್ಸಾಹ ಧನದಿಂದ ರೈತರು ಸಸಿಗಳನ್ನು ಪಡೆಯಲು ಹಾಗೂ ಅವುಗಳನ್ನು ನೆಡಲು ಖರ್ಚು ಮಾಡುವ ಹಣವನ್ನು ಮರಳಿ ಪಡೆಯಬಹುದಲ್ಲದೇ, ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟು ಬೆಳಸಿದ್ದಲ್ಲಿ ದೊಡ್ಡ ಮೊತ್ತದ ಹಣವನ್ನು ಪ್ರೋತ್ಸಾಹ ಧನವಾಗಿ ಪಡೆಯಬಹುದಾಗಿರುತ್ತದೆ. ಪ್ರೋತ್ಸಾಹ ಧನದ ಜೊತೆಗೆ ರೈತರು ಮರಗಳಿಂದ ಸಿಗುವಂತಹ ಹಣ್ಣುಗಳು, ಬೀಜ, ಮೇವು, ಉರುವಲು, ಪೋಲ್ ಗಳು, ಟಿಂಬರ್ ಇತ್ಯಾದಿಗಳಿಂದ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದಾಗಿರುತ್ತದೆ. ಪ್ರತಿ ಫಲಾನುಭವಿ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 400 ಸಸಿಗಳಿಗೆ ಪ್ರೋತ್ಸಾಹಧನ ಪಡೆಯಲು ಅರ್ಹನಾಗಿರುತ್ತಾನೆ. ಸಸಿಗಳನ್ನು ನೆಡುವ ಒಟ್ಟು ಪ್ರದೇಶಕ್ಕೆ ಸಂಬಂಧಿಸಿದಂತೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ( ಎಷ್ಟಾದರೂ ಎಕರೆಗೆ ಬೇಕಾದರೂ ಗಿಡಗಳನ್ನು ನೆಟ್ಟು ಬೆಳಸಬಹುದು)  

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ನೋಂದಣಿ ಮಾಡಿಕೊಳ್ಳಲು ಇರುವ ಪ್ರಕ್ರಿಯೆ ಏನು?

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಸಸಿಗಳನ್ನು ನೆಡುವ ಇಚ್ಛೆಯುಳ್ಳ ರೈತರು ಸಮೀಪದ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿ ನಿರ್ದಿಷ್ಟ ಪಡಿಸಿದ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು. ಅರ್ಜಿಯಲ್ಲಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕು: ಅರ್ಜಿದಾರರ ಹೆಸರು, ವಿಳಾಸ ಮತ್ತು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, ಸಸಿ ನೆಡಲು ಉದ್ದೇಶಿಸಿರುವ ಭೂಮಿಯ ಪಹಣಿ, ಭೂಮಿಯ ಕೈ ನಕ್ಷೆ, ಅಗತ್ಯವಿರುವ ಸಸಿಗಳ ವಿವರ (ಪ್ರಭೇದ, ಸಸಿಗಳ ಸಂಖ್ಯೆ, ಪಾಲಿ ಬ್ಯಾಗ್‌ಗಳ ಗಾತ್ರ ಇತ್ಯಾದಿ) ಮತ್ತು ಅರ್ಜಿದಾರರ ಬ್ಯಾಂಕ್‌ ಖಾತೆಯ ವಿವರ. ಅರ್ಜಿಯ ಜೊತೆ ನೋಂದಣಿ ಶುಲ್ಕ ರೂ. 10/- ನೀಡಬೇಕು.

ಯೋಜನೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.aranya.gov.in ಗೆ ಬೇಟಿ ನೀಡಿ. ಅಥವಾ ಅರಣ್ಯ ಸಹಾಯವಾಣಿ 1926 ಗೆ ಕರೆಮಾಡಿ‌ ಅಥವಾ ಹತ್ತಿರದ ಅರಣ್ಯ ಕಛೇರಿಗೆ ಬೇಟಿ ನೀಡಿ.

ಕೆಳಗಿನ ಲಿಂಕ್ ಮೂಲಕ ಅರಣ್ಯ ಇಲಾಖೆಯ ಎಲ್ಲಾ ನರ್ಸರಿಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸಸಿಗಳನ್ನು ನೀವು ನೋಡಬಹುದು.

https://t.co/uzPonD8VKV

ಕೆಳಗಿನ ಲಿಂಕ್‌ನೊಂದಿಗೆ ನೀವು ಹತ್ತಿರದ ಅರಣ್ಯ ಇಲಾಖೆಯ ನರ್ಸರಿಯನ್ನು ಕಾಣಬಹುದು.

https://t.co/8rnlPHg90y https://t.co/b180gozs0h

ರಿಯಾಯಿತಿ ದರದಲ್ಲಿ ಸಾರ್ವಜನಿಕರಿಗೆ ಮೈಸೂರು ಅರಣ್ಯ ವಿಭಾಗದ ವಿವಿಧ ನರ್ಸರಿಗಳಲ್ಲಿ ಲಭ್ಯವಿರುವ ವಿವಿಧ ಪ್ರಭೇದದ ಸಸಿಗಳು ಹಾಗೂ ಅವುಗಳ ಬೆಲೆಯ ವಿವರ :

ಲಭ್ಯವಿರುವ ಸಸಿಗಳು : 

ಮಹಾಗನಿ, ತೇಗ, ಶ್ರೀಗಂಧ, ಸಿಲ್ವರ್ ಓಕ್, ಹೆಬ್ಬೇವು, ಹಲಸು, ನೇರಳೆ, ದಾಳಿಂಬೆ, ಸೀಬೆ, ಸೀತಾಫಲ, ನಲ್ಲಿ, ನಿಂಬೆ, ಪರಂಗಿ, ನುಗ್ಗೆ, ಬೇವು, ಹೊಂಗೆ, ಅತ್ತಿ, ಅರಳಿ, ಹುಣಸೆ, ಕಾಡು ಬಾದಾಮಿ, ಪೆಲ್ಟೋಪಾರ್ಮ್, ಬುಗುರಿ, ಟಬೂಬಿಯಾ ರೋಸಿಯಾ, ಗುಲ್ಮೊಹರ್, ಜಕರಂಡ, ಗಾಳಿಚಂದ, ಆಕಾಶ ಮಲ್ಲಿಗೆ, ಹೊಳೆ ದಾಸವಾಳ, ಹೊಳೆಮತ್ತಿ, ಹೊನ್ನೆ, ಹಿಪ್ಪೆ, ಬಿದಿರು  ಇತ್ಯಾದಿ.

ಬೆಲೆ : 

6×9" (ಪಾಲಿಥೀನ್ ಬ್ಯಾಗ್ ಸೈಜ್) ಅಳತೆಯ ಪ್ರತಿ ಗಿಡಗಳಿಗೆ ₹ 1 

8×12" ಅಳತೆಯ ಪ್ರತಿ ಗಿಡಕ್ಕೆ ₹ 3.

For. more details please contact DCF. Social Forestry. Madikeri. Divison Aranya Bhavan Madikeri. Kodagu District.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,