Header Ads Widget

Responsive Advertisement

ಬ್ರಿಜೇಶ್ ಕಾಳಪ್ಪ ಕಾಳಜಿ : ಕೊಡಗು ಜಿಲ್ಲೆಗೆ ಬಂತು ಜೀವರಕ್ಷಕ ಬಂಡಿ :

ಬ್ರಿಜೇಶ್ ಕಾಳಪ್ಪ ಕಾಳಜಿ : ಕೊಡಗು ಜಿಲ್ಲೆಗೆ ಬಂತು ಜೀವರಕ್ಷಕ ಬಂಡಿ :



ಸುಪ್ರೀಂ ಕೋರ್ಟ್ ನ ಖ್ಯಾತ ವಕೀಲರು ,ಎಐಸಿಸಿ ವಕ್ತಾರರೂ ,ಆದ ಪಾಲಚಂಡ ಬ್ರಿಜೇಶ್ ಕಾಳಪ್ಪ ನವರ ಕಾಳಜಿಯಿಂದ ಕೊಡಗು ಜಿಲ್ಲೆಗೆ ಜೀವರಕ್ಷಕ ಬಂಡಿ ಇಂದು ಬಂದಿದೆ .ಏಕಕಾಲದಲ್ಲಿ ಸುಮಾರು ಮೂವತ್ತು ಕೋರೊನಾ ರೋಗಿಗಳಿಗೆ ಉನ್ನತ ಚಿಕಿತ್ಸೆ ನೀಡುವ ವ್ಯವಸ್ಥೆ ಹೊಂದಿರುವ ಬಸ್ಸನ್ನು ಬ್ರಿಜೇಶ್ ಕಾಳಪ್ಪನವರು ಜಿಲ್ಲಾಡಳಿತ ಕ್ಕೆ ಹಸ್ತಾಂತರಿಸುವ ಮೂಲಕ ಕೊವಿಡ್ ಮೂರನೇ ಅಲೆಯನ್ನು ಎದುರಿಸಲು ಸಿದ್ದತೆ ನಡೆಸಿರುವ ಜಿಲ್ಲಾಡಳಿತಕ್ಕೆ ನೆರವಾಗಿ ತಮ್ಮ ತಾಯ್ನಾಡಿನ ಜನತೆಯ ಅಭಿಮಾನಕ್ಕೆ ಭಾಜನರಾಗಿದ್ದಾರೆ .

ಕೋವಿಡ್ ಎರಡನೇ ಅಲೆಯಲ್ಲಿ ಜಿಲ್ಲೆಯ ಅನೇಕ    ಕೋವಿಡ್ ಸೋಂಕಿತರು ಜಿಲ್ಲಾಸ್ಪತ್ರೆಗೆ ಬಂದು ಬೆಡ್ ,ಆಕ್ಸಿಜನ್ ವ್ಯವಸ್ಥೆಯಿಲ್ಲದೆ ದಿನಗಟ್ಟಲೆ ಆಸ್ಪತ್ರೆ ಆವರಣದಲ್ಲಿ ಕಾದು ಸಂಕಟ ಪಟ್ಟಿದನ್ನು ಮಾಧ್ಯಮದ ಮುಖಾಂತರ ಗಮನಿಸಿದ್ದ ಬ್ರಿಜೇಶ್ ಮೂರನೇ ಅಲೆಯನ್ನು ಇಂತಹ ಅಭಾಸದಿಂದ ತಪ್ಪಿಸಲು ತಮ್ಮ ಕುಟುಂಬ ಸ್ನೇಹಿತರಾದ ಮಾಜಿ ಸಚಿವರಾದ ಎಂ ಕೃಷ್ಣಪ್ಪ ಹಾಗೂ ಅವರ ಪುತ್ರ ಮಾಜಿ ಶಾಸಕರಾದ ಪ್ರಿಯ ಕೃಷ್ಣಪ್ಪ ನವರೊಂದಿಗೆ ಸಹಭಾಗಿತ್ವದಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಪ್ರಪ್ರಥಮ ವಾಗಿ ಕೊಡಗು  ಜಿಲ್ಲೆಗೆ ಸುಸಜ್ಜಿತ ಆಕ್ಸಿಜನ್ ಬಸ್ಸು  ನೀಡಿ ತಮ್ಮ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ 

ಸುಪ್ರೀಂ ಕೋರ್ಟ್ ನಲ್ಲಿ ಕಾವೇರಿ ವಕೀಲರೆಂದು ಪ್ರಸಿದ್ದರಾಗಿರುವ ಇವರು ಕಾವೇರಿ ವಿವಾದದ ಕುರಿತು ಕರ್ನಾಟಕ ರಾಜ್ಯದ ಪರವಾಗಿ  ಸಮರ್ಥ ವಾದಮಂಡನೆ ಮಾಡಿ ತೀರ್ಪು ರಾಜ್ಯದ ಪರವಾಗಿ ಹೊರಬೀಳುವಂತೆ ಮಾಡಿ ಕನ್ನಡಿಗರ ಅಪಾರ ಮೆಚ್ಚುಗೆಗಳಿಸಿದ್ದರು .

ಹರ್ಯಾಣ ರಾಜ್ಯದ ಅಡ್ವೋಕೆಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿ  ಕನ್ನಡಿಗರ ಕೀರ್ತಿಯನ್ನು ಉತ್ತರ ಭಾರತಕ್ಕೆ ಪ್ರಸರಿಸಿದ್ದರು .ಸಿ ಎನ್ ಸಿ  ಸೇರಿದಂತೆ ಅನೇಕ ಕೊಡಗಿನ ಹೋರಾಟಗಳಿಗೆ ದೆಹಲಿಯಲ್ಲಿ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ಕೊಡಗು ಜಿಲ್ಲೆ ರಾಷ್ಟ್ರೀಯ ಮಾನ್ಯತೆ   ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ .2020 ರ ಲಾಕ್ ಡೌನ್ ಸಂಧರ್ಭದಲ್ಲಿ ಅನೇಕ ಬಡ ಕುಟುಂಬಕ್ಕೆ ಸಹಾಯ ಹಸ್ತನೀಡಿದ್ದ ಬ್ರಿಜೇಶ್ ಕಾಳಪ್ಪ ನವರು ಮತ್ತೊಮ್ಮೆ ಜನಪರ ಕಾರ್ಯ ಮಾಡುವ ಮೂಲಕ ಕೊಡಗಿನ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ. ಬ್ರಿಜೇಶ್ ಕಾಳಪ್ಪನವರಿಗೆ ಹಾಗೂ ಅವರಿಗೆ ಸಹಕರಿಸಿದ ಎಂ ಕೃಷ್ಣಪ್ಪ ಮತ್ತು ಪ್ರಿಯ ಕೃಷ್ಣಪ್ಪ ರವರಿಗೆ ಸಮಸ್ತ ಕೊಡಗಿನ ಜನತೆಯ ಪರವಾಗಿ ಧನ್ಯವಾದಗಳು.


ಬರಹ: ✍️....ತೆನ್ನೀರಾ ಮೈನಾ

( ತೆನ್ನೀರಾ ಮೈನಾ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,