ಜಡಿ ಮಳೆಯಲ್ಲೂ ಹೀಗೊಂದು ವಿನೂತನ ಶ್ರಮದಾನ
ಸಾಧಾರಣವಾಗಿ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ರಸ್ತೆಗಳು ಗುಂಡಿ ಬಿದ್ದರೆ ನಗರಸಭೆಯವರು ರಸ್ತೆ ಗುಂಡಿ ಮುಚ್ಚುವವರೆಗೆ ಆ ರಸ್ತೆ ಗುಂಡಿಗಳು ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ನಿತ್ಯ ನರಕ ಯಾತನೆಯ ಅನುಭವವು ತಲ ತಲಾಂತರಗಳಿದ ನಡೆದು ಕೊಂಡು ಬಂದಿರುವುದು ಸಹಜ.
ಕಳೆದ ಎರಡು ವರ್ಷಗಳಿಂದ ಚುನಾವಣೆ ನಡೆಯದೆ ಜನಪ್ರತಿನಿಧಿಗಳಿಲ್ಲದೆ ಮಡಿಕೇರಿ ನಗರಸಭೆ ಆಡಳಿತ ಅಷ್ಟಕಷ್ಟೆ ಆಗಿತ್ತು. ಆದರೆ ಕಳೆದ ಏಪ್ರಿಲ್ 27ರಂದು ಮಡಿಕೇರಿ ನಗರಸಭೆಗೆ ಚುನಾವಣೆ ನಡೆದು ಪ್ರತಿನಿಧಿಗಳು ಆಯ್ಕೆಯಾಗಿ ಬಂದಿದ್ದಾರೆ. ಅಷ್ಟರಲ್ಲಿ ಕೊರೋನಾ ಎರಡನೇ ಅಲೆಯ ಆರ್ಭಟದಿಂದ ನಗರಸಭೆಯ ಆಡಳಿತಕ್ಕೆ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ನಡೆಯದೆ, ಆಡಳಿತ ಮಂಡಳಿ ರಚನೆಯಾಗದೆ ನೆನೆಗುದಿಗೆ ಬಿದ್ದಿದೆ.
ಆದರೆ ಈಗ ಮಳೆಗಾಲದ ಸಮಯ ಕಾಮಗಾರಿಗಳಿಗೆ ಟೆಂಡರ್ ಕರೆದು ಯಾವುದೇ ರೀತಿಯ ಕಾಮಗಾರಿಗಳನ್ನು ನಡೆಸುವುದು ಕಷ್ಟದ ಕೆಲಸ. ಏನೇ ಹೊಸ ಹಾಗೂ ದುರಸ್ಥಿ ಕಾಮಗಾರಿಗಳು ಮಳೆಗಾಲದ ನಂತರವೇ. ಅಷ್ಟರವರಗೆ ಈ ಗುಂಡಿಬಿದ್ದ ರಸ್ತೆಗಳಿಗೆ ತಾತ್ಕಾಲಿಕವಾದ ಕಾಯಕಲ್ಪಕ್ಕೆ ಮಡಿಕೇರಿ ನಗರಸಭೆಯ ವಾರ್ಡ್ ನಂ. 6ರ ನಗರ ಸಭಾ ಸದಸ್ಯರಾದ ಕೆ. ಎಸ್ ರಮೇಶ್‌ರವರ ನೇತ್ರತ್ವದಲ್ಲಿ ಮಡಿಕೇರಿ ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 5 ಮತ್ತು 6 ರಲ್ಲಿ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಲಾಯಿತು. ಜಡಿ ಮಳೆಯಲ್ಲಿ ಹೀಗೊಂದು ವಿನೂತನ ಶ್ರಮದಾನದ ಮುಖಾಂತರ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣ ವ್ಯಾಪ್ತಿಯಿಂದ ಕನ್ನಂಡಬಾಣೆಯ ಪಂಪ್‌ಹೌಸ್‌ವರೆಗಿನ ರಸ್ತೆಯ ಗುಂಡಿಗಳನ್ನು ಮುಚ್ಚಲಾಯಿತು.
ಈ ಶ್ರಮದಾನದಲ್ಲಿ ಮೋಹನ್ ಕೆ.ಕೆ, ದಿನೇಶ್ ನಲ್ಲನ, ಕನ್ನಿಕೆ ದಿನೇಶ್, ಚಿಲ್ಲನ ಯಾದವ, ಅರುಣ್ ಕೂರ್ಗ್, ಆಟೋ ರಾಜ, ಪ್ರಸನ್ನ, ಸಿ.ಎನ್.ವಾಸು, ಕುಮಾರ್, ಲಿವಿನ್, ಪವನ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network