ಕೊಡಗಿನ ಪತ್ರಕರ್ತ ಟಿ.ಎಲ್. ಶ್ರೀನಿವಾಸ್‌ಗೆ "ಯೋಗಿ ಸೇವಾ ರತ್ನ" ಪ್ರಶಸ್ತಿ
ಕೊಡಗು ಜಿಲ್ಲೆಯಲ್ಲಿ ಕಳೆದ 32 ವರ್ಷದಿಂದ ಪತ್ರಕರ್ತರಾಗಿ, ವಿವಿಧ ಜಿಲ್ಲೆ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ ಮತ್ತು ಸಮಾಜ ಮುಖಿ ಕೆಲಸದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಇವರಿಗೆ ಬೆಂಗಳೂರು ಶೇಷಾದ್ರಿಪುರಂ ನ ಸದ್ಗುರು ಶ್ರೀ ಯೋಗಿ ನಾರಾಯಣ ಸೇವಾ ಟ್ರಸ್ಟ್ ನ 7 ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕೊಡಗು ಜಿಲ್ಲೆಯಲ್ಲಿ
ಮಾಡಲಾದ ಸಾಧನೆಯನ್ನು ಗುರುತಿಸಿ ತಾ.14 ರಂದು ' ಯೋಗಿ ಸೇವಾ ರತ್ನ..2021' ಪ್ರಶಸ್ತಿಯನ್ನು ಟ್ರಸ್ಟ್ ನ ಗೌರವಾಧ್ಯಕ್ಷ ಆರ್.ಕ್ರಷ್ಣ ಪ್ರದಾನ ಮಾಡಿದರು.
ಕನ್ನಡ ಪ್ರಭದಲ್ಲಿನ ವರದಿಗಾಗಿ 2011 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಅಂದಿನ ಮುಖ್ಯಮಂತ್ತಿ ಡಿ.ವಿ.ಸದಾನಂದ ಗೌಡ ಅವರಿಂದ ಸ್ವೀಕರಿಸಿದ ಟಿ.ಎಲ್.ಶ್ರೀನಿವಾಸ್ ಅವರ ಸಾರ್ಥಕ ಸೇವೆಯನ್ನು ಗುರುತಿಸಿ ಕೊಡಗು ಪ್ರೆಸ್ ಕ್ಲಬ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಕೊಡಗು ಘಟಕ, ಕನ್ನಡ ಸಾಹಿತ್ಯ ಸಮ್ಮೇಳನ,ಶಿವಮೊಗ್ಗ ಬಲಿಜ ಸಂಘ, ಮೈಸೂರು ಜಿಲ್ಲಾ ಬಲಿಜ ಸಂಘ, ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳು, ಗೋಣಿಕೊಪ್ಪಲು ರೋಟರಿ ಸಂಸ್ಥೆ, ವೀರಾಜಪೇಟೆ ತಾಲ್ಲೂಕು ಪಂಚಾಯಿತಿ ,ಕೆ.ಆರ್.ನಗರ ತಾಲ್ಲೂಕು ಬಲಿಜ ಸಂಘ ಮುಂತಾದೆಡೆ ಸನ್ಮಾನಿಸಿ ಗೌರವಿಸಿದ್ದವು.
ತುಮಕೂರು ಗುರುಕುಲ ಕಲಾ ಪ್ರತಿಷ್ಠಾನ( ರಿ) ಸಂಸ್ಥೆ ವತಿಯಿಂದ ಹುಲಿಯೂರು ದುರ್ಗದಲ್ಲಿ ' ಕರ್ನಾಟಕ ಸೇವಾ ಮಾಣಿಕ್ಯ..2021 ಪ್ರಶಸ್ತಿಯನ್ನು ಫೆಬ್ರವರಿಯಲ್ಲಿ ನೀಡಿ ಗೌರವಿಸಲಾಗಿತ್ತು.
ಕೊಡಗು ಬಲಿಜ ಸಮಾಜದ ಕ್ರೀಡೋತ್ಸವ, ಜಲಪ್ರಳಯ ಸಙದರ್ಭ ಅರ್ಹ ಸಂತ್ರಸ್ತರಿಗೆ ಆಹಾರ ಕಿಟ್, ಉಡುಪು, ಇತ್ಯಾದಿ, ಕೋವಿಡ್.19 ಸಂಕಷ್ಟದ ಅವಧಿಯಲ್ಲಿ ಕೊಡಗು ಜಿಲ್ಲೆಯ ವಿವಿಧ ದಾನಿಗಳ ಸಹಕಾರದೊಂದಿಗೆ ಕೊರೋನಾ ಪಾಸಿಟಿವ್ ಪೀಡಿತ ಕುಟುಂಬಗಳ ಮನೆ ಮನೆಗೆ ತೆರಳಿ ಕಿಟ್ ವಿತರಿಸಿ ಸಾಂತ್ವನ ಹೇಳಿದ್ದರು.
ಕೊಡಗು ಜಿಲ್ಲಾ ಬಲಿಜ ಸಮಾಜ ಹಾಗೂ ಸುದ್ದಿ ಸಂಸ್ಥೆಯ ಅಧ್ಯಕ್ಷರಾಗಿರುವ ಟಿ.ಎಲ್ ಶ್ರೀನಿವಾಸ್ ಅವರು ವನ್ಯಪ್ರಾಣಿ ಸಂರಕ್ಷಣಾ ಶಿಕ್ಷಣ ಯೋಜನೆ, ಅಯುರ್ವೇದ ಪದ್ದತಿಯ ಅಗತ್ಯ, ಪ್ರಕ್ರತಿ ಶಿಬಿರ, ಚಾರಣ ಇತ್ಯಾದಿ ಕಾರ್ಯಕ್ರಮಗಳಲ್ಲಿ ತುಂಬು ಚಟುವಟಿಕೆಯೊಂದಿಗೆ ತೊಡಗಿಸಿಕೊಂಡಿದ್ದು, ಪ್ರತಿಭಾ ಕಲಾ ವೇದಿಕೆ ಮೂಲಕ ಯುವ ಜನಾಂಗವನ್ನು ಒಗ್ಗೂಡಿಸಿ ಬೀದಿ ನಾಟಕ, ಪ್ರಹಸನ, ಭಾಷಣ ಕಲೆ, ನಾಯಕತ್ವ ತರಬೇತಿ ಕಾರ್ಯಾಗಾರವನ್ನೂ ನಡೆಸುತ್ತಾ ಬಂದಿದ್ದಾರೆ.
ಕಳೆದ 20 ವರ್ಷಗಳಿಂದ ರಾಜ್ಯದ ವಿವಿಧೆಡೆ ಪ್ರವಾಸ ಮಾಡಿ ಬಲಿಜ ಸಂಘಟನೆಯನ್ನು ಬಲಪಡಿಸಲು, ಬಲಿಜ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವ ಇವರ ಸೇವೆಯನ್ನು ಮನಗಂಡು ನಮ್ಮ ಟ್ರಸ್ಟ್ ವತಿಯಿಂದ ' ಯೋಗಿ ಸೇವಾ ರತ್ನ..2021 ಪ್ರಶಸ್ತಿಯನ್ನು ಹೆಮ್ಮೆಯಿಂದ ಪ್ರದಾನ ಮಾಡುತ್ತಿರುವದಾಗಿ ಟ್ರಸ್ಟ್ ಗೌರವಾಧ್ಯಕ್ಷ ಆರ್.ಕ್ರಷ್ಣ ತಿಳಿಸಿದ್ದಾರೆ.
ಕೋವಿಡ್ ನಿಯಮದನ್ವಯ ಸರಳವಾಗಿ ಜರುಗಿದ ಕಾರ್ಯಕ್ರಮದಲ್ಲಿ ಬಲಿಜ ಬಿಂಬ ಪತ್ರಿಕೆ ಸಂಪಾದಕ ಎನ್.ಸಂಜೀವಪ್ಪ, ಟ್ರಸ್ಟ್ ನಿರ್ದೇಶಕರಾದ ಪ್ರಹಲ್ಲಿಕ ಉಪಸ್ಥಿತರಿದ್ದರು
✍️....ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network