Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಲಕ ಈ ಸ್ಥಿತಿಗೆ ಬಂದಿದ್ದು, ನಾವು ಮಾನವೀಯತೆ ತೋರಿಸಬೇಕಿದೆ. ಸಹೃದಯರ ನೆರವಿಗೆ ಮನವಿ

ಬಾಲಕ ಈ ಸ್ಥಿತಿಗೆ ಬಂದಿದ್ದು,  ನಾವು  ಮಾನವೀಯತೆ  ತೋರಿಸಬೇಕಿದೆ. ಸಹೃದಯರ ನೆರವಿಗೆ ಮನವಿ

( ಸಾಂದರ್ಭಿಕ ಚಿತ್ರ )

ಕೊಡಗಿನ ಶ್ರೀಮಂಗಲದ ಸುಮಾರು  16 ವರ್ಷದ  ಈ ಬಾಲಕನಿಗೆ ಕೆಲವು  ವರ್ಷದ ಹಿಂದೆ ಜ್ವರ ಬಂದು ಅಂಗವಿಕಲನಾಗಿದ್ದು, ಇದೀಗ  ಬುದ್ದಿಮಾಂದ್ಯನಾಗಿ  ಟೌನಿನಲ್ಲಿ  ಸುತ್ತಾಡುತ್ತಾ ಸಣ್ಣ ಪುಟ್ಟ ಕಳವು  ಮಾಡಿ  ಪ್ರತೀ ದಿನ  ಜನರಿಂದ  ಗೂಸ  ತಿನ್ನುತ್ತಿದ್ದಾನೆ. 

ಈತನ  ವಯಸ್ಸಾದ  ತಂದೆಗೆ  ಈತನ ಪೋಷಣೆ  ಸಾಧ್ಯವಾಗುತ್ತಿಲ್ಲ. ಬಡ ಕುಟುಂಬದ ಈ ಬಾಲಕ  ಭೀಕ್ಷುಕನಂತೆ  ಓಡಾಡುತ್ತಿರುವ  ದ್ರಶ್ಯ  ಏದೆ ಕಲಕುವಂತಿದೆ. ಕೆಲವು  ತಿಂಗಳ  ಹಿಂದೆ ಪೊನ್ನಂಪೇಟೆ ವಿರಾಜಪೇಟೆಯಲ್ಲಿ ಈ ಬಾಲಕ  ಸುತ್ತಾಡುತ್ತಿದ್ದ. ಈತನನ್ನು  ಆಸ್ಪತ್ರೆಗೆ ಅಥವ  ಬುದ್ದಿ ಮಾಂದ್ಯರ  ಕೇಂದ್ರಕ್ಕೆ ಕಳುಹಿಸಬೇಕಿದೆ.  ನಮ್ಮ  ಗ್ರಾಮ  ಪಂಚಾಯತಿ  ಈ ಕೆಲಸ  ಮಾಡಬೇಕು ಎಂದು ಮನವಿ. 

ವಿದ್ಯಾಭ್ಯಾಸ  ಮಾಡುತ್ತಿದ್ದ ಈ ಬಾಲಕ ಈ ಸ್ಥಿತಿಗೆ ಬಂದಿದ್ದು, ಸಹೃದಯರು ಈ ಬಾಲಕನಿಗೆ  ಸಹಾಯ  ಮಾಡಿ.  ನಾವು  ಮಾನವೀಯತೆ  ತೋರಿಸಬೇಕಿದೆ. 

ಸುದ್ದಿ- ಮಾಹಿತಿ:  ✍️.... ಎಂ.ಟಿ. ಕಾರ್ಯಪ್ಪ, ವಕೀಲರು, ಶ್ರೀಮಂಗಲ

ವಕೀಲರಾದ ಎಂ.ಟಿ. ಕಾರ್ಯಪ್ಪನವರ ಸಾಮಾಜಿಕ ಕಾಳಜಿಗೆ ಕೊಡಗಿನ ಸಹೃದಯರು ಕೈ ಜೋಡಿಸ ಬೇಕಾಗಿ "ಸರ್ಚ್‌ ಕೂರ್ಗ್‌ ಮೀಡಿಯಾ" ಈ ಮೂಲಕ ಮನವಿ ಮಾಡಿಕೊಳ್ಳುತ್ತಿದೆ.

ಕೊಡಗಿನ  ಸಹೃದಯರು ವಕೀಲರಾದ ಎಂ.ಟಿ. ಕಾರ್ಯಪ್ಪನವರನ್ನು ಈ ಸಂಖ್ಯೆಯಲ್ಲಿ: 94481 06121 ಸಂಪರ್ಕಿಸಿ ಸಹಾಯ ಹಸ್ತ ಚಾಚಿ ಎಂದು ಮತ್ತೋಮ್ಮೆ ವಿನಯ ಪೂರ್ವಕದ ಮನವಿ.  

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,