Ad Code

Responsive Advertisement

ಕಾವೇರಿ ಹೋರಾಟಗಾರ ಜಿ.ಮಾದೇಗೌಡರನ್ನು ನಾನು ಭೇಟಿ ಮಾಡಿದ ಕತೆ

ಕಾವೇರಿ ಹೋರಾಟಗಾರ ಜಿ.ಮಾದೇಗೌಡರನ್ನು ನಾನು ಭೇಟಿ  ಮಾಡಿದ ಕತೆಕಾವೇರಿ ಗಲಾಟೆ ಜೋರಾಗಿದ್ದ ಕಾಲ.ಕಾವೇರಿ ಗಲಾಟೆ ಎಂದರೆ ಮಂಡ್ಯದಲ್ಲಿ ಮಾದೇಗೌಡರದ್ದೇ ಹವಾ.

ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ಆಗಲೂ ಅತೀಯಾಗಿತ್ತು. ಈ ಹಿಂದೆ ಕಾಡಾನೆಗಳು ನಾಗರಹೊಳೆ, ಬಂಡಿಪುರದಿಂದ ಶ್ರೀರಂಗಪಟ್ಟಣ, ಪಾಂಡವಪುರ,ಮಂಡ್ಯ, ಮದ್ದೂರು, ಚೆನ್ನಪಟ್ಟಣ,ರಾಮನಗರ ಮಾರ್ಗ ಬೆಂಗಳೂರು ಸಮೀಪ ಬನ್ನೇರುಘಟ್ಟದವರೆಗೂ ಮೇವನ್ನು ಅರಸಿ ಹೋಗಿ ಬಂದು ಮಾಡುತ್ತಿದ್ದವು.ನಂತರ ಮಂಡ್ಯದ ಆನೆ ಕಾರಿಡಾರ್ ಗಳೆಲ್ಲಾ ಕಬ್ಬಿನ ಗದ್ದೆ, ಭತ್ತದ ಕ್ರಷಿ, ವಸತಿ ಪ್ರದೇಶವಾಗಿ ಆನೆ ಓಡಾಟಕ್ಕೆ ಅಡ್ಡಿ ಉಂಟಾಯಿತು.ಇತ್ತ ಕಬಿನಿ ಆಣೆಕಟ್ಟು ನಿರ್ಮಾಣದ ನಂತರ ಕಾಕನಕೋಟೆ ಕಾಡಾನೆ ಹುಲ್ಲುಗಾವಲು, ಕಬಿನಿ ಹಿನ್ನೀರಿನ ಪ್ರದೇಶ ಮುಳುಗಡೆಯಾಗಿದ್ದರಿಂದ ಕಾಡಾನೆಗಳಿಗೆ, ಇತರೆ ಸಸ್ಯಹಾರಿ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಯಿತು.ನಾಗರಹೊಳೆ ಹಾಗೂ ಬಂಡಿಪುರದ ಸರಹದ್ದಿನಲ್ಲಿರು ರೈತರ ಕ್ರಷಿ ಪ್ರದೇಶಕ್ಕೆ ಕಾಡಾನೆ ಹಿಂಡುಗಳು ಮೇವನ್ನು ಅರಸಿ ನುಸುಳಲು ಆರಂಭಿಸಿದವು.ಈಗಂತೂ ವರ್ಷಕ್ಕೆ 8/10 ಮಾನವ ಹಾನಿ ಆಗುವಷ್ಟು ಕಾಡಾನೆ ಮಾನವ ಸಂಘರ್ಷ ಅಧಿಕವಾಗಿದೆ.

ಕೊಡಗು ಮಳೆಗಾಲದಲ್ಲಿ ಅತಿವ್ರಷ್ಟಿ ಹಾಗೂ ಇತ್ತ ವನ್ಯಪ್ರಾಣಿ ಗಳಿಂದ ಇಲ್ಲಿನ ರೈತಾಪಿ ವರ್ಗ ಇನ್ನಿಲ್ಲದ ಗೋಳು ಅನುಭವಿಸತೊಡಗಿದರು.ಅತ್ತ ಮಂಡ್ಯ ಜಿಲ್ಲೆ ಮರ ಹನನದ ತಾಣವಾಗಿ ಬೋಳಾಗತೊಡಗಿತು.ಕೆಆರ್ ಎಸ್ ಆಣೆಕಟ್ಟು ನಿರ್ಮಾಣದ ಸಂದರ್ಭವೂ ಸಾವಿರಾರು ಎಕರೆ ಕಾಡುಗಳು ನಾಶವಾದವು.ಮಂಡ್ಯ ಜಿಲ್ಲೆಯ ಕ್ರಷಿಕರ ಬಾಳು ಹಸನಾಗತೊಡಗಿತು.ವರ್ಷಕ್ಕೆ ಭತ್ತ ಎರಡು ಮೂರು ಬೆಳೆ ತೆಗೆಯತೊಡಗಿದರು.ಆದರೆ, ಈಗ ಮಂಡ್ಯದ ಕಬ್ಬು ಬೆಳೆಗಾರರು ಸೂಕ್ತ ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ.

ಇದು ಸುಮಾರು‌10 ವರ್ಷ ಹಿಂದಿನ ಕತೆ.

ಮಂಡ್ಯದಲ್ಲಿ ಯಾಕೆ ಉಳಿದ ಸರ್ಕಾರಿ ಜಾಗದಲ್ಲಿ ಕಾಡು ಬೆಳೆಸಬಾರದು.ಮಂಡ್ಯದ ಜನತೆಗೆ ಉತ್ತಮ ವಾಡಿಕೆ ಮಳೆಯಾಗಲು ಕಾಡು ಅಗತ್ಯ ಎಂದು ನನಗೆ ಯೋಚನೆ ಹೊಳೆಯಿತು.

ನಾನಾಗ ನಾಗರಹೊಳೆ ವನ್ಯಜೀವಿ ಸಂರಕ್ಷಣಾ ಯೋಜನೆ ಕಾರ್ಯಕ್ರಮ ಸಂಯೋಜಕನಾಗಿ ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ಅವರೊಂದಿಗೆ ಮಂಡ್ಯದ ಕಾವೇರಿ ಹೋರಾಟಗಾರ  ಮಾದೇಗೌಡರನ್ನೂ ಭೇಟಿಯಾಗುವದು, ಮಂಡ್ಯದ ಎಲ್ಲ ಶಾಲೆಗಳಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗ್ರತಿ ಕಾರ್ಯಕ್ರಮ, ಅಲ್ಲಿನ ಮುಖ್ಯರಸ್ತೆಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸಂಘಟಿಸಿ ,ಘೋಷಣಾ ಫಲಕದೊಂದಿಗೆ ಮಂಡ್ಯದಲ್ಲಿ ಕಾಡು ಬೆಳೆಸಿ, ಕಾವೇರಿ ಉಳಿಸಿ ಆಂದೋಲನವನ್ನು ಯಶಸ್ವಿಯಾಗಿ ಸಂಘಟಿಸಿದ್ದೆ.

ಅಲ್ಲಿನ ಕಲಾಮಂದಿರದಲ್ಲಿ ಕೆ.ಎಂ.ಚಿಣ್ಣಪ್ಪ ಅವರಿಂದ ವನ್ಯಪ್ರಾಣಿ ಸಂರಕ್ಷಣೆಯ ಕುರಿತು ಸ್ಲೈಡ್ ಶೋ ಏರ್ಪಡಿಸಿದ್ದೆವು.ಅಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಕೆ.ಎಂ.ಚಿಣ್ಣಪ್ಪ ಅವರು,ತಮ್ಮು ಪೂವಯ್ಯ, ಮತ್ತು ಸಂಗಡಿಗರು ನಾವೆಲ್ಲಾ ಸೇರಿ ಮಂಡ್ಯದಲ್ಲಿ ಅರಣ್ಯ ಸಂರಕ್ಷಣೆ ಮಹತ್ವದ ಕುರಿತು ಪತ್ರಿಕಾ ಗೋಷ್ಠಿ ನಡೆಸಿದವು.ನಮ್ಮ ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು.ಈ ನಡುವೆ ಕಾವೇರಿ ಹೋರಾಟಗಾರ ಮಾದೇಗೌಡರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲು ಬೆಳಿಗ್ಗೆ 7 ಗಂಟೆಗೆ ಸಮಯ ನಿಗಧಿಯಾಗಿತ್ತು.

ಮಾದೇಗೌಡರು ಪಾನಪ್ರಿಯರಾಗಿದ್ದರು, ನಾವು ಅವರನ್ನು ಭೇಟಿ ಮಾಡಿದ ಸಂದರ್ಭ ಬೆಳಿಗ್ಗೆ ಬೆಡ್ ಕಾಫಿ ಮಾದರಿ ಗ್ಲಾಸ್ ನಲ್ಲಿ ಮೆಕ್ ಡೋವೆಲ್ ವಿಸ್ಕಿ ಯಾವದೋ ಇತ್ತು.ಓಹೋ ಕೊಡಗಿನವರು ಮದ್ಯಪ್ರಿಯರು..ಒಂದು ಪೆಗ್ ವಿಸ್ಕಿ ಹಾಕಿ ಎಂದು ಗ್ಲಾಸ್ ಎತ್ತಿ ಹಿಡಿದರು.ಆದರೆ, ನಮ್ಮ ಕೆ.ಎಂ.ಚಿಣ್ಣಪ್ಪನವರಿಗೆ ಮದ್ಯಪಾನದ ಅಭ್ಯಾಸವಿರಲಿಲ್ಲ.ನಯವಾಗಿ ತಿರಸ್ಕರಿಸಿದರು.ಎಲ್ಲರಿಗೂ ಕಾಫಿ ತರಿಸಿ ಕೊಟ್ಟರು.ಸುಮಾರು 1/2 ಗಂಟೆ ಮಾತೂಕತೆ ನಡೆಸಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕ್ರಷ್ಣ ಅವರೊಂದಿಗೆ ಮಾತನಾಡಲು ಮನವಿ ಮಾಡಿ, ವಿವರವಾದ ಮನವಿ ಪತ್ರವನ್ನೂ ನೀಡಿ ಬಂದೆವು.ಇದು ಸುಮಾರು 20 ವರ್ಷ ಹಿಂದಿನ ಕತೆ.

ಮಾದೇಗೌಡರು ಅಂದು ಮುಖ್ಯಮಂತ್ರಿ ಕ್ರಷ್ಣ ಅವರನ್ನು ಮಾತನಾಡಿದ ಮೇರೆ ಅರಣ್ಯ ಸಂರಕ್ಷಣೆ ಕಾನೂನು ಮತ್ತಷ್ಟು ಬಿಗಿಯಾಯಿತು.ಆದರೆ, ಮಂಡ್ಯಜಿಲ್ಲೆಯಾದ್ಯಂತ ಕಾಡುಬೆಳೆಸುವ ಉದ್ಧೇಶ ಇಂದಿಗೂ ಈಡೇರಲಿಲ್ಲ. ಇದೊಂದು ಕೊರಗು ವನ್ಯ ಪ್ರೇಮಿ  ಚಿಣ್ಣಪ್ಪನವರಲ್ಲಿ ಇಂದಿಗೂ ಉಳಿದುಬಿಟ್ಟಿದೆ.

✍️....ಟಿ.ಎಲ್.‌ ಶ್ರೀನಿವಾಸ್‌

         ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.


( ಟಿ.ಎಲ್.‌ ಶ್ರೀನಿವಾಸ್‌ )
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,