Header Ads Widget

ಸರ್ಚ್ ಕೂರ್ಗ್ ಮೀಡಿಯ

ಕನಾ೯ಟಕ ಬೆಳೆಗಾರರ ಒಕ್ಕೂಟದಿಂದ ಕೇಂದ್ರ ಕೖಷಿ ರಾಜ್ಯ ಸಚಿವರಿಗೆ ಮನವಿ

ಕನಾ೯ಟಕ ಬೆಳೆಗಾರರ ಒಕ್ಕೂಟದಿಂದ ಕೇಂದ್ರ  ಕೖಷಿ  ರಾಜ್ಯ ಸಚಿವರಿಗೆ ಮನವಿ 


ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ|| ಹೆಚ್.ಟಿ.ಮೋಹನ್ ಕುಮಾರ್, ಹಾಗೂ ಸಂಘಟನಾ ಕಾರ್ಯದರ್ಶಿ  ಕೆ.ಕೆ.ವಿಶ್ವನಾಥ್‍     ದೆಹಲಿಗೆ ತೆರಳಿ ಕೇಂದ್ರದ   ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾದ   ಶೋಭಾ ಕರಂದ್ಲಾಜೆ ಅವರನ್ನು, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ    ಬಸವೇಗೌಡರವರು ಹಾಗೂ ಈ ಸಂಸ್ಥೆಯ ಪದಾಧಿಕಾರಿಗಳು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ   ಪ್ರತಾಪಸಿಂಹ, ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ   ತೇಜಸ್ವಿ ಸೂರ್ಯ, ಕೇಂದ್ರ ವಾಣಿಜ್ಯ ಸಚಿವಾಲಯದ   ವಾಣಿಜ್ಯ ಕಾರ್ಯದರ್ಶಿ   ಬಿ.ವಿ.ಆರ್.ಸುಬ್ರಮಣ್ಯಂ, ವಾಣಿಜ್ಯ ಜಂಟಿ ಕಾರ್ಯದರ್ಶಿ  ದಿವಾಕರ ನಾಥ್  ಮಿಶ್ರಾ  ಕೇಂದ್ರ ಹಣಕಾಸು ಸಚಿವರ ಆಪ್ರ ಕಾರ್ಯದರ್ಶಿ   ನಕುಲ್, ಇವರುಗಳನ್ನು ಭೇಟಿಮಾಡಿ, ಕಾಫಿ ಕೃಷಿ ಸಂಬಂಧಿತ ಸಾಲವನ್ನು ಸಪೇ೯ಜಿ  -2002 ರ ಕಾಯ್ದೆಯಿಂದ ಹೊರಗಿಡಲು ಸೂಕ್ತ ಕ್ರಮ ಕೈಗೊಳ್ಳುವಂತೆ  ಮನವಿ ಮಾಡಿದರು. 

ಪ್ಲಾಂಟೇಷನ್‍ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕಿಸಿಕೊಡಲು, ಸಾಲದ ಖಾತೆಗಳ ಮರುಹೊಂದಾಣಿಕೆಗೆ, ಫಸಲ್ ಭಿಮಾ ಯೋಜನೆಯನ್ನು ಕಾಫಿ ಕೃಷಿಗೂ ಅನ್ವಯಿಸುವಂತೆ ಮತ್ತು ಎಲ್ಲಾ ರೀತಿ ಕೃಷಿ ಸಾಲಗಳನ್ನು ಸಿಬಿಲ್  ನಿಂದ ಹೊರಗಿಡುವಂತೆ ಮನವಿ ಸಲ್ಲಿಸಲಾಯಿತು. ಅಗತ್ಯಬಿದ್ದಲ್ಲಿ ಸುಪ್ರಿಂ ಕೋರ್ಟ್‍ನಲ್ಲಿ ಬೆಳೆಗಾರರನ್ನು ಸರ್ಫೆಸಿ ವಿಚಾರದಲ್ಲಿ ಪ್ರತಿನಿಧಿಸುವ ಹಿರಿಯ ವಕೀಲರನ್ನು ಭೇಟಿ ಮಾಡಿ ಚರ್ಚಿಸಲಾಯಿತು, ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಸಾರ್ವಜನಿಕ ಸಂಪರ್ಕ  ಪ್ರತಿನಿಧಿ   ಟಿ.ಪಿ.ಸುರೇಂದ್ರ    ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,