Header Ads Widget

Responsive Advertisement

ಆರಾಮವಾಗಿರಿ, ಭಯ ಬೇಡ ಎಂದು ಹೇಳುವ ಭೂ ವಿಜ್ಞಾನಿಯೊಬ್ಬರ ವಿಶ್ಲೇಷಣೆ ಸುಳ್ಳಾಗಬಹುದೆ ?!!!

ಆರಾಮವಾಗಿರಿ, ಭಯ ಬೇಡ ಎಂದು  ಹೇಳುವ ಭೂ ವಿಜ್ಞಾನಿಯೊಬ್ಬರ ವಿಶ್ಲೇಷಣೆ ಸುಳ್ಳಾಗಬಹುದೆ ?!!!


( ಸಾಂದರ್ಭಿಕ ಚಿತ್ರ )


ಏಪ್ರೀಲ್, ಮೇ ನಲ್ಲಿ ಕೆಲವು ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.ಬೆಂಗಳೂರಿನ ಭೂ ವಿಜ್ಞಾನಿಯೊಬ್ಬರ ವಿಶ್ಲೇಷಣೆ. ಈ ಬಾರಿ ಜಲಪ್ರಳಯ ಇಲ್ಲ. ಎಲ್ಲರೂ ಆರಾಮವಾಗಿರಿ. ಜೂನ್, ಜುಲೈನಲ್ಲಿ ವಾಡಿಕೆ ಮಳೆಯಾಗಲಿದೆ. ರೆಡ್ ಅಲರ್ಟ್ ಬೇಡ. ಯಾರೂ ಹೆದರಬೇಡಿ... ಜಲಪ್ರಳಯ, ಅತಿವ್ರಷ್ಟಿ ಇಲ್ಲ...ಇತ್ಯಾದಿ ಇತ್ಯಾದಿ.

ಇದೀಗ ಜೂನ್ ಮುಗಿದು ಜುಲೈ ಬಂದಿದೆ. ಎಲ್ಲಿ ಸ್ವಾಮಿ ಭೂ ವಿಜ್ಞಾನಿ ಮಹಾಶಯರೆ ನಿಮ್ಮ ವಾಡಿಕೆ ಮಳೆ...ಬಿಸಿಲು ಕೊಡಗು ಜಿಲ್ಲೆಯ ಎಲ್ಲೆಡೆ ಕಂಡು ಬಂದಿದೆ. ಏಪ್ರೀಲ್... ಮೇ.. ನಲ್ಲಿ ಮಳೆಯಾದಲ್ಲಿ(ಅಕಾಲಿಕ) ಜೂನ್, ಜುಲೈ ನಲ್ಲಿ ಮಳೆಯಾಗುವದಿಲ್ಲ ಎಂದು ಹಿರಿಯ ತಲೆಮಾರು ನೆನಪಿಸುತ್ತಾರೆ. ಹಾಗೇನೇ ಆಗಿದೆ. ಆಗಸ ನೋಡಿ ಭವಿಷ್ಯ ಹೇಳುವವರ ಮಾತು ನಿಜವಾಗಿದೆ. 

ಇಂದು ತಲೆಯ ಮೇಲೆ ಮೋಡ ಇದೆ. ಜಿನುಗಿದಂತೆ ಸಾಧಾರಣ ಮಳೆಯಾಗುತ್ತಿದೆ.1990 ...2005 ರವರೆಗೆ ಕಂಡು ಬಂದ ವಾಡಿಕೆ ಮಳೆ ಭೂ ವಿಜ್ಞಾನಿಯ ಭವಿಷ್ಯದಂತೆ ಈವರೆಗೂ ಆಗಿಲ್ಲ. ಮತ್ತೆ...‌2018, 2019, 2020 ರ ಜಲಪ್ರಳಯ ಆಗಸ್ಟ್ ಮೊದಲವಾರ, ದ್ವಿತೀಯ ವಾರ ಅಥವಾ ಜುಲೈ ಕೊನೆಯ ವಾರದಲ್ಲಿ ಕೊಡಗಿನಲ್ಲಿ ಬೆಟ್ಟ ಗುಡ್ಡಗಳ ಮಹಾಸ್ಪೋಟ, ಭೂಮಿಯೊಳಗೆ ಗುಡು ಗುಡು ಶಬ್ಧ ಮುಂತಾದವು ಕಂಡು ಬಂದಿರುವದಿಲ್ಲವೆ. ಕಳೆದ ಬಾರಿ ತಲಕಾವೇರಿ ಪಶ್ಚಿಮಘಟ್ಟ ಬೆಟ್ಟ ಶ್ರೇಣಿ ಸ್ಪೋಟ ಗೊಂಡಿರುವದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಈ ಬಾರಿಯೂ ಆಗಸ್ಟ್.. ಸೆಪ್ಟೆಂಬರ್‌ ಭಯ ಹುಟ್ಟಿಸಲಿದೆ ಎಂದು ಹಿರಿಯ ತಲೆಮಾರು ಲೆಕ್ಕಾಚಾರ.

ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಕಾರ್ಯಪಡೆ ಸನ್ನದ್ಧವಾಗಿದೆ. ಮುನ್ನೆಚ್ಚರಿಕೆ ಯಾವತ್ತೂ ಅಗತ್ಯವೇ. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಕಂದಾಯ ಇಲಾಖಾಧಿಕಾರಿಗಳ ತಂಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ  ಈಗಾಗಲೇ ನಿಗಾ ವಹಿಸಿದೆ. ಎನ್.ಡಿ.ಎಫ್. ಸನ್ನದ್ದವಾಗಿದೆ.

ಈ ಬರಹದ ಉದ್ಧೇಶ ಅದಲ್ಲ.ಈ ಬಾರಿ ಅಪಾಯವಿಲ್ಲ.ಯಾರೂ ಹೆದರಬೇಡಿ.ಆರಾಮವಾಗಿರಿ ಎಂದು ಬೆಂಗಳೂರಿನಲ್ಲಿ ಕುಳಿತ ಭೂ ವಿಜ್ಞಾನಿ ಉಪದೇಶ ಮಾಡಿ ಪ್ರಚಾರ ತೆಗೆದುಕೊಂಡರಲ್ಲ. ಅವರ ಊಹೆ ಇದೀಗ ಸುಳ್ಳಾಗಿದೆಯಲ್ಲ. ವಾಡಿಕೆ ಮಳೆ ಎಂದರೆ ಯಾವ ಪ್ರಮಾಣ? ಎಷ್ಟು ಇಂಚು ಮಳೆ? ಜೂನ್ ನಲ್ಲಿ, ಜುಲೈ ನಲ್ಲಿ ಎಷ್ಟು ಇಂಚು ಮಳೆಯಾದರೆ ವಾಡಿಕೆ ಮಳೆ ಎಂದು ಅವರು ಹೇಳಬೇಕಿತ್ತು.

ಆದರೆ, ಭೂ ವಿಜ್ಞಾನಿ ಭವಿಷ್ಯವನ್ನು ಕೊಡಗಿನ ಈಗಿನ ಹವಾಗುಣ ಸುಳ್ಳು ಮಾಡಿದೆ. ಆಗಸ್ಟ್, ಸೆಪ್ಟೆಂಬರ್‌ ಮಳೆ, ಬಿರುಗಾಳಿ, ಜಲಸ್ಪೋಟ, ಬೆಟ್ಟ ಕುಸಿತತದ ಬಗ್ಗೆ ಮತ್ತೆ ಕೌತುಕದ ಚರ್ಚೆಗಳು ಆರಂಭವಾಗಿದೆ. ಭಯವಂತೂ ಬೆಟ್ಟ ಗುಡ್ಡಗಳ ಮೇಲೆ ವಾಸವಿರುವ ಜೀವ ಗಳಿಗೆ ಇದ್ದೇ ಇದೆ. ಆರಾಮವಾಗಿರಿ, ಭಯ ಬೇಡ ಎಂದು ಭೂ ವಿಜ್ಞಾನಿ‌ ಉಲ್ಲೇಖ ಮಾಡಿರುವದು ತಪ್ಪಲ್ಲವೆ? 

ನಾವು ಈ ಬಾರಿ ಕೊರೋನಾ ಭಯದೊಂದಿಗೆ ಗಾಳಿ, ಮಳೆ, ಅತಿವ್ರಷ್ಟಿ, ವಾಹನದ ಮೇಲೆ ಮರ ಉರುಳಿ ಸಾವು ನೋವು ಸಂಭವಿಸುವ ಬಗ್ಗೆ ಎಚ್ಚರಿಕೆ ಅಗತ್ಯವಲ್ಲವೆ. ಈ ಬರಹದ ಮೂಲ ಉದ್ಧೇಶ. ಪ್ರಕ್ರತಿಯ ಮುಂದೆ ನಾವು ಏನೇನೂ ಇಲ್ಲ. ಮುನ್ಸೂಚನೆ ಉತ್ತಮವೇ. ಆದರೆ ಆರಾಮವಾಗಿರಿ, ಭಯಬೇಡ, ಏನೂ ಆಗುವದಿಲ್ಲ, ಜಲಸ್ಪೋಟ ಈ ಬಾರಿ ಇಲ್ಲ ಎಂದು ಹೇಳುವದು ಹಾಸ್ಯಾಸ್ಪದವಲ್ಲವೆ? 

ಕೊಡಗಿನ ಪ್ರಕ್ರತಿಯ ವೈಪರೀತ್ಯದ ಬಗ್ಗೆ ಮುನ್ಸೂಚನೆ ಕಷ್ಟ. ಈ ಬಾರಿ ಜುಲೈನಲ್ಲಿಯೂ ವಾಡಿಕೆ ಮಳೆ ಇಲ್ಲ. ಆಗಸ್ಟ್ನಲ್ಲಿಯೇ ಕೆ.ಆರ್.ಎಸ್. ಹಾಗೂ ಕಬಿನಿ ಜಲಾಶಯ ಭರ್ತಿಯಾಗುವದು ಆಗಸ್ಟ್. ಸೆಪ್ಟೆಂಬರ್ ಮಳೆಯಲ್ಲಿ ಎಂದು ಅನುಭವಿಗಳು ವ್ಯಾಖ್ಯಾನಿಸಿದ್ದಾರೆ. ಜೂನ್ ತಿಂಗಳ ವಾಡಿಕೆ ಮಳೆ ಆಗದಿರುವ ಕಾರಣ ಬೆಂಗಳೂರು ಭೂ ವಿಜ್ಞಾನಿ ಹೇಳಿಕೆ ಸುಳ್ಳಾಗಿದೆ. ಇನ್ನು ಜುಲೈನಲ್ಲಿ ವಾಡಿಕೆ ಮಳೆಯಾಗದಿದ್ದಲ್ಲಿ ನಾವು ಆಗಸ್ಟ್ ಜಲಪ್ರಳಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲೇ ಬೇಕೆಂಬುದು ಈ ಬರಹದ ಸಾರಾಂಶ.


                                                                                                                   ✍️....ಟಿ.ಎಲ್.‌ ಶ್ರೀನಿವಾಸ್‌

         ( ಪತ್ರಕರ್ತರು )

         ಸುದ್ದಿ ಸಂಸ್ಥೆ, ಗೋಣಿಕೊಪ್ಪಲು.


( ಟಿ.ಎಲ್.‌ ಶ್ರೀನಿವಾಸ್‌ )


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,