Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಂಗ್ರೆಸ್ ಪಕ್ಷಕೆ ರಾಜೀನಾಮೆ ನೀಡಲು ಮುಂದಾದ ಕೊಡಗು ಯುವ ಕಾಂಗ್ರೆಸ್ ಕಾರ್ಯಕರ್ತರುಗಳು

ಕಾಂಗ್ರೆಸ್ ಪಕ್ಷಕೆ ರಾಜೀನಾಮೆ ನೀಡಲು ಮುಂದಾದ ಕೊಡಗು ಯುವ ಕಾಂಗ್ರೆಸ್ ಕಾರ್ಯಕರ್ತರುಗಳು


ಕೊಡಗು ಜಿಲ್ಲಾ ಯುವ ಕಾಂಗ್ರೆಸಿನ ಕೆಲವು  ಕಾರ್ಯಕರ್ತರುಗಳು ಸಾಮೂಹಿಕ ರಾಜಿನಾಮೆ ನೀಡಲು ಬಯಸಿದ್ದು, ಮುಂದಿನ ದಿನಗಳಲ್ಲಿ ರಾಜೀನಾಮೆ ಪತ್ರವನ್ನು ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ರವರಿಗೆ ನೀಡಲಿದ್ದೇವೆ ಎಂದು ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಹಾಗೂ ಮಾಜಿ ಉಪಾಧ್ಯಕ್ಷ ಶರಫುದ್ದೀನ್ ಗೋಣಿಕೊಪ್ಪ. ಇವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕೊಡಗಿನ ಹಲವು ಭಾಗದ ಯುವಕರು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಲು ಈ ಹಿಂದೆ ಮುಂದಾಗಿದ್ದರು, ಆದರೆ ಕೆಲವು ನಾಯಕರುಗಳು ಎಲ್ಲವೂ ಸರಿ ಪಡಿಸುವ ಭರವಸೆ ನೀಡಿದರು. ಆದರೆ ಯುವ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ಯಾವುದೇ ಸಮಾರಂಭಕ್ಕೆ ಆಹ್ವಾನಿಸದೆ ಕಡೆಗಣಿಸುತ್ತಾ ಇದ್ದು ಹಾಗೂ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಅಸ್ತಿತ್ವದಲ್ಲಿರುವುದೇ ಸಂಶಯವಾಗಿದೆ. ಆದರಿಂದ ಪಕ್ಷಕೆ ರಾಜಿನಾಮೆ ನೀಡಲು ಮುಂದಾಗಿದ್ದೆವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,