Header Ads Widget

Responsive Advertisement

ಶೇಕಡಾ 19% ಪ್ರವಾಸೋದ್ಯಮ ಅವಲಂಬಿತರಿಂದ ಶೇಕಡಾ 90% ಕೃಷಿ ಅವಂಬಿತರ ಬದುಕು ಮೂರಾಬಟ್ಟೆಯಾಗಿದೆ; ಅಖಿಲ ಅಮ್ಮ ಕೊಡವ ಸಮಾಜ ಅಸಮಾಧಾನ

ಶೇಕಡಾ 19% ಪ್ರವಾಸೋದ್ಯಮ ಅವಲಂಬಿತರಿಂದ ಶೇಕಡಾ 90% ಕೃಷಿ ಅವಂಬಿತರ ಬದುಕು ಮೂರಾಬಟ್ಟೆಯಾಗಿದೆ; ಅಖಿಲ ಅಮ್ಮ ಕೊಡವ ಸಮಾಜ ಅಸಮಾಧಾನ

ಕೊಡಗು ತಾಲಿಬಾನ್ ಆಗುವುದರೊಳಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಇಲ್ಲವೆಂದರೆ ನಮಗೆ ನಮ್ಮನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ.



( ಬಾನಂಡ ಪ್ರಥ್ಯು ) 

ಕೊಡಗಿನಲ್ಲಿ ದಿನೇದಿನೆ ಕೊರೋನ ಪಾಸಿಟಿವಿಟಿ ದರ ಏರುಪೆರಾಗುತ್ತಿದ್ದು ಕೊಡಗು ಕೊರೋನದಿಂದ ನಿಯಂತ್ರಣಕ್ಕೆ ಬಂದಿಲ್ಲ, ಎರಡನೇ ಅಲೆಯಲ್ಲೌ ಸಾಕಷ್ಟು ಸಂಖ್ಯೆಯಲ್ಲಿ ನಮ್ಮವರನ್ನು ಕಳೆದುಕೊಂಡಿದ್ದು ಮೂರನೇ ಅಲೆಯ ಭಯ ಕಾಡುತ್ತಿದೆ, ಇದರ ಮಧ್ಯೆ ಪ್ರವಾಸೋದ್ಯಮ ತೆರೆದುಕೊಂಡಿದ್ದು ಕೂಡಲೇ ಪ್ರವಾಸೋದ್ಯಮವನ್ನು ಕೊರೋನ ಸಂಪೂರ್ಣ ಹೋಗುವತನಕ ಮುಚ್ಚಬೇಕಿದೆ ಎಂದು ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ವಿವಿಧ ಸಂಘಟನೆಗಳ ಸಹಾಯದಿಂದ ರಾಜಕೀಯ ರಹಿತವಾದ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. ಒಂದೆಡೆ ಅಸ್ಸಾಮಿ ಕಾರ್ಮಿಕರ ಆಗಮನ ಮತ್ತೊಂದೆಡೆ ಪ್ರವಾಸಿಗರ ಹುಚ್ಚಾಟ ಇವೆರಡರಿಂದ ಇಲ್ಲಿನ ಜನರು ತತ್ತರಿಸಿದ್ದು ಕೂಡಲೇ ಪ್ರವಾಸಿಗರಿಗೆ ಕಡಿವಾಣ ಹಾಕಬೇಕಿದೆ ಹಾಗೂ ಕಾರ್ಮಿಕರ ಸೋಗಿನಲ್ಲಿ ಬರುವ ಬಾಂಗ್ಲಾ, ಪಾಕಿಸ್ತಾನ ಅಥವಾ ಅಫಘಾನಿಸ್ತಾನ  ಭಯೋತ್ಪಾದಕರ ಬಗ್ಗೆ ಎಚ್ಚರವಹಿಸಬೇಕಿದೆ, ಹಾಗೂ ಅವರ ಮೂಲ ದಾಖಲಾತಿ ಮತ್ತು 72ಗಂಟೆಯೊಳಗಿನ ಕೊರೋನ ಟೆಸ್ಟಿಂಗ್ ರಿಪೋರ್ಟ್ ಖಡ್ಡಾಯ ಮಾಡಬೇಕಿದೆ. ಯಾವುದೇ ದಾಖಲೆಗಳಿಲ್ಲದೆ ಹಾಗೂ ಮಾಲಿಕರಿಲ್ಲದೆ ಬರುವ ಕಾರ್ಮಿಕರನ್ನು ಭದ್ರತೆಯ ದೃಷ್ಟಿಯಿಂದ ವಾಪಾಸು ಕಳುಹಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ. ಈಗಾಗಲೇ ಕೊರೋನ ಮೂರನೇ ಅಲೆ ನೆರೆ ರಾಜ್ಯವಾದ ಕೇರಳಕ್ಕೆ ಆಗಮಿಸಿದ್ದು ಕೊಡಗಿಲ್ಲಿ ಯಾವಾಗ ಸ್ಪೋಟಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ. ಕೂಡಲೇ ಪ್ರವಾಸೋಧ್ಯಮವನ್ನು ಒಂದಷ್ಟು ಸಮಯ ಸಂಪೂರ್ಣ ಬಂದ್ ಮಾಡದಿದ್ದರೆ ಮುಂದೆ ನಾವು ಮೂರನೇ ಅಲೆಯ ತೀವೃತೆಯನ್ನು ಎದುರಿಸಬೇಕಾಗುತ್ತದೆ, ಕೊಡಗಿನೊಳಗೆ ಅನೇಕ ಸಣ್ಣ ಪುಟ್ಟ ವ್ಯಾಪಾರಿಗಳು ಪ್ರವಾಸಿಗರಿಂದ ತೊಂದರೆ ಅನುಭವಿಸುವಂತಾಗಿದೆ. ಮೋಜಿ ಮಸ್ತಿಗೆಂದು ಬರುವವರಿಗೆ ಗಡಿಯನ್ನು ಸಂಪೂರ್ಣ ಬಂದ್ ಮಾಡಿ ಕೊಡಗಿನೊಳಗೆ ಅಂಗಡಿ ಮುಗ್ಗಟ್ಟುಗಳಿಗೆ ಅವಕಾಶ ನೀಡಬೇಕಿದೆ. ವಿಕೆಂಡ್ ಕರ್ಫ್ಯೂ ಕೂಡ ಅನಿವಾರ್ಯವಾಗಿದ್ದು, ವಿಕೇಂಡ್ ಕರ್ಫ್ಯೂ ಕೇವಲ ಸ್ಥಳಿಯರಿಗೆ ಎಂಬಂತಾಗಬಾರದು. ಹೋಂಸ್ಟೇ ರೇಸಾರ್ಟ್'ಗಳನ್ನು ಮುಚ್ಚಿಸಬೇಕಿದೆ. ಕೊಡಗಿನಲ್ಲಿ ಮತ್ತೆ ಕೊರೋನ ಸ್ಪೋಟಗೊಳ್ಳುವುದರೊಳಗೆ ಹಾಗೂ ಕೊಡಗು ತಾಲಿಬಾನ್ ಆಗುವುದರೊಳಗೆ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ ಇಲ್ಲವೆಂದರೆ ನಮಗೆ ನಮ್ಮನ್ನು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ, ಶೇಕಡಾ 10% ಪ್ರವಾಸೋದ್ಯಮ ಅವಲಂಬಿತರಿಂದ ಶೇಕಡಾ 90% ಕೃಷಿ ಅವಲಂಬಿತರಿಗೆ ತೊಂದರೆಯಾಗಿದೆ. ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿಂದ್ದರೆ ಮುಂದೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು ಎಚ್ಚರಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,