Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಯುವ ಪತ್ರಕರ್ತ, ಬರಹಗಾರ; ಇಸ್ಮಾಯಿಲ್ ಕಂಡಕರೆಯವರ ಚೊಚ್ಚಲ ಕೃತಿ "ಮರಿಯಮ್" ಕಾದಂಬರಿ ಆಗಸ್ಟ್ 24 ರಂದು ಅನಾವರಣ

ಕೊಡಗಿನ ಯುವ ಪತ್ರಕರ್ತ, ಬರಹಗಾರ; ಇಸ್ಮಾಯಿಲ್ ಕಂಡಕರೆಯವರ ಚೊಚ್ಚಲ ಕೃತಿ "ಮರಿಯಮ್" ಕಾದಂಬರಿ ಆಗಸ್ಟ್ 24 ರಂದು ಅನಾವರಣ


ಈಗಾಗಲೇ ಜಿಲ್ಲೆಯ ಯುವಜನರ ಮನಗೆದ್ದಿರುವ, ಕೊಡಗು ಜಿಲ್ಲೆಯ ಯುವ ಪತ್ರಕರ್ತ,ಬರಹಗಾರ ಇಸ್ಮಾಯಿಲ್ ಕಂಡಕರೆಯರ ಚೊಚ್ಚಲ ಕಾದಂಬರಿ "ಮರಿಯಮ್"- ಜನ್ಮ ತಾಳುವ ಮುನ್ನ ಸೋತ ಪ್ರೀತಿ. ಮುಂಬರುವ ಆಗಸ್ಟ್ 24 ರಂದು ಕೊಡಗು ಜಿಲ್ಲಾ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.

ಕೊಡಗು ಜಿಲ್ಲೆಯ ಅತೀ ಕಿರಿಯ ವಯಸ್ಸಿನ ಯುವ ಪತ್ರಕರ್ತ ಹಾಗೂ ಯುವ ಲೇಖಕ ಇಸ್ಮಾಯಿಲ್ ಕಂಡಕರೆ ತನ್ನ 21 ನೇ ವಯಸ್ಸಿನಲ್ಲಿ ಕಾದಂಬರಿ ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರಾಗಿಯೂ ಕೂಡ ಇಸ್ಮಾಯಿಲ್ ಕಂಡಕರೆ ಅವರು ಕ್ರೀಡಾ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಪ್ರೇಮ ಕಥೆಯನ್ನು ಆಧರಿಸಿ‌ ರೂಪುಗೊಂಡಿರುವ, ಇಸ್ಮಾಯಿಲ್ ಕಂಡಕರೆಯವರ ಚೊಚ್ಚಲ ಕಾದಂಬರಿ "ಮರಿಯಮ್"- ಜನ್ಮ ತಾಳುವ ಮುನ್ನ ಸೋತ ಪ್ರೀತಿ. ಇದೀಗ ಲೋಕಾರ್ಪಣೆಗೆ ಸಜ್ಜುಗೊಂಡಿದ್ದು, "ಸರ್ಚ್‌ ಕೂರ್ಗ್‌ ಮೀಡಿಯಾ"ದ  ನಮ್ಮೆಲ್ಲ ಓದುಗರು ಹಾಗೂ ವೀಕ್ಷಕರು "ಮರಿಯಮ್" ಕೃತಿಯನ್ನು ಖರೀದಿಸಿ ಕೊಡಗಿನ ಯುವ ಪತ್ರಕರ್ತ, ಬರಹಗಾರ ಇಸ್ಮಾಯಿಲ್ ಕಂಡಕರೆಯವರನ್ನು ಪ್ರೋತ್ಸಾಹಿಸಬೇಕಾಗಿ ಆಶಿಸುತ್ತದೆ.

ಪುಸ್ತಕಕ್ಕಾಗಿ, ಇಸ್ಮಾಯಿಲ್ ಕಂಡಕರೆಯವರ ಈ ವ್ಯಾಟ್ಸ್ ಅಪ್ ಸಂಖ್ಯೆಯನ್ನು ಸಂಪರ್ಕಿಸಿ: 9731687598

ಪುಸ್ತಕದ ಬೆಲೆ:₹.100/-

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,