“ಆಜಾದಿ ಕಾ ಅಮೃತ್ ಮಹೋತ್ಸವ” (AKAM) ಒಂದು ವಿಶಿಷ್ಟ ಕಾರ್ಯಕ್ರಮ
ರಾಷ್ಟ್ರಗೀತೆ ಹಾಡಿ, ರೆಕಾರ್ಡ್ ಮಾಡಿ ಮತ್ತು ನಿಮ್ಮ ವೀಡಿಯೊವನ್ನು www.rashtragaan.in ನಲ್ಲಿ ಅಪ್ಲೋಡ್ ಮಾಡಿರಿ
ಭಾರತದ 75 ವರ್ಷಗಳ ಸ್ವಾತಂತ್ರ್ಯದ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಸ್ಮರಣಾರ್ಥದಲ್ಲಿ ಜನರ ಭಾಗವಹಿಸುವಿಕೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ರಾಷ್ಟ್ರಗೀತೆಯೊಂದಿಗೆ ಸಂಪರ್ಕ ಹೊಂದಿದ ಇಂತಹ ಒಂದು ಅನನ್ಯ ಉಪಕ್ರಮವನ್ನು ಈ ವರ್ಷ ಸ್ವಾತಂತ್ರ್ಯ ದಿನವನ್ನು ಎಲ್ಲೆಡೆ ಆಚರಿಸಲು ಸಂಸ್ಕೃತಿ ಸಚಿವಾಲಯವು ಭಾರತೀಯರಲ್ಲಿ ಹೆಮ್ಮೆ ಮತ್ತು ಏಕತೆಯನ್ನು ಮೂಡಿಸಲು ಕೈಗೊಂಡಿದೆ. ಇದರಲ್ಲಿ, ರಾಷ್ಟ್ರಗೀತೆಯನ್ನು ಹಾಡಲು ಮತ್ತು ವೀಡಿಯೊವನ್ನು www.rashtragaan.in ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಜನರನ್ನು ಆಹ್ವಾನಿಸಲಾಗಿದೆ. ರಾಷ್ಟ್ರಗೀತೆಯ ಸಂಕಲನವನ್ನು 15 ನೇ ಆಗಸ್ಟ್, 2021 ರಂದು ನೇರಪ್ರಸಾರ ಮಾಡಲಾಗುತ್ತದೆ.
ಈ ಉಪಕ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಜುಲೈ 25 ರಂದು “ಆಜಾದಿ ಕಾ ಅಮೃತ್ ಮಹೋತ್ಸವ”ದ ಅಂಗವಾಗಿ ಘೋಷಿಸಿದರು. “ಇದು ಸಂಸ್ಕ್ರತಿ ಸಚಿವಾಲಯದ ಒಂದು ಭಾಗವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಒಟ್ಟಾಗಿ ರಾಷ್ಟ್ರಗೀತೆಯನ್ನು ಹಾಡಬೇಕು. ಇದಕ್ಕಾಗಿ, ಒಂದು ವೆಬ್ಸೈಟ್ ಕೂಡ ರಚಿಸಲಾಗಿದೆ - www.rashtragaan.in . ಈ ಜಾಲತಾಣದ ಸಹಾಯದಿಂದ, ನೀವು ರಾಷ್ಟ್ರಗೀತೆಯನ್ನು ಹಾಡಬಹುದು ಮತ್ತು ಅದನ್ನು ರೆಕಾರ್ಡ್ ಮಾಡಬಹುದು, ಆ ಮೂಲಕ ಅಭಿಯಾನದೊಂದಿಗೆ ಸಂಪರ್ಕ ಹೊಂದಬಹುದು. ಈ ನವೀನ ಉಪಕ್ರಮದೊಂದಿಗೆ ನೀವು ನಿಮ್ಮನ್ನು ಕಂಡುಕೊಳ್ಳುವಿರಿ ಎಂದು ನಾನು ಭಾವಿಸುತ್ತೇನೆ.” ಎಂದು ಪ್ರಧಾನ ಮಂತ್ರಿ ಹೇಳಿದ್ದರು.
ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು, ರಾಷ್ಟ್ರಗೀತೆ ಹಾಡಲು ಮತ್ತು ರೆಕಾರ್ಡ್ ಮಾಡುವಂತೆ ಜನರನ್ನು ಕೋರಿ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಮಂತ್ರಿ (ಡೊನೆರ್), ಶ್ರೀ ಜಿ ಕಿಶನ್ ರೆಡ್ಡಿ ಅವರು ಇಂದು ತಾವೇ ರಾಷ್ಟ್ರಗೀತೆಯನ್ನು ಹಾಡಿ ರೆಕಾರ್ಡ್ ಮಾಡಿದ್ದಾರೆ.
“ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ನಾವು ಆಚರಿಸುತ್ತಿದ್ದಂತೆ, ರಾಷ್ಟ್ರಗೀತೆ ಹಾಡಲು ಒಟ್ಟಿಗೆ ಸೇರುವ ಮೂಲಕ ಆಚರಿಸೋಣ! ನಾನು ನನ್ನ ವಿಡಿಯೋವನ್ನು ರೆಕಾರ್ಡ್ ಮಾಡಿ ಅಪ್ಲೋಡ್ ಮಾಡಿದ್ದೇನೆ. ನೀವು?
http://rashtragaan.in #AmritMahotsav ನಲ್ಲಿ ನಿಮ್ಮ ವೀಡಿಯೊವನ್ನು ರೆಕಾರ್ಡಿಂಗ್ ಮತ್ತು ಅಪ್ಲೋಡ್ ಮಾಡುವ ಮೂಲಕ ತಮ್ಮಿಂದಾಗುವ ಕಾರ್ಯವನ್ನು ಮಾಡಲು ನಾನು ಎಲ್ಲ ನಾಗರಿಕರಿಗೆ ಕರೆ ನೀಡುತ್ತೇನೆ ”ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವದಾದ್ಯಂತದ ಭಾರತೀಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸಚಿವರು ಆಶಿಸಿದರು ಮತ್ತು ಯುವಕರಿಂದ ಗರಿಷ್ಠ ಭಾಗವಹಿಸುವಿಕೆಗೆ ಕರೆ ನೀಡಿದರು. ರಾಷ್ಟ್ರಗೀತೆಯನ್ನು ಅಪ್ಲೋಡ್ ಮಾಡಿದ ವೀಡಿಯೊಗಳ ಸಂಕಲನವನ್ನು 15 ನೇ ಆಗಸ್ಟ್ 2021 ರಂದು ನೇರಪ್ರಸಾರದಲ್ಲಿ ಪ್ರದರ್ಶಿಸಲಾಗುತ್ತದೆ.
ಸ್ವಾತಂತ್ರ್ಯ ಹೋರಾಟಗಾರ ಪಿಂಗಲಿ ವೆಂಕಯ್ಯಗಾರು ಅವರ 125 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಸಚಿವರು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
“ಶಿಕ್ಷಣತಜ್ಞ, ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಲಕ್ಷಾಂತರ ಭಾರತೀಯರ ಹೃದಯದಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯನ್ನು ಹುಟ್ಟುಹಾಕುವ ಭಾರತೀಯ ರಾಷ್ಟ್ರಧ್ವಜದ ವಿನ್ಯಾಸಕರಾದ ಶ್ರೀ ಪಿಂಗಳಿ ವೆಂಕಯ್ಯಗಾರು, #PingaliVenkayya ಅವರಿಗೆ ಅವರ ಜಯಂತಿಯಂದು ನನ್ನ ಗೌರವ ನಮನಗಳು”
1916 ರಲ್ಲಿ, ಪಿಂಗಳಿ ವೆಂಕಯ್ಯ ಅವರು “ಭಾರತಕ್ಕಾಗಿ ಒಂದು ರಾಷ್ಟ್ರೀಯ ಧ್ವಜ” ಎಂಬ ಕಿರುಪುಸ್ತಕವನ್ನು ಪ್ರಕಟಿಸಿದರು ಮತ್ತು ವಿವಿಧ ರಾಷ್ಟ್ರಗಳ ಧ್ವಜಗಳನ್ನು ವಿವರಿಸಿದರು ಮತ್ತು ಭಾರತೀಯ ರಾಷ್ಟ್ರೀಯ ಧ್ವಜದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೇಳಿದ್ದರು.
“ಆಜಾ಼ದಿ ಕಾ ಅಮೃತ್ ಮಹೋಸ್ತವ್” ಮೂಲಕ ನಮ್ಮ 75 ನೇ ವರ್ಷದ ಸ್ವಾತಂತ್ರ್ಯವು ಜನರ ಚಳುವಳಿಯಾಗಬೇಕು ಎಂದು ಪ್ರಧಾನಮಂತ್ರಿ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ಗುರುತಿಸಲು ಸಂಸ್ಕೃತಿ ಸಚಿವಾಲಯವು ವಿವಿಧ ಸಚಿವಾಲಯಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ಈ ಸಂದರ್ಭಕ್ಕೆ ತಕ್ಕಂತೆ ಆಚರಿಸಲು ಸಮುದಾಯಗಳ ಜೊತೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ.
75 ವಾರಗಳ 15 ನೇ ಆಗಸ್ಟ್ 2022 ರಂದು ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ “ಆಜಾ಼ದಿ ಕಾ ಅಮೃತ್ ಮಹೋತ್ಸವ”ವನ್ನು ಮಹಾತ್ಮ ಗಾಂಧಿಯವರ ಸಾಬರಮತಿ ಆಶ್ರಮದಿಂದ ಈ ವರ್ಷ ಮಾರ್ಚ್ 12 ರಂದು ಆರಂಭಿಸಲಾಯಿತು, ಅಂದಿನಿಂದ ಅಮೃತ್ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶಾದ್ಯಂತ ಜಮ್ಮು ಮತ್ತು ಕಾಶ್ಮೀರದಿಂದ ಪುದುಚೇರಿ, ಗುಜರಾತ್ನಿಂದ ಈಶಾನ್ಯದವರೆಗೆ ನಡೆಯುತ್ತಿವೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network