Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾಫಿಯಲ್ಲಿ ಕಂಡು ಬರುವ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು

ಕಾಫಿ ಬೆಳೆಗರರ ಗಮನಕ್ಕೆ: ಕಾಫಿಯಲ್ಲಿ ಕಂಡು ಬರುವ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳು

ಮಡಿಕೇರಿ ಆ.04: ಕಾಫಿಯಲ್ಲಿ ಕಂಡು ಬರುವ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸೂಚನೆ ನೀಡಲಾಗಿದೆ.   

ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಜುಲೈ ತಿಂಗಳ ಅಂತ್ಯದವರೆಗೂ ನೈರುತ್ಯ ಮುಂಗಾರು  ಮಳೆಯು ಸರಾಸರಿಯಾಗಿದ್ದು, ಆಗಸ್ಟ್ ತಿಂಗಳ ಮೊದಲನೆ ವಾರದಲ್ಲಿ, ಕೊಡಗಿನ ಎಲ್ಲಾ ಭಾಗಗಳಲ್ಲಿ ಎಡಬಿಡದೆ ಮಳೆಯಾಗಿದ್ದು,   ಹವಾಮಾನ ವರದಿಯ ಪ್ರಕಾರ ಈ ಮಳೆಯು ಇನ್ನೂ ಕೆಲವು ದಿನಗಳು ಮುಂದುವರೆಯುವ ಸಾಧ್ಯತೆಗಳಿದೆ. ಈ ಮಳೆಯಿಂದ ಕಡಿಮೆ ತಾಪಮಾನ ಉಂಟಾಗಿ, ಮಣ್ಣಿನಲ್ಲಿನ ತೇವಾಂಶ, ವಾತಾವರಣಲ್ಲಿನ ಆದ್ರತೆ ಹೆಚ್ಚಾಗಿ ದೀರ್ಘ ಕಾಲದವರೆಗೆ ಎಲೆಗಳ ಮೇಲೆ ತೇವಾಂಶ ಉಳಿದಿರುವುದು ಕಂಡುಬಂದಿರುತ್ತದೆ. 

ಈ ವ್ಯತಿರಿಕ್ತ ವಾತಾವರಣದಿಂದ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯು ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಕಂಡು ಬರುವ ಸಾಧ್ಯತೆಗಳಿರುವುದರಿಂದ ಕಾಫಿ ಬೆಳೆಗಾರರು ಕೆಳಗಿನ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕು ಎಂದು ಕಾಫಿ ಮಂಡಳಿ ತಿಳಿಸಿದೆ. 

ಚರಂಡಿ ಹಾಗೂ ತೊಟ್ಟಿಲು ಗುಂಡಿಗಳನ್ನು ಸೋಸಿ ಹೆಚ್ಚುವರಿ ನೀರನ್ನು ಬಸಿದು ಹೋಗುವಂತೆ ಮಾಡುವುದು. ಕಾಫಿ ಗಿಡಗಳ ಕೆಳಗೆ ಬಿದ್ದಿರುವ ದರಗುಗಳನ್ನು ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ರಾಶಿ ಮಾಡಿ ಗಾಳಿಯಾಡುವಂತೆ ಅನುಕೂಲ ಮಾಡುವುದು. ಗಿಡಗಳ ಬೇರಿನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು, ಪ್ರತೀ ಎಕರೆಗೆ ಒಂದು ಚೀಲ (50 ಕೆಜಿ) ಯೂರಿಯಾವನ್ನು ಮಳೆ ಬಿಡುವಿನ ಸಮಯದಲ್ಲಿ ಅಥವಾ ಮಳೆ ನಿಂತ ತಕ್ಷಣ ಹಾಕುವುದು. ಕೊಳೆ ರೋಗ ಕಂಡುಬಂದಲ್ಲಿ, ರೋಗ ಪೀಡಿತ ಎಲೆಗಳು ಮತ್ತು  ಕಾಯಿಗಳನ್ನು ತೆಗೆದ ನಂತರ, 200 ಗ್ರಾಂ ಕಾರ್ಬ್ ನ್ ಡೈಜಿಮ್ 50 ಡಬ್ಲ್ಯೂಪಿ +75 ಮಿ.ಲೀ ಪ್ಲಾನೋಫಿಕ್ಸ್ + 100 ಮಿ.ಲೀ. ಅಂಟು ದ್ರಾವಣವನ್ನು 200 ಲೀಟರ್ ನೀರಿನಲ್ಲಿ ಬೆರಸಿ, ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸುವುದರಿಂದ ರೋಗ ಹರಡುವುದನ್ನು ತಡೆಯಬಹುದಾಗಿದೆ ಎಂದು ವಿರಾಜಪೇಟೆ ಕಾಫಿ ಮಂಡಳಿಯ ಉಪನಿರ್ದೇಶಕರು(ವಿಸ್ತರಣೆ) ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,