Header Ads Widget

ಸರ್ಚ್ ಕೂರ್ಗ್ ಮೀಡಿಯ

"ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ" ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿದ ಶ್ರೀ ಭಗವಾನ್ ಸಂಘ, ಊರುಬೈಲು ಸದಸ್ಯರು

"ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ" ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿದ  ಶ್ರೀ ಭಗವಾನ್ ಸಂಘ, ಊರುಬೈಲು ಸದಸ್ಯರು


ಆಗಸ್ಟ್ ಒಂದರಿಂದ ಹದಿನೈದರವರೆಗಿನ "ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ" ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ, ಊರುಬೈಲು, ಇದರ ಸದಸ್ಯರು ಆಗಸ್ಟ್ 1ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.


ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿಗಳಾದ ಶ್ರೀ. ಯತೀಶ್ ಹನಿಯಡ್ಕ ರವರು ಸಂಘದ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಸ್ವಚ್ಚತಾ ಪ್ರತಿಜ್ಞಾವಿಧಿ ಭೋದಿಸಿದರು. ಬಳಿಕ ಗ್ರಾಮದ ಬಾಲಂಬಿ, ಕೂಡಡ್ಕ, ಕೆಲ್ಸಿಕಾನ , ದೇವಾಲಯ ಮತ್ತು ಏಣಿಯಾರು ಸೇತುವೆಗಳನ್ನು ಶುಚಿಗೊಳಿಸಲಾಯಿತು.


ಅಭಿಯಾನದ ನೇತ್ರತ್ವವನ್ನು ಪಯಸ್ವಿನಿ ಸೊಸೈಟಿ ಅದ್ಯಕ್ಷರಾದ ಶ್ರೀ ಯನ್.ಸಿ ಅನಂತ್ ಊರುಬೈಲು, ಸಂಘದ ಅದ್ಯಕ್ಷ ಶ್ರೀ ದಿನೇಶ್ ಸಣ್ಣಮನೆ ವಹಿಸಿದ್ದರು.ಶ್ರಮದಾನದ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಶ್ರೀ. ಸುಬ್ರಹ್ಮಣ್ಯ ಉಪಾಧ್ಯಾಯ, ಶ್ರೀ ಆದಂ ಸೆಂಟ್ಯಾರ್, ಶ್ರೀ ಪ್ರಸನ್ನ ಕಾಚೇಲು ಮುಂತಾದವರು ಭೇಟಿ ನೀಡಿ ಶುಭ ಹಾರೈಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,