Header Ads Widget

Responsive Advertisement

ಕೊಡಗು ಮತ್ತೊಂದು ಅಫ್ಘಾನಿಸ್ತಾನವಾಗದಿರಲಿ

ಕೊಡಗು ಮತ್ತೊಂದು ಅಫ್ಘಾನಿಸ್ತಾನವಾಗದಿರಲಿ

#ಒಂದೆರಡುನಿಮಿಷಗಮನವಿಟ್ಟು_ಓದಿ..

#ಹಾಗೆಹತ್ತುನಿಮಿಷಸಮದಾನದಿಂದಯೋಚಿಸಿ_ನೋಡಿ


( ಸಾಂದರ್ಭಿಕ ಚಿತ್ರ )

●ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ದಿನೇದಿನೇ ನೂರಾರು, ಸಾವಿರಾರು ಕಾರ್ಮಿಕರನ್ನು ಹಣದಾಸೆಗೆ ದಲ್ಲಾಳಿಗಳು ಯಾವುದೇ ದಾಖಲೆಗಳಿಲ್ಲದೆ ಗಡಿಯೊಳಗೆ ತಂದು ಬಿಡುತ್ತಿದ್ದಾರೆ. 

●ನಮ್ಮ ಬೆಳೆಗಾರರಿಗೂ ಇದು ಅನಿವಾರ್ಯ ಎಂಬಂತಾಗಿ ಅವರು ಕೂಡ ಹಿಂದೂ ಮುಂದು ನೋಡದೆ, ಅವರ ಪೂರ್ವಾಪರ ವಿಚಾರಿಸಿದೆ ತಮ್ಮ ತೋಟದ ಲೈನ್ ಮನೆಗಳಲ್ಲಿ ಆಶ್ರಯ ಕೊಡುತ್ತಿದ್ದಾರೆ. 

●ಇವರಲ್ಲಿ ಅಸ್ಸಾಮಿಗಳು ಯಾರು.? ಬಂಗಾಳಿಗಳು ಯಾರು.?  ರೋಹಿಂಗ್ಯಾಗಳು ಯಾರು.? ಅಫ್ಘಾನಿಗಳು ಯಾರು.? ಪಾಕಿಸ್ಥಾನಿಗಳು ಯಾರು.? ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಒಟ್ಟಿನಲ್ಲಿ ಮಧ್ಯವರ್ತಿಗಳಿಗೆ ಹಣಬೇಕು, ಬೆಳೆಗಾರರಿಗೆ ಕೆಲಸವಾಗಬೇಕು ಅಷ್ಟೇ. 

●ಹಿಂದೊಂದು ಕಾಲವಿತ್ತು ಮನೆಗಳಿಗೆ ಬಾಗಿಲು ಹಾಕದೆ, ಬಾಗಿಲು ಹಾಕಿದ್ದರು ಬೀಗ ಹಾಕದೆ, ಬೀಗ ಹಾಕಿದ್ದರು ಆ ಬೀಗದ ಕೀಯನ್ನು ಮನೆಯ ಆಳುವಿನ ಕೈಗೆ ನೀಡಿ, ಬರುವತನಕ ಮನೆಯ ಕಡೆ ಜೋಪಾಪವಾಗಿ ನೋಡಿಕೋ ಎಂದು ಜಿಲ್ಲೆಯ ವಿವಿಧೆಡೆ ಮಾತ್ರವಲ್ಲ ಹೊರಜಿಲ್ಲೆಗೂ ಹೋಗಿಬರುತ್ತಿದ್ದ ಕಾಲವದು. 

●ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ, ಎಡಗೈಯನ್ನು ಬಲಗೈ ನಂಬದಿರುವ ಕಾಲದಲ್ಲಿ ನಾವಿದ್ದೇವೆ. ನಿಯತ್ತಿಗೆ ಇನ್ನೊಂದು ಹೆಸರು ಎಂಬಂತ್ತಿದ್ದ ಯರವ ಹಾಗೂ ಕುರುಬ ಜನಾಂಗದಲ್ಲಿ ಕೆಲವರು ಕುಡಿತದ ದಾಸರಾಗಿ ಜೀವನವನ್ನೇ ಕಳೆದು ಕೊಂಡಿದ್ದಾರೆ, ಉಳಿದವರಲ್ಲಿ ಕೆಲವರು ಮತಾಂತರಕ್ಕೆ ಒಳಗಾಗಿ ಪಟ್ಟಣ ಸೇರಿದ್ದಾರೆ. 

●ಚೆನ್ನಾಗಿ ಇರುವವರಲ್ಲಿ ಕೆಲವರು ಆಯಾಯ ಮಾಲಿಕರ ಮನೆಯಲ್ಲಿ ಸೇಫಾಗಿದ್ದಾರೆ. ಇನ್ನು ಉಳಿದ ಜನಾಂಗದ ಕಾರ್ಮಿಕರ ಸಂಬಳ ಗಗನಕೇರಿದೆ. ಕಾಫಿಯ ಬೆಲೆ ಮಾತ್ರ ಕಳೆದ ಹತ್ತು ವರ್ಷದ ಹಿಂದೆ ಎಷ್ಟಿತ್ತು ಅಷ್ಟೇ ಇದೆ. ಕರಿಮೆಣಸು ಬೆಲೆ ನೆಲ ಕಚ್ಚಿದೆ. ಇನ್ನು ಇವರಿಗೆ ಹೆಚ್ಚಿನ ಸಂಬಳವನ್ನು ಹೇಗೆ ನೀಡುವುದೆಂದು ಬೆಳೆಗಾರರ ಮಾತು.

●ಬೆಳೆಗಾರ ಹೇಳುವುದರಲ್ಲಿ ಅರ್ಥವಿದೆ, ಕಾಫಿಯ ಬೆಲೆ ಹತ್ತು ವರ್ಷದ ಹಿಂದೆ ಇದ್ದಷ್ಟೆ ಇದೆ, ಆದರೆ ಅದರ ನಿರ್ವಹಣೆಯ ವೆಚ್ಚ ಗೊಬ್ಬರದಿಂದ ಹಿಡಿದುಕೊಂಡು ಔಷಧಿಗಳವರೆಗೂ ದುಪ್ಪಟ್ಟಾಗಿದೆ. ಇನ್ನು ಕಾರ್ಮಿಕರು ಕೂಡ ದುಬಾರಿಯಾಗುತ್ತಿದ್ದಾರೆ, ಇದನ್ನು ನೋಡಿ ಒಂದಷ್ಟು ಕಡಿಮೆ ಸಂಬಳಕ್ಕೆ ಬರುವ ಹೊರಗಿನವರಿಗೆ ಬೆಳೆಗಾರ ಮಣೆಹಾಕುತಿದ್ದಾನೆ.

●ಆದರೆ ವಿಷಯ ಇದಲ್ಲಾ, ಪರಿಸ್ಥಿತಿ ಹೀಗೆ ಮುಂದುವರಿದರೆ ಸ್ಥಳೀಯ ಕಾರ್ಮಿಕರಿಗೂ ಕೆಲಸವಿಲ್ಲದಾಗುತ್ತೆ ಮಾತ್ರವಲ್ಲ ಹತ್ತಾರು ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ. ಇದು ಸ್ಥಳೀಯ ಕಾರ್ಮಿಕರಿಗೂ ಗೊತ್ತಾಗುತಿಲ್ಲ.

●ಇನ್ನು ಬೆಳೆಗಾರ ಈ ಮಧ್ಯವರ್ತಿ ದಲ್ಲಾಳಿಯ ಹಿಂದೆ ಬಿದ್ದು, ಗೊತ್ತು ಗುರಿ ಇಲ್ಲದ ಯಾವುದೋ ದೇಶದ ಯಾವುದೋ ರಾಜ್ಯದ ಕಾರ್ಮಿಕರಿಗೆ ಮಣೆ ಹಾಕುತ್ತಿದ್ದು, ಮುಂದೊಂದು ದಿವಸ ಇವತ್ತು ಅಫ್ಘಾನಿಸ್ತಾನಕ್ಕೆ ಆಗಿರುವ ಪರಿಸ್ಥಿತಿ ಕೊಡಗಿಗೂ ಬಂದೊದಗಲಿದೆಯಾ ಎಂಬ ಆತಂಕ ಎದುರಾಗಿದೆ.

●ವಿಷಯ ಹಗುರವಾಗಿ ಕಂಡರೂ ವಾಸ್ತವ ಕೂಡ, ಈ ಬಗ್ಗೆ ಬೆಳೆಗಾರರು ಚಿಂತಿಸಬೇಕಿದೆ. ಯಾವುದೋ ಗೊತ್ತು ಗುರಿಯಿಲ್ಲದ ಕಾರ್ಮಿಕರಿಗೆ ಮಣೆ ಹಾಕಿ ಕಾರ್ಮಿಕರ ಸೋಗಿನಲ್ಲಿ ಉಗ್ರರು ಸೇರಿದಂತೆ ಅಪರಾಧ ಹಿನ್ನಲೆ ಉಳ್ಳವರಿಗೆ ಆಶ್ರಯ ನೀಡುವ ಬದಲು ಚಿಂತಿಸಬೇಕಿದೆ.

●ಊರೂರಿನಲ್ಲಿ ಸಭೆಗಳನ್ನು ನಡೆಸಿ ಸ್ಥಳೀಯ ಕಾರ್ಮಿಕರಿಗೂ ವಂಚನೆಯಾಗದಂತೆ ಹಾಗೂ ಬೆಳೆಗಾರನಿಗೂ ಅನ್ಯಾಯ ಆಗದಂತೆ ಕೂಲಿಯನ್ನು ನಿಗದಿ ಮಾಡಿ ಜಿಲ್ಲೆಯಾದ್ಯಂತ ಜಾರಿಗೆ ತರಬೇಕಿದೆ.

●ಇದಕ್ಕೆ ಒಪ್ಪಿದವರು ಕೆಲಸಕ್ಕೆ ಬರುತ್ತಾರೆ ಇಲ್ಲವೆಂದರೆ ಒಂದಿಷ್ಟು ಕಷ್ಟವಾಗಬಹುದು ನಂತರ ಎಲ್ಲಾವು ಸರಿ ಹೋಗುತ್ತೆ. ಅದುಬಿಟ್ಟು ದಾರಿಯಲ್ಲಿ ಹೋಗುವ ಮಾರಿಯನ್ನು ಕರೆದು ಮನೆಯೊಳಗೆ ಬಿಟ್ಟುಕೊಳ್ಳುವುದು ಎಷ್ಟು ಸರಿ. ಈ ಬಗ್ಗೆ ಬೆಳೆಗಾರರು ಸೇರಿದಂತೆ ಕಾರ್ಮಿಕರು ಕೂಡ ಚಿಂತಿಸಬೇಕಿದೆ. ಕಾರಣ ಇಬ್ಬರ ಭವಿಷ್ಯ ಕೂಡ ಇಲ್ಲೆ ನಿಂತಿದೆ. ಹಾಗೇ ಕೊಡಗು ಮತ್ತೊಂದು ಅಫ್ಘಾನಿಸ್ತಾನವಾಗದಿರಲಿ ಎನ್ನುವುದು ನನ್ನ ಬಯಕೆ. ಮಾಡಲು ಕೆಲಸವಿಲ್ಲದೆ ಈ ಬರಹವನ್ನು ಬರೆಯಲಾಗಿಲ್ಲ, ಅಥವಾ ಯಾವುದೇ ದುರುದ್ದೇಶ ಕೂಡ ಈ ಲೇಖನದಲ್ಲಿ ಇಲ್ಲ. ಒಂದಷ್ಟು ಸತ್ಯಕ್ಕೆ ಕನ್ನಡಿ ಹಿಡಿಯುವ ಕೆಸಸ ಮಾಡಿದ್ದೇನೆ ಅಷ್ಟೇ. ಅರ್ಥ ಮಾಡಿಕೊಂಡು ಓದಿ, ಚಿಂತಿಸಿ ನಂತರ ತಿರ್ಮಾನ ಕೈಗೊಳ್ಳಿ ಕೊಡಗಿನ ಭವಿಷ್ಯ ಬೆಳೆಗಾರ ಹಾಗೂ ಸ್ಥಳೀಯ ಕಾರ್ಮಿಕರ ಕೈಯಲ್ಲಿದೆ.

ಅತಿಯಾದ ಪ್ರವಾಸೋದ್ಯಮ ಹಾಗೂ ಗೊತ್ತು ಗುರಿಯಿಲ್ಲದ ಹೊರ ರಾಜ್ಯದ ಕಾರ್ಮಿಕರು ಇವೆರಡು ಕೂಡ ಒಂದೇ ನಾಣ್ಯದ ಎರಡು ಮುಖಗಳು.

✍️....ಚಮ್ಮಟೀರ ಪ್ರವೀಣ್ ಉತ್ತಪ್ಪ

                   ( ಪತ್ರಕರ್ತರು )

ಮೊ: 9880967573

( ಚಮ್ಮಟೀರ ಪ್ರವೀಣ್ ಉತ್ತಪ್ಪ )

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,