Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಮರಾಠ/ಮರಾಠಿ ಸಂಘದ ಜಿಲ್ಲಾಧ್ಯಕ್ಷರಾಗಿ ಕೆದಮುಳ್ಳೂರಿನ ಎಂ.ಎಂ.ಪರಮೇಶ್ವರ್ ಮರು ನೇಮಕ

ಕೊಡಗು ಮರಾಠ/ಮರಾಠಿ ಸಂಘದ ಜಿಲ್ಲಾಧ್ಯಕ್ಷರಾಗಿ ಕೆದಮುಳ್ಳೂರಿನ ಎಂ.ಎಂ.ಪರಮೇಶ್ವರ್ ಮರು ನೇಮಕ


ಕೊಡಗು ಜಿಲ್ಲಾ ಮರಾಠ/ಮರಾಟಿ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ್ ಮರು ನೇಮಕಗೊಂಡಿದ್ದಾರೆ. ಮಡಿಕೇರಿ ತಾಲೂಕಿನ ತಾಳತ್ತಮನೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವ ಪರಮೇಶ್ವರ್‌ರವರು ಪ್ರಸಕ್ತ ಸಾಲಿನಲ್ಲಿನ ಸಂಘದ ಜಿಲ್ಲಾಧ್ಯಕ್ಷರಾಗಿ ಮುಂದುವರೆಯುವಂತೆ ಸಮಾಜ ಬಾಂಧವರ ಅಭಿಪ್ರಾಯ ಪಡೆದು ನೇಮಕ ಮಾಡಲಾಯಿತು.

ಉಪಾಧ್ಯಕ್ಷರಾಗಿ ದೇವಕ್ಕಿ ಜಿ.ಆರ್.ನಾಯ್ಕ್, ಕಾರ್ಯದರ್ಶಿಯಾಗಿ ಎಂ.ಈ.ಪವನ್ ಕುಮಾರ್, ಉಪಕಾರ್ಯದರ್ಶಿಯಾಗಿ ಎ.ಎಂ.ನರಸಿಂಹ, ಕೋಶಾಧಿಕಾರಿಯಾಗಿ ಎಂ.ಎಸ್.ಕಾಂತಿ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಟಿ.ದೇವಪ್ಪ ಆಯ್ಕೆಗೊಂಡರು.

ಪೊನ್ನಂಪೇಟೆ ತಾಲೂಕಿನ ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎಸ್.ದಿವ್ಯಕುಮಾರ್, ವಿರಾಜಪೇಟೆ ತಾಲೂಕಿನ ಸಂ.ಕಾ ಯಾಗಿ ಎಂ.ಟಿ.ರಾಘವ್ ನಾಯ್ಕ್, ಕುಶಾಲನಗರ ತಾಲೂಕಿನ ಸಂ.ಕಾ ಯಾಗಿ ಎಂ.ಸಿ.ಗಣೇಶ್ ದೊಡ್ಡತ್ತೂರ್, ಸೋಮವಾರಪೇಟೆ ತಾಲೂಕಿನ ಸಂಘಟನಾ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ನೇಮಕ ಮಾಡಲಾಯಿತು.

ಸದಸ್ಯರಾಗಿ ರತ್ನಮಂಜರಿ, ಎಂ.ಎ.ಕುಮಾರ್, ಸಂತೋಷ್, ಗೂವಮ್ಮ, ಎಂ.ಎಸ್.ಗಣೇಶ್, ಎಂ.ಎಸ್.ವೆಂಕಪ್ಪ, ಸಂಪತ್, ಡಿ.ಸಿ.ತಿಮ್ಮಯ್ಯ, ಎಂ.ಎ.ಐತಪ್ಪ, ಎಂ.ಪಿ.ಸುರೇಶ್, ಶಶಿಕಾಂತ್ ನೇಮಕ ಮಾಡಲಾಯಿತು. ಸಲಹಾ ಸಮಿತಿ ಸದಸ್ಯರಾಗಿ ಜಿ.ಆರ್.ನಾಯ್ಕ್, ಎಂ.ಕೆ.ಬಾಬು ಪಾಲಂಗಾಲ, ಎಂ.ಎಸ್.ಮAಜುನಾಥ್, ಚೆನಿಯಪ್ಪ, ವಿಶ್ವನಾಥ್ ನೇಮಕ ಮಾಡಲಾಯಿತು.

ಮಹಿಳಾ ಘಟಕದ ಅಧ್ಯಕ್ಷರಾಗಿ ರತ್ನಮಂಜರಿ ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ಹೂವಮ್ಮ, ಗೌರವಾಧ್ಯಕ್ಷರಾಗಿ ಕಲಾವತಿ ಬಾಬುನಾಯ್ಕ್ರನ್ನು ನೇಮಕ ಮಾಡಲಾಯಿತು. ಕಟ್ಟಡ ಸಮಿತಿಯ ಅಧ್ಯಕ್ಷರಾಗಿ ಎಂ.ಟಿ.ಗುರುವಪ್ಪ, ಗೌರವ ಅಧ್ಯಕ್ಷರಾಗಿ ಎಂ.ಎಂ.ಪರಮೇಶ್ವರ್, ಕಾರ್ಯದರ್ಶಿಯಾಗಿ ಎಂ.ಎಸ್.ಯೋಗೇಂದ್ರ, ಸದಸ್ಯರಾಗಿ ಎಂ.ಬಿ.ಪೂವಪ್ಪ, ಎಂ.ಸಿ.ವಾಮನ ನಾಯ್ಕ್, ಭೀಮಯ್ಯ ಹಾಗೂ ಕುಮಾರ್ ಆಯ್ಕೆಯಾದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,