Header Ads Widget

Responsive Advertisement

ಕಾಫಿ ತೋಟಗಳಲ್ಲಿ ಕಾಯಿ ಕೊರಕ ಕೀಟದ ಸಮಸ್ಯೆ ಉಲ್ಬಣವಾಗುವ ಸಂಭವ; ನಿಯಂತ್ರಣ ಕ್ರಮಗಳನ್ನು ತಕ್ಷಣವೆ ಕೈಗೊಳಲು ಕಾಫಿ ಮಂಡಳಿ ಶಿಫಾರಸ್ಸು

ಕಾಫಿ ತೋಟಗಳಲ್ಲಿ ಕಾಯಿ ಕೊರಕ ಕೀಟದ ಸಮಸ್ಯೆ ಉಲ್ಬಣವಾಗುವ ಸಂಭವ; ನಿಯಂತ್ರಣ ಕ್ರಮಗಳನ್ನು ತಕ್ಷಣವೆ ಕೈಗೊಳಲು ಕಾಫಿ ಮಂಡಳಿ ಶಿಫಾರಸ್ಸು


ಮಡಿಕೇರಿ ಸೆ.09: ಪ್ರಸಕ್ತ ಸಾಲಿನ ವರ್ಷದಲ್ಲಿ ಕಾಫಿ ಬೆಳೆಯುವ ಹೆಚ್ಚಿನ ಪ್ರದೇಶಗಳಲ್ಲಿ ಜನವರಿ ಹಾಗು ಫೆಬ್ರವರಿ ತಿಂಗಳಿನಲ್ಲಿ ಮಳೆಯಾಗಿದ್ದು, ಇದರಿಂದ ಒಂದಕ್ಕಿಂತ ಹೆಚ್ಚು ಬಾರಿ ಕಾಫಿಯಲ್ಲಿ ಹೂವಾಗಿ ವಿವಿಧ ಗಾತ್ರದ ಕಾಯಿಗಳ ಬೆಳವಣಿಗೆಯಾಗಿದೆ. ಕಳೆದ ಸಾಲಿನ ಕೊಯ್ಲಿನ ಸಮಯದಲ್ಲಿ ಅಕಾಲಿಕ ಮಳೆಯಾಗಿದ್ದರಿಂದ ಕೊಯ್ಲು ತಡವಾಗಿ ಸಾಕಷ್ಟು ಹಣ್ಣು ಉದುರಿರುವುದು ಕಂಡುಬಂದಿದೆ. ಆದ್ದರಿಂದ ಈ ವರ್ಷ ತೋಟಗಳಲ್ಲಿ ಕಾಯಿ ಕೊರಕ ಕೀಟದ ಸಮಸ್ಯೆ ಉಲ್ಬಣವಾಗುವ ಸಂಭವವಿದೆ. ಕಾಯಿಗಳು ಬೇಗನೆ ಬೆಳೆದಿರುವುದು, ಬೀಜಗಳು ಗಟ್ಟಿಯಾದ ಕೂಡಲೆ ಕಾಯಿ ಕೊರಕದ ಹಾವಳಿಯನ್ನು ಹೆಚ್ಚಿಸುವ ಸೂಕ್ತ ವಾತಾವರಣವನ್ನು ಒದಗಿಸಿದೆ. ಆದ್ದರಿಂದ ನಿಯಂತ್ರಣ ಕ್ರಮಗಳನ್ನು ತಕ್ಷಣವೆ ಕೈಗೊಳಲು ಶಿಫಾರಸ್ಸು ಮಾಡಲಾಗಿದೆ.

ಈಗ ತೋಟಗಳಲ್ಲಿ ಕಾಫಿ ಕಾಯಿ ಕೊರಕದ ಬಾಧೆಯ ಇರುವಿಕೆಯನ್ನು ಪತ್ತೆ ಹಚ್ಚುವ ಸಮಯ. ಕೀಟಬಾಧೆಯಿದ್ದಲ್ಲಿ ಕಾಯಿಗಳ ನಾಭಿಯ ಪಕ್ಕ ಸಣ್ಣ ಕಪ್ಪು ಕೀಟ ಅಥವಾ ಪುಡಿಯ ರಾಶಿ ಅಥವಾ ಸಣ್ಣ ರಂಧ್ರವನ್ನು ಕಾಣಬಹುದು. ಕಾಯಿ ಕೊರಕ ದುಂಬಿಗಳು ಕಂಡುಬಂದರೆ 200 ಲೀ ನೀರಿಗೆ 600 ಕ್ಲೋರೋಪ್ಯೂರಿಪಾಸ್ 20ಇಸಿ ಹಾಗು 200 ಎಂಎಲ್ ಅಂಟು ದ್ರಾವಣವನ್ನು ಬೆರಸಿ ಫಸಲು ಇರುವ ರೆಕ್ಕೆಗಳಿಗೆ ಸಿಂಪಡಿಸಬಹುದು. ಅಲ್ಲಲ್ಲಿ ಚದುರಿದ ಬಾದೆ ಕಂಡುಬಂದಲ್ಲಿ ಸ್ಪಾಟ್ ಅಥವ ಸ್ಥಳೀಯ ಸಿಂಪರಣೆಯನ್ನು ಮಾಡಬಹುದು. 

ಇದರ ಬದಲಿಗೆ ಕೀಟದ ಬಾಧೆ ಕಡಿಮೆ ಮಾಡಲು 200 ಲೀ ನೀರಿಗೆ 1.5 ಕೆ.ಜಿ. ಬಿವೆರಿಯ ಬ್ಯಾಸಿಯಾನ ಹಾಗು 100 ಎಂ.ಎಲ್ ಅಂಟು ದ್ರಾವಣವನ್ನು ಬೆರೆಸಿ ಸಿಂಪಡಿಸಬೇಕು. ಸಿಂಪರಣೆಯು ಪರಿಣಾಮಕಾರಿಯಾಗಲು ವಾತಾವರಣದಲ್ಲಿ ಶೇ. 70 ಕ್ಕೂ ಹೆಚ್ಚು ತೇವಾಂಶ ಹಾಗು 300 ಗಿಂತ ಕಡಿಮೆ ತಾಪಮಾನವಿರುವಾಗ ಈ ಸಿಂಪರಣೆಯನ್ನು ಮಾಡಬೇಕು. 

ಬಿವೆರಿಯ ಬ್ಯಾಸಿಯಾನ ಅಥವ ಕೀಟನಾಶಕದ ಸಿಂಪರಣೆಯನ್ನು ಕೀಟಗಳು ಬೀಜಗಳ ಒಳಗೆ ಹೋಗುವ ಮುನ್ನವೇ ಮಾಡಬೇಕು. ಕಾಫಿ ಸಂಶೋಧನಾ ಉಪ ಸಂಸ್ಥೆ, ಚೆಟ್ಟಳ್ಳಿಯಲ್ಲಿ ಬಿವೆರಿಯ ಬ್ಯಾಸಿಯಾನ ಉತ್ಪಾದನೆಯ ತರಬೇತಿಯನ್ನು ನೀಡಲಾಗುತ್ತದೆ ಎಂದು ಮಡಿಕೇರಿ ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,