Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗು ಪ್ರವಾಸೋದ್ಯಮ ಅವಲಂಬಿತರಲ್ಲಿ Save Kodagu from Tourism ಸಂಘಟನೆಯಿಂದ ಕೆಲವು ಪ್ರಶ್ನೆಗಳು.?

ಕೊಡಗು ಪ್ರವಾಸೋದ್ಯಮ ಅವಲಂಬಿತರಲ್ಲಿ Save Kodagu from Tourism ಸಂಘಟನೆಯಿಂದ ಕೆಲವು ಪ್ರಶ್ನೆಗಳು.?


● ಟೂರಿಸಂ ಸಂಪೂರ್ಣ ಬೇಡವೇ ಬೇಡ ಎಂದವರಾರು.?

● ಕೊಡಗು ಟೂರಿಸಂನಿಂದಲೇ ನಿಂತಿದೆ ಎಂಬ ರೀತಿಯಲ್ಲಿ ಬಿಂಬಿಸುತ್ತಿರುವವರು ಯಾರು.?

●ಕಾವೇರಿ ತುಲಾಸಂಕ್ರಮಣ ಹಾಗೂ ವಿಧ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಾತ್ಕಾಲಿಕವಾಗಿ ಟೂರಿಸಂ ನಿಲ್ಲಿಸಿ ಎಂದರೆ, ಅದಕ್ಕೆ ವಿರೋಧಿಗಳು ಎಂಬ ಹಣೆಪಟ್ಟಿಯನ್ನು ಕಟ್ಟುತ್ತಿರುವವರು ಯಾರು.?

●ಸೇವ್ ಕೊಡಗು ಫ್ರಮ್ ಟೂರಿಸಂ ಎನ್ನುವುದು ಸಂಪೂರ್ಣವಾಗಿ ಟೂರಿಸಂ ವಿರೋಧಿ ಸಂಘಟನೆ ಎಂಬಂತೆ ಬಿಂಬಿಸುತ್ತಿರುವವರು ಯಾರು.?

● ಇಷ್ಟಕ್ಕೂ ನಮ್ಮ ಸಂಘಟನೆಯಲ್ಲಿರುವವರು ಪ್ರವಾಸವೇ ಹೋಗದೆ ಇರುವ ಹಳ್ಳಿಗುಗ್ಗುಗಳಾ.?

● ಅಥವಾ ಪ್ರವಾಸಿಗರನ್ನೇ ಜಿಲ್ಲೆಗೆ ಬರಬೇಡಿ ಎನ್ನುವಷ್ಟು ಮೂರ್ಖರೇ.?

● ಒಮ್ಮೆ ಪ್ರವಾಸೋದ್ಯಮವನ್ನು ನಂಬಿಕೊಂಡು ಕೊಡಗಿನಲ್ಲಿ ಶೇಕಡಾ 90% ಮತ್ತೊಮ್ಮೆ 75% ಇದೀಗ 25% ಇದ್ದಾರೆ ಎಂದು ದಿವಸಕ್ಕೊಂದು ರೀತಿಯ ಕಟ್ಟು ಕಥೆಯನ್ನು ಸತ್ಯದ ತಲೆಯಮೇಲೆ ಹೊಡೆದಂತೆ ಹೇಳುತ್ತಿರುವವರು ಯಾರು.?

●ಇಷ್ಟಕ್ಕೂ ಕೊಡಗಿನಲ್ಲಿರುವ ಎಲ್ಲಾ ಅಂಗಡಿ ಮುಗ್ಗಟ್ಟು ಸೇರಿದಂತೆ ಎಲ್ಲಾ ವ್ಯಾಪಾರಿಗಳು ಪ್ರವಾಸೋದ್ಯಮ ಅವಲಂಬಿತರು ಎಂಬಂತೆ ಬಿಂಬಿಸುತ್ತಿರುವ ಇವರಿಗೆ ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ, ಕಿತ್ತಳೆ, ಅಡಿಕೆ, ತೆಂಗು, ಬಾಳೆ, ಶುಂಠಿ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ ಸಾಕಣೆ, ಹಂದಿ, ಆಡು, ಕುರಿ, ಸೇರಿದಂತೆ ವಿವಿಧ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳು ಕಾಣುವುದೇ ಇಲ್ಲವೇ ಅಥವಾ ಇವೆಲ್ಲಾ ಪ್ರವಾಸೋದ್ಯಮಕ್ಕೆ ಸೇರುತ್ತದೆಯೇ.?

●ಇಷ್ಟಕ್ಕೂ ಸ್ಥಳೀಯ ಕೃಷಿಕರಿಂದ ದಿನನಿತ್ಯದ ವ್ಯಾಪಾರ ವ್ಯವಹಾರ ನಡೆಸುತ್ತಿರುವವರು ಕಣ್ಣಿಗೆ ಕಾಣುವುದೇ ಇಲ್ಲವೇ.?

●ಕೊಡಗಿನಲ್ಲಿರುವ ರೈತರನ್ನು ಹಾಗೂ ರೈತರನ್ನು ನಂಬಿ ವ್ಯಾಪಾರ ವ್ಯವಹಾರಗಳ ಬದುಕು ಕಟ್ಟಿಕೊಂಡವರನ್ನು ಅವಲಂಬಿತರೆಂದರೆ, ಕೃಷಿ ಅವಲಂಬಿತರು ಕೊಡಗಿನಲ್ಲಿ ಯಾರು ಇಲ್ಲವೇ.?

●ಮಾಧ್ಯಮಗಳು ಕೂಡ ಪ್ರವಾಸೋದ್ಯಮದ ಬದುಕು ಮೂರಾಬಟ್ಟೆ, ಪ್ರವಾಸೋದ್ಯಮ ಚೇತರಿಸಿಕೊಂಡಿದೆ, ಪ್ರವಾಸೋದ್ಯಮಕ್ಕೆ ಬೇಕಿದೆ ಪೂರಕ ವಾತಾವರಣ ಎಂದರೆ ಉಳಿದಿರುವ ಶೇಕಡಾ 90% ಕೃಷಿಕರು ಹಾಗೂ ಕೃಷಿ ಅವಲಂಬಿತ ವ್ಯಾಪಾರಿಗಳು ಸೇರಿದಂತೆ ವಿವಿಧ ಖಾಸಗಿ ಹಾಗೂ ಸರಕಾರಿ ಉದ್ಯೋಗದ ನಿಮಿತ ಬದುಕು ಕಟ್ಟಿಕೊಂಡವರೆಲ್ಲಾರು ಪ್ರವಾಸೋದ್ಯಮ ಅವಲಂಬಿತರೇ.?

●ಕೊಡಗಿನಲ್ಲಿ ಕರ್ಫ್ಯೂ ತೆರವುಗೊಳಿಸುವಾಗ ಶೇಕಡಾ 0.05% ಇದ್ದ ಪಾಸಿಟಿವಿಟಿ ದರ ಇದೀಗ ತೆರವುಗೊಂಡು ಎರಡು ವಾರ ಕಳೆಯಿತಲ್ಲವೇ ಇದೀಗ ಪಾಸಿಟಿವಿಟಿ ದರ ಎಷ್ಟಿದೆ.?

●ಕರ್ಫ್ಯೂ ತೆರವುಗೊಂಡ ನಂತರ ಸರಾಸರಿ ತೆಗೆದುಕೊಂಡರು ಪ್ರತಿನಿತ್ಯ ಶೇಕಡಾ 2ಕ್ಕಿಂತ ಅಧಿಕ ಇದೆಯಲ್ಲಾ ಕಾವೇರಿ ತುಲಾಸಂಕ್ರಮಣದಂದು ಅಧಿಕವಾದರೆ ಹೇಗೆ.?

●ಪ್ರವಾಸೋದ್ಯಮ, ಪ್ರವಾಸೋದ್ಯಮ ಎಂದು ಬೊಬ್ಬೆ ಇಡುವವರಿಗೆ ಸ್ಥಳೀಯವಾಗಿ ಬದುಕುಕಟ್ಟಿಕೊಂಡ ಜನರ ಬದುಕು ಹಾಗೂ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ಬೆಲೆಯೇ ಇಲ್ಲವೇ.?

●ಕಾವೇರಿ ತುಲಾಸಂಕ್ರಮಣ ಸಮಯದಲ್ಲಿ ಸೋಂಕು ಅಧಿಕವಾಗಿ ಇಲ್ಲಿನ ಮೂಲನಿವಾಸಿಗಳ ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಲು ಅಡಚಣೆ ಆದರೆ ಇದಕ್ಕೆ ಹೊಣೆ ಯಾರು.?

●ಕೊಡಗನ್ನು ಪ್ರವಾಸೋದ್ಯಮ ಅವಲಂಬಿತ ಜಿಲ್ಲೆಯಂತೆ ಬಿಂಬಿಸುತ್ತಿರುವವರಿಗೆ ಕೊಡಗಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇನೆಯ ಸಂಬಳದಿಂದ ಬದುಕು ಕಟ್ಟಿಕೊಂಡ ಕುಟುಂಬಗಳನ್ನು, ಪಿಂಚಣಿಯ ಮೂಲಕ ಬದುಕು ಸಾಗಿಸುತ್ತಿರುವ ಸಂಸಾರಗಳನ್ನು ಕಾಣುವುದೇ ಇಲ್ಲವೇ, ಇವರು ಕೂಡ ಪ್ರವಾಸೋದ್ಯಮ ಅವಲಂಬಿತರೇ.?

●ಪ್ರವಾಸೋದ್ಯಮ ಅವಲಂಬಿತರು ಸಂಕಷ್ಟದಲ್ಲಿದ್ದಾರೆ, ಅವರ ಬದುಕು ಅತಂತ್ರವಾಗಿದೆ ಎಂದು ಬಾಯಿ ಬಡಿದುಕೊಳ್ಳುವವರಲ್ಲಿ  ಯಾರಾದರೊಬ್ಬರಾದರೂ ಈ ಹಿಂದೆ ಸಹಾಯದ ಕಿಟ್ ಪಡೆದುಕೊಳ್ಳುವ ಸ್ಥಿತಿಗೆ ತಲುಪಿದ್ದಾರಾ ಅಥವಾ ಪಡೆದುಕೊಂಡಿದ್ದಾರಾ.? 

● ಇಷ್ಟಕ್ಕೂ ಪ್ರವಾಸೋದ್ಯಮ ಅವಲಂಬಿತರಲ್ಲಿ ಸ್ಥಳೀಯರು ಎಷ್ಟಿದ್ದಾರೆ ಹಾಗೂ ಹೊರ ಜಿಲ್ಲೆ ಹೊರ ರಾಜ್ಯದಿಂದ ಈ ಉದ್ದೇಶದಿಂದಲೇ ಬಂದವರು ಎಷ್ಟಿದ್ದಾರೆ.?

● ಪ್ರವಾಸೋದ್ಯಮದಿಂದ ನಿಮ್ಮ ನೆರೆಮನೆ ಹಾಗೂ ಊರಿಗೆ ಆದ ಪ್ರಯೋಜನ ಏನು.?

● ಇಷ್ಟಕ್ಕೂ ಪ್ರವಾಸೋದ್ಯಮ ಅವಲಂಬಿತರು ದೇಶಕ್ಕೆ ಎಷ್ಟು ಸಂಖ್ಯೆಯಲ್ಲಿ ತೆರಿಗೆ ಕಟ್ಟಿದ್ದಾರೆ ಹಾಗೂ ಕಟ್ಟುತ್ತಿದ್ದಾರೆ.?

● ಇಷ್ಟಕ್ಕೂ ಕೊಡಗಿನ ಮೂಲನಿವಾಸಿಗಳ ಭಾವನೆಗೆ ಬೆಲೆಯೇ ಇಲ್ಲವೇ.?!!!!

■ಈ ಎಲ್ಲಾ ಪ್ರಶ್ನೆಗಳಿಗೆ ಅವಲಂಬಿತರಿಂದ ಉತ್ತರ ಇದೇಯಾ.?

✍️....S.K.F.T

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,