Header Ads Widget

ಸರ್ಚ್ ಕೂರ್ಗ್ ಮೀಡಿಯ

ಶಾಂತೆಯಂಡ ರವಿಕುಶಾಲಪ್ಪ ಅವರಿಗೆ ಅಭಿನಂದನೆ

ಶಾಂತೆಯಂಡ ರವಿಕುಶಾಲಪ್ಪ ಅವರಿಗೆ ಅಭಿನಂದನೆ


ಮಡಿಕೇರಿ ಅ.29: ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರಿಗೆ ಕ್ಯಾಬಿನೆಟ್ ದರ್ಜೆ ಹುದ್ದೆ ನೀಡಿರುವ ಹಿನ್ನೆಲೆ ಕೊಡವ ಭಾಷಿಕ ಕೂಟ ವತಿಯಿಂದ ಶುಕ್ರವಾರ ನಗರದ ಜಿ.ಪಂ. ಕಚೇರಿಯಲ್ಲಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರನ್ನು ಭೇಟಿ ಮಾಡಿ ಗೌರವ ಸಮರ್ಪಿಸಲಾಯಿತು. 

        ಕೊಡವ ಭಾಷಿಕ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಷ್ ನಾಣಯ್ಯ, ಕಾರ್ಯದರ್ಶಿ ಕೂಡಂಡ ಸಬಾ ಸುಬ್ರಮಣಿ, ಸಮಿತಿ ಸದಸ್ಯರಾದ ತೊರೆರ ಕಾಶಿ ಕಾರ್ಯಪ್ಪ, ವೇದಪಂಡ ಕಿರಣ್, ಕಣಿಯಂಡ ಪ್ರಕಾಶ್, ಕೊಲೆಯಂಡ ಕಾರ್ಯಪ್ಪ, ಕಾಪಾಳರ ಮಿಲನ್, ಬೇಕಚಂಡ ಬೆಳ್ಯಪ್ಪ, ಮಲೆಯರ ಮುತ್ತಪ್ಪ ಇತರರು ಇದ್ದರು.

       ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಹಾಗೂ ಜಾನಪದ ಸಾಂಸ್ಕøತಿಕ ಕೇಂದ್ರಕ್ಕೆ ಹೊದ್ದೂರು ಗ್ರಾಮದಲ್ಲಿ ಗುರುತಿಸಲಾಗಿರುವ ಜಾಗವನ್ನು ಸರ್ವೇ ಮಾಡಿಸಿಕೊಡಬೇಕಾಗಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,