* ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿ ದಿನದಂದು ಪಟಾಕಿ ಹೊಡೆಯಬಾರದು ಎಂದು ಅವಾಜ್ ಹಾಕಿದ ಪೊಲೀಸ್ ಪೇದೆ.!
* ದೌರ್ಜನ್ಯಕ್ಕೆ ಮುಂದಾದ ಪೊಲೀಸ್ ಪೆದೆಯ ಮೇಲೆ ಕ್ರಮ ಕೈಗೊಳ್ಳಲು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಘಟನೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಪದೇಪದೇ ಇಂತಹ ಹಲವಾರು ಘಟನೆಗಳು ಮರುಕಳಿಸುತ್ತಿದ್ದು, ಮೂಲ ನಿವಾಸಿಗಳ ಹಬ್ಬಕ್ಕೆ ತೊಂದರೆ ಮಾಡುತ್ತಿರುವ ಹಾಗೂ ಹಬ್ಬದಂದು ರಾತ್ರಿ ಮನೆಯ ಕಾಂಪೌಂಡ್ ಒಳಗೆ ನುಗ್ಗಿ ಅವಾಜ್ ಹಾಕಿದ ಪೊಲೀಸ್ ಪೇದೆಯ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಕಾನೂನಿನಡಿಯಲ್ಲಿ ರಾತ್ರಿ 10ಗಂಟೆಯವರೆಗೆ ಪಟಾಕಿ ಸಿಡಿಸಲು ಅವಕಾಶವಿದೆ. ದೆಹಲಿಯಂತಹ ಕೆಲವೆಡೆ ಪಟಾಕಿ ರದ್ದಾಗಿದ್ದರು ಕೂಡ ಇತರ ಹಬ್ಬದ ದಿವಸ ಪಟಾಕಿಯನ್ನು ಸಿಡಿಸಿದ್ದಾರೆ. ಹೀಗಿರುವಾಗ ಕೊಡಗಿನ ಪ್ರಮುಖ ಹಬ್ಬದ ದಿವಸ ಪಟಾಕಿ ಸಿಡಿಸಬಾರದು ಎಂದು ಹೇಳಲು ಈತ ಯಾರು. ನೆರೆಕರೆಯವರ ಬಗ್ಗೆ ಹೊರ ಜಿಲ್ಲೆಯಿಂದ ಬಂದ ಈತನಿಗೇನು ಅರಿವಿದೆ. ಕೊಡಗಿನ ಜನರು ನೆರೆಕರೆಯವರ ಬಗ್ಗೆ ಹೆಚ್ಚಿನ ಗಮನ ಕೊಡುವವರು ಎಂದು ಮೊದಲು ಈ ಪೊಲೀಸ್ ಪೇದೆ ತಿಳಿದುಕೊಳ್ಳಬೇಕಿದೆ. ಕೊಡಗಿನ ಪ್ರಮುಖ ಹಬ್ಬವಾದ ಪುತ್ತರಿ ದಿನದಂದು ಪಟಾಕಿ ಹೊಡೆಯಬಾರದು ಎಂದು ಅವಾಜ್ ಹಾಕಲು ಈತ ಯಾರು. ಅದರಲ್ಲೂ ಸೊಂಟದ ಕೆಳಗಿನ ಪದಗಳನ್ನು ಬಳಕೆ ಮಾಡುವ ಮೂಲಕ ಈತ ಕೊಡವ ಜನಾಂಗಕ್ಕೆ ಅವಮಾನ ಮಾಡಿದ್ದಾನೆ. ಕೂಡಲೇ ಈತ ಜನಾಂಗದ ಕ್ಷಮೆ ಕೇಳಬೇಕು ಹಾಗೂ ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ ಇಲ್ಲದಿದ್ದರೆ ಈ ವಿಷಯದಲ್ಲಿ ಮುಂದೆ ಏನು ಮಾಡಬೇಕು ಎಂದು ನಾವು ಚರ್ಚಿಸಿ ತಿರ್ಮಾನ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಜನಾಂಗದ ಮೇಲೆ ದೌರ್ಜನ್ಯ ನಡೆಯುತ್ತಿದೆ, ಇದೀಗ ಹಬ್ಬದ ವಿಚಾರದಲ್ಲಿ ನಮ್ಮನ್ನು ಹತ್ತಿಕ್ಕಲೂ ನೋಡುತ್ತಿರುವುದು ಸರಿಯಲ್ಲಾ. ರಾಜ್ಯದ ಇತರ ಜನಾಂಗದ ಯಾವುದೇ ಹಬ್ಬಗಳಲ್ಲಿ ಪಟಾಕಿ ಹಾರಿಸುವಾಗ, ರಾತ್ರಿ ಹಗಲು ಎನ್ನದೆ ದ್ವನಿವರ್ಧಕ ಬಳಸುವಾಗ ಅಥವಾ ರಾತ್ರಿಯಿಡಿ ಪ್ರವಚನಗಳು ನಡೆದಾಗ ನಾವು ಎಲ್ಲಿಯೂ ಪ್ರಶ್ನೆ ಮಾಡಿಲ್ಲ, ಹಾಗೂ ನಮಗೆ ತೊಂದರೆಯಾದರೂ ಕೂಡ ಹಬ್ಬವೆಂದು ಅದನ್ನು ಸಹಿಸಿಕೊಂಡಿದ್ದೇವೆ. ಆದರೆ ಇದೀಗ ನಮ್ಮ ಪ್ರಮುಖ ಹಬ್ಬಕ್ಕೆ ಈ ರೀತಿಯ ಕಿರಿಕಿರಿಯನ್ನು ನಾವು ಸಹಿಸಿಕೊಳ್ಳಲು ಸಾದ್ಯವಿಲ್ಲ. ಈತನಿಗೆ ಪಟಾಕಿಯ ಸದ್ದು ಹಿಡಿಸದಿದ್ದರೆ ಆತ ಆ ದಿವಸ ರಜೆ ಪಡೆದುಕೊಂಡು ಈತನ ಊರಿಗೆ ಹೋಗಲಿ. ಅದುಬಿಟ್ಟು ನಮ್ಮ ಧಾರ್ಮಿಕ ಆಚರಣೆಯನ್ನು ಪ್ರಶ್ನೆ ಮಾಡಲು ಈತ ಯಾರು. ಕೋಳಿಯನ್ನು ಕೇಳಿ ಮಸಾಲೆ ಅರೆಯುವ ಅಗತ್ಯತೆ ನಮಗಿಲ್ಲ. ಸುಮ್ಮನೆ ಗೊಂದಲವನ್ನು ಸೃಷ್ಟಿಸಿ ಜನಾಂಗದ ಮೇಲೆ ಸವಾರಿ ಮಾಡಲು ಹೊರಟರೆ ಬೀದಿಗೆ ಇಳಿದು ಕಾನೂನು ರೀತಿಯ ಹೋರಾಟ ಮಾಡುವುದು ನಮಗೂ ಗೊತ್ತಿದೆ. ಅಸಹ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಜನಾಂಗವನ್ನು ಕೂಡ ನಿಂದನೆ ಮಾಡಿದ ಈತ ಕೂಡಲೇ ಜನಾಂಗದ ಕ್ಷಮೆ ಕೇಳಬೇಕು ಹಾಗೂ ಈತನ ಮೇಲೆ ಕ್ರಮ ಕೈಗೊಳ್ಳಬೇಕಿದೆ. ಈತನ ವರ್ತನೆ ಹಾಗೂ ಪದಬಳಕೆ ನೋಡಿದ್ದರೆ ಈತ ಕರ್ತವ್ಯದ ವೇಳೆ ಮದ್ಯಪಾನ ಮಾಡಿರುವ ಸಾದ್ಯತೆ ಹೆಚ್ಚಿದೆ, ಈತನ ಮೇಲೆ ಹೆಚ್ಚಿನ ತನಿಖೆಯಾಗಲಿ ಹಾಗೂ ಮನೆಯಲ್ಲಿ ಹೆಂಗಸರು ಮಕ್ಕಳು ಹಬ್ಬದ ಸಂಭ್ರಮದಲ್ಲಿರುವಾಗ ರಾತ್ರಿ ವೇಳೆ ಯಾವುದೇ ಲಿಖಿತ ದೂರು ಇಲ್ಲದೆ ಮನೆಯ ಗೇಟಿನೊಳಗೆ ಪ್ರವೇಶ ಮಾಡಿ ಮನೆಯಲ್ಲಿ ಹಬ್ಬದ ಸಂತಸವನ್ನು ಹಾಳು ಮಾಡಿದ ಈತನ ಅಗತ್ಯತೆ ಜಿಲ್ಲೆಗೆ ಬೇಕಾಗಿಲ್ಲ. ಈತ ಜಿಲ್ಲೆಯಲ್ಲಿದ್ದರೆ ಇನ್ನಷ್ಟು ಗೊಂದಲ ಸೃಷ್ಟಿ ಆಗುವ ಸಾದ್ಯತೆ ಹೆಚ್ಚಾಗಿದ್ದು, ಕೂಡಲೇ ಈತನ ಮೇಲೆ ಕ್ರಮ ಕೈಗೊಂಡು, ವರ್ಗಾವಣೆ ಮಾಡಬೇಕಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network