Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿದ್ಯುತ್ ಅಪಘಾತ ತಡೆಯಲು ಸಹಕರಿಸಿ; ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್‌ ಕೋರಿಕೆ

ವಿದ್ಯುತ್ ಅಪಘಾತ ತಡೆಯಲು ಸಹಕರಿಸಿ; ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್‌ ಕೋರಿಕೆ

(ಸಾಂದರ್ಭಿಕ ಚಿತ್ರ)

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವಿದ್ಯುತ್ ವಿತರಣೆಗೆ ನಿರ್ಮಿಸಿರುವ ಮಾರ್ಗಗಳ ಬಹುಭಾಗ ತೋಟಗಳಲ್ಲಿಯ ಮರಗಿಡಗಳ ಮಧ್ಯದಲ್ಲಿ ಹಾದು ಹೋಗಿದೆ. ತೋಟಗಳಲ್ಲಿ ಒಳ್ಳೆ ಮೆಣಸು ಕೀಳಲು ಮತ್ತು ಮರದ ಕೊಂಬೆಗಳನ್ನು ಕಡಿಯಲು ಅಲ್ಯೂಮಿನಿಯಂ ಏಣಿಗಳನ್ನು ಮತ್ತು ನೀರು ಹಾಯಿಸಲು ಅಲ್ಯೂಮಿನಿಯಂ ಸ್ಪಿಂಕ್ಲರ್ ಪೈಪ್‍ಗಳನ್ನು ಉಪಯೋಗಿಸುತ್ತಿದ್ದು, ಇವುಗಳು ವಿದ್ಯುತ್ ಮಾರ್ಗಕ್ಕೆ ತಾಗಿ ಆಗಿಂದಾಗ್ಗೆ ವಿದ್ಯುತ್ ಅಪಘಾತಗಳು ಸಂಭವಿಸುತ್ತಿವೆ. ಆದ್ದರಿಂದ ಅಲ್ಯೂಮಿನಿಯಂ/ ಕಬ್ಬಿಣದ ಏಣಿ ಬದಲು ಬಿದಿರು/ ಪೈಬರ್ ಏಣಿಗಳನ್ನೇ ಉಪಯೋಗಿಸಿ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಸಹಕರಿಸುವಂತೆ ಸಾರ್ವಜನಿಕರಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,