Header Ads Widget

ಸರ್ಚ್ ಕೂರ್ಗ್ ಮೀಡಿಯ

ಶನಿವಾರಸಂತೆಯಲ್ಲಿ ವಿಜಯ ದಿವಸ್ (ಬಾಂಗ್ಲಾ ವಿಮೋಚನಾ ದಿನ) ಆಚರಣೆ

ಶನಿವಾರಸಂತೆಯಲ್ಲಿ ವಿಜಯ ದಿವಸ್  (ಬಾಂಗ್ಲಾ ವಿಮೋಚನಾ ದಿನ) ಆಚರಣೆ                 


ದಿನಾಂಕ 18.12.2021 ರಂದು ಹಿಂದು ಜಾಗರಣ ವೇದಿಕೆ ಕೊಡಗು ಜಿಲ್ಲೆ ಹಿಂದು ಯುವ ವಾಹಿನಿ ಸೋಮವಾರಪೇಟೆ ತಾಲ್ಲೂಕು ನೇತೃತ್ವದಲ್ಲಿ ಶನಿವಾರಸಂತೆಯಲ್ಲಿ ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ಪ್ರಯುಕ್ತ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು.  


ಶನಿವಾರಸಂತೆಯ ಗೋಪಾಲಪುರದಿಂದ  ಬೈಕ್ ಜಾಥಾ ಹೊರಟು  ಬೆಂಬಳೂರು ಮಾರ್ಗವಾಗಿ ಕೊಡ್ಲಿಪೇಟೆ ಮೂಲಕ  ಶನಿವಾರಸಂತೆಯ ಕೆ. ಆರ್. ಸಿ. ಸರ್ಕಲ್ ತಲುಪಿತು ನಂತರ ಕೆ ಆರ್ ಸಿ ಸರ್ಕಲ್ ನಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.   


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ಮಹೇಶ್ ವಹಿಸಿದ್ದರು. 1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋದರದ ಕಾಜುರು ಗ್ರಾಮದ ಎಂ.ಎಸ್ ಪೊನ್ನಪ್ಪ, ಎಂ.ಎಸ್ ಕಾಳಪ್ಪ, ಅಪ್ಪಾಜಿ, ಶನಿವಾರಸಂತೆಯ ಕಳಲೇ ಗ್ರಾಮದ ಕೆ. ವಿ ಮಂಜುನಾಥ್ ಮತ್ತು ಪುಟ್ಟ ಸ್ವಾಮಿ  ಇವರನ್ನು ಸನ್ಮಾನಿಸಲಾಯಿತು. ಸೇವಾ ಭಾರತಿ ಜಿಲ್ಲಾ ಅಧ್ಯಕ್ಷರಾದ ಟಿ. ಸಿ. ಚಂದ್ರನ್ ಕಾರ್ಯಕ್ರಮದ ಬೌದ್ಧಿಕ್  ನೀಡಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುಭಾಸ್ ತಿಮ್ಮಯ್ಯ ಸಹ ಸಂಪರ್ಕ ಪ್ರಮುಖ್ ಎಂ. ಬಿ ಉಮೇಶ್  ತಾಲ್ಲೂಕು ಅಧ್ಯಕ್ಷರಾದ ಸುನಿಲ್ ಉಪಾಧ್ಯಕ್ಷರಾದ ಸಂದೀಪ್ ಪ್ರಧಾನ ಕಾರ್ಯದರ್ಶಿ ಬೊಜೇಗೌಡ  ಕಾರ್ಯದರ್ಶಿ ಲೋಕೇಶ್ ಹಿಂದು ಯುವ ವಾಹಿನಿ ಜಿಲ್ಲಾ ಪ್ರಮುಖ್ ಚೇತನ್ ವಲಯ  ಪ್ರಮುಖರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,