Header Ads Widget

Responsive Advertisement

ಭಾಗಮಂಡಲ ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ್ದರೆ ಸಂಘಟಿತ ಹೋರಾಟ ಅನಿವಾರ್ಯ; ಕೊಡಗು ಸಂರಕ್ಷಣಾ ಒಕ್ಕೂಟ ಎಚ್ಚರಿಕೆ

ಭಾಗಮಂಡಲ ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ್ದರೆ ಸಂಘಟಿತ ಹೋರಾಟ ಅನಿವಾರ್ಯ; ಕೊಡಗು ಸಂರಕ್ಷಣಾ ಒಕ್ಕೂಟ ಎಚ್ಚರಿಕೆ


ಭಗಂಡ ಕ್ಷೇತ್ರದಲ್ಲಿ ಅನಧಿಕೃತ ರೇಸಾರ್ಟ್ ತಲೆ ಎತ್ತುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಸ್ಪೋಟಗೊಂಡಿದ್ದು, ಯಾವುದೇ ಕಾರಣಕ್ಕೂ ಭಾಗಮಂಡಲ ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡದೆ ಈ ಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು, ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿದ್ದರೆ ಹೋರಾಟ ಅನಿವಾರ್ಯ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಭಾಗಮಂಡಲ ತಲಕಾವೇರಿ ಎನ್ನುವುದು ಇಲ್ಲಿನ ಮೂಲನಿವಾಸಿಗಳ ಹಾಗೂ ಅನಾದಿಕಾಲದಿಂದಲೂ ಇಲ್ಲಿ ಬದುಕು ಕಟ್ಟಿಕೊಂಡವರ ಶ್ರದ್ಧಾ ಭಕ್ತಿಯ ಕೇಂದ್ರವಾಗಿದ್ದು, ಕಾವೇರಿ ಕೊಡವ ಜನಾಂಗ ಕುಲದೇವಿ ಹಾಗೂ ವಿವಿಧ ಜನಾಂಗದ ಆರಾಧ್ಯ ದೇವತೆಯಾಗಿರುತ್ತಾಳೆ. ಕಾವೇರಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಇಲ್ಲಿನ ಜನರ ಧಾರ್ಮಿಕ ಭಾವನೆಯೊಂದಿಗೆ ವ್ಯಾಪಾರೋಧ್ಯಮಿಗಳು ಹಾಗೂ ಆಡಳಿತ ವರ್ಗ ಆಟವಾಡುತ್ತಿದ್ದು, ಈ ಭಾಗದಲ್ಲಿ ಯಾವುದೇ ಕಾರಣಕ್ಕೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಈ ಪವಿತ್ರ ಪುಣ್ಯಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು, ಹಾಗೇ ಈ ಭಾಗದಲ್ಲಿ ನಿರ್ಮಾಣವಾಗಿರುವ ಹೋಂಸ್ಟೇ ರೇಸಾರ್ಟ್'ಗಳಿಗೆ ಪರವಾನಗಿ ನೀಡಬಾರದು, ಒಂದು ಸಮಯ ನೀಡಿದ್ದರು ಪರವಾನಗಿ ರದ್ದು ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ. 

ಈಗಾಗಲೇ ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲು ಅವಕಾಶ ಕೊಟ್ಟಿದ್ದು, ಹೀಗೆ ಆದರೆ ಮುಂದಿನ ದಿನಗಳಲ್ಲಿ ಅಂತರ್ಜಲದ ಮಟ್ಟ ಕುಸಿಯುವುದರೊಂದಿಗೆ, ಆಹಾರದ ಕೊರತೆ ಕೂಡ ಉಂಟಾಗಲಿದೆ. ಹಾಗೇ ತಲಕಾವೇರಿ ಭಾಗಮಂಡಲ ಪುಣ್ಯ ಕ್ಷೇತ್ರದಲ್ಲಿ ಅನ್ಯ ಚಟುವಟಿಕೆಗಳಿಗೆ ಅವಕಾಶ ನೀಡದೆ ಕ್ಷೇತ್ರವನ್ನು ದೇಗುಲಗಳ ಪಟ್ಟಣವೆಂದು ಘೋಷಿಸಬೇಕು ಎಂದು ಇತ್ತೀಚೆಗೆ ಸಂಘಟನೆಯೊಂದು ಒತ್ತಾಯಿಸಿದ್ದು, ಕೊಡಗು ಸಂರಕ್ಷಣಾ ಒಕ್ಕೂಟ ಇವರಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,