Header Ads Widget

ಸರ್ಚ್ ಕೂರ್ಗ್ ಮೀಡಿಯ

ಭಾರತ್ ಮಾತಾ ಪೂಜನ ಹಾಗೂ 73 ನೇ ಭಾರತದ ಗಣರಾಜ್ಯೋತ್ಸವ ಆಚರಣೆ

ಭಾರತ್ ಮಾತಾ ಪೂಜನ ಹಾಗೂ 73 ನೇ ಭಾರತದ ಗಣರಾಜ್ಯೋತ್ಸವ ಆಚರಣೆ


ಮಡಿಕೇರಿ ನಗರದ ರಾಘವೇಂದ್ರ ದೇವಾಲಯದ ಬಳಿ ಇರುವ ನೇತಾಜಿ ಜಂಕ್ಷನ್ ನಲ್ಲಿ ಭಾರತ್ ಮಾತಾ ಪೂಜನಾ ಮತ್ತು 73 ನೇ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.  ಮೊದಲಿಗೆ ಭಾರತಮಾತಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂ ಸೇವಕರಾದ ಶ್ರೀ ಡಿ.ಹೆಚ್. ತಮ್ಮಪ್ಪನವರು ಮಾತನಾಡಿ ಭಾರತ ಮಾತಾ ಪೂಜನಾ, ಅದರ ಮಹತ್ವ, ಹಿನ್ನೆಲೆ ಹಾಗೂ ಭಾರತದ ವೈಭವದ ಬಗ್ಗೆ ಮಾತನಾಡಿದರು. 

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ ನಗರಸಭಾ ಸದಸ್ಯರಾದ ಶ್ರೀ ಕೆ.ಎಸ್. ರಮೇಶ್ ರವರು ಗಣರಾಜ್ಯೋತ್ಸವದ ಹಿನ್ನೆಲೆ ಹಾಗೂ ಗಣರಾಜ್ಯೋತ್ಸವದ  ಮಹತ್ವದ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ನಗರಸಭೆ 6ನೇ ವಾರ್ಡ್‌ನ ಸ್ಥಳೀಯ ನಿವಾಸಿಗಳು ಮಕ್ಕಳು ಭಾಗವಹಿಸಿದ್ದರು. ಕುಮಾರಿ ಇಂಪನಾರವರು ದೇಶಭಕ್ತಿ ಗೀತೆಯನ್ನು ಹಾಡಿದರು. ಕಾರ್ಯಕ್ರಮವನ್ನು ಆಯೋಜನೆ ಮಾಡಿ ಸಹಕರಿಸಿದ ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜ(ಜೆ) ದ ಸದಸ್ಯರಿಗೆ ಹಾಗೂ ಆಶಾ ಸ್ಟೋರ್ಸ್ ಮಾಲೀಕರಾದ ಆಶಾ ನಟರಾಜರವರಿಗೆ ಹಾಗೂ ರವಿ ಸೂರ್ಯ ಮಕ್ಕಳ ಬಳಗಕ್ಕೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ವಿವೇಕ್ ನರೇನ್‌ರವರು ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರಗೀತೆ ಗಾಯನದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಕಾರ್ಯಕ್ರಮದ ನಂತರ ಸಿಹಿತಿಂಡಿ ಮತ್ತು ಪಾನಿಯವನ್ನು ಹಂಚಲಾಯಿತು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,