Header Ads Widget

Responsive Advertisement

ಲಘುವಾಹನ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

ಲಘುವಾಹನ  ತರಬೇತಿ  ಕಾರ್ಯಕ್ರಮದ ಸಮಾರೋಪ ಸಮಾರಂಭ


ಕೂಡಿಗೆಯ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ  30 ದಿನದ ನಡೆದ ಲಘುವಾಹನ  ತರಬೇತಿಯು  ದಿನಾಂಕ: 25.02.2022 ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭದನಡೆಯಿತು.

ಸಮಾರಂಭದಲ್ಲಿ ಕೊಡಗು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾದಿಕಾರಿಗಳು  ಭಂನ್ವರ್ ಸಿಂಗ್ ಮೀನಾರವರು ಭಾಗವಹಿಸಿ  ಈ ತರಬೇತಿಯ 32 ಶಿಭಿರಾರ್ಥಿಗಳಿಗೆ, ಪ್ರಮಾಣ ಪತ್ರವನ್ನು ವಿತರಿಸಿದ್ದರು. ಹಾಗೂ ಹಿಂದಿನ ತರಬೇತಿಯ 33 ಶಿಬಿರಾರ್ಥಿಗಳಿಗೆ ಚಾಲನ ಪರವಾನಗೆ (License) ವಿತರಿಸಿದ್ದರು. 

ಹಾಗೆ 31 ಶಿಭಿರಾರ್ಥಿಗಳ ತರಬೇತಿಯು ನಡೆಯುತಿದ್ದು, ಶಿಬಿರಾರ್ಥಿಗಳ ಕುರಿತು ಮಾನ್ಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಿಂದೆ ಪುರುಷ ಪ್ರಧಾನ ಸಮಾಜವಿತ್ತು ಮಹಿಳೆಯರನ್ನ ಗುರುತಿಸಲು ಗಂಡನ ಅಥವಾ ಮಾವನ ಮತ್ತು ಅತ್ತೆಯ ಹೆಸರಿನಿಂದ ಗುರುತಿಸುತ್ತಿದರು ಈಗ ಎನ್.ಆರ್.ಎಲ್.ಎಂ ಸಂಜಿವಿನಿ ಯೋಜನೆ ಬಂದ ನಂತರ ಮಹಿಳೆಯರನ್ನು ಅವರ ಹೆಸರಿನಿಂದ ಗುರುತಿಸುವಂತಾಗಿದೆ ಮಹಿಳೆಯರು ಈಗ ಎಲ್ಲ ರಂಗಗಳಲ್ಲೂ ಮುಂದೆ ಬಂದಿದು, ಚಾಲನ ಪರವಾನಗೆ (License) ನಿಮಗೆ ಗುರುತಿನ ಚೀಟಿಯಾಗಿದ್ದು ಮುಂದೆ ನಿಮ್ಮ ಜೀವನಕ್ಕೆ ಆಸರೆಯಾಗಲಿದೆ ಹಾಗೂ ಗ್ರಾಮೀಣ ಮಟ್ಟದ ನಿರುದ್ಯೋಗಿ ಮಹಿಳೆಯರಿಗೆ ಎನ್.ಆರ್.ಎಲ್.ಎಂ ಸಂಜಿವಿನಿ ಗ್ರಾಮ ಪಂಚಾಯಿತಿ ಒಕ್ಕೂಟದಿಂದ  ಅವಕಾಶ ಕಲ್ಪಿಸಿದ್ದು ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹಾರೈಸಿದ್ದರು.

ನಂತರ ತಾವೇ ಸ್ವತಹ ಘನ ತ್ಯಜ್ಯ ವಿಲೇವಾರಿ ವಾಹನವನ್ನು ಚಾಲನೆ ಮಾಡುವ ಮೂಲಕ  ಶಿಬಿರಾರ್ಥಿಗಳಿಗೆ ಉತ್ತೇಜನ ನೀಡಿದರು. ಈ ಕಾರ್ಯಕ್ರಮದಲ್ಲಿ ಎನ್.ಆರ್.ಎಲ್.ಎಂ ಸಂಜಿವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀ. ಕುಮಾರ ಪಿ, ಜಿಲ್ಲಾ ವ್ಯವಸ್ಥಾಪಕರಾದ ಜಗನ್ನಾಥ್, ಯುವ ವ್ರತಿಪರರು ಅರ್ಜುನ್, ವಾಹನ ಚಾಲನ ತರಬೇತುದಾರರಾದ ಶ್ರೀಮತಿ ಜಮುನಾ ರವರು, ಹಾಗೂ  ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಲಾವುದ್ದೀನ್ ಎಂ.ಎಂ. ಮತ್ತು ಹರೀಶ್ ಸಿ. ಇ. ಹಾಜರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,