Header Ads Widget

Responsive Advertisement

ಚೆಟ್ಟಳ್ಳಿಯ ಮೋದಿ ಭವನದಲ್ಲಿ ನಡೆದ ಅರೆಭಾಷೆ ಪುಸ್ತಕಗಳ ಬಿಡುಗಡೆ ಸಮಾರಂಭ

ಚೆಟ್ಟಳ್ಳಿಯ ಮೋದಿ ಭವನದಲ್ಲಿ ನಡೆದ ಅರೆಭಾಷೆ ಪುಸ್ತಕಗಳ ಬಿಡುಗಡೆ ಸಮಾರಂಭ

ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿಯಲು ಸಾಧ್ಯ ; ಪಿ.ಎಲ್ ಧರ್ಮ


ಮಡಿಕೇರಿ ಮಾ.೨೦: ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಂತೆ ಅರೆಭಾಷೆಯೂ ಒಂದಾಗಿದೆ. ಈ ಅರೆಭಾಷೆ ಸಂಸ್ಕೃತಿ ಮತ್ತು ಸಂಸ್ಕಾರವು ಸಮಾಜದ ಅಡಿಗಲ್ಲು ಆಗಿದೆ ಎಂದರು. ರಾಜ್ಯದಲ್ಲಿಯೇ ಕೊಡವ, ಅರೆಭಾಷೆ, ತುಳು, ಕೊಂಕಣಿ, ಹೀಗೆ ಒಂದೊಂದು ಸಮುದಾಯಕ್ಕೆ ಭಾಷೆ ಇದ್ದು, ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲ ಸಚಿವಾರದ ಪಿ.ಎಲ್.ಧರ್ಮ ಅವರು   ಅಭಿಪ್ರಾಯ ವ್ಯಕ್ತಪಡಿಸಿದರು. 

ಚೆಟ್ಟಳ್ಳಿಯ ಮೋದಿ ಭವನದಲ್ಲಿ ಭಾನುವಾರ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಪ್ರಕಟಿಸಿದ ಅರೆಭಾಷೆ ಪುಸ್ತಕಗಳ ಬಿಡುಗಡೆ ಮಾಡಿ ಅವರು ಮಾತನಾಡಿದರು.    

ಎಲ್ಲಾ ಭಾಷೆಗಳನ್ನು ಸಂಸ್ಕೃತಿಯನ್ನು ಗೌರವಿಸಿದಾಗ ಮಾತ್ರ ಮಾತೃ ಭಾಷೆಯ ಉಳಿಸಲು ಸಾಧ್ಯ. ಹಾಗಾಗಿ ಎಲ್ಲರು ಇತರೆ ಭಾಷೆಗಳನ್ನು ಪ್ರಿತಿಸಬೇಕು ಹಾಗೂ ಮಾತೃ ಭಾಷೆ ಉಳುವಿಗಾಗಿ ಎಲ್ಲರೂ ಪ್ರಯತ್ನಿಸಬೇಕು ಎಂದರು. 

ಅರೆ ಭಾಷೆ ಅಕಾಡೆಮಿ ಹೊಸ ಪ್ರಯತ್ನಗಳನ್ನು  ಮಾಡುತ್ತಾ ಬರುತ್ತಿತುವುದು ಶ್ಲಾಘನೀಯ. ಭಾಷೆ ಎನ್ನುವದು ಪ್ರಮುಖವಾಗಿ ಸಂಸ್ಕೃತಿಯ ಭಾಗವೇ ಆಗಿದೆ. ಭಾಷೆ ಎನ್ನುವುದು ಸಮುದಾಯವನ್ನು ಕಟ್ಟುವ, ಹೃದಯವನ್ನು ಜೋಡಿಸುವ, ಮನುಷ್ಯತ್ವವನ್ನು ಕಟ್ಟಿ ಬೆಳೆಸುವ ಆಸ್ತಿಯಾಗಬೇಕು ಎಂದರು.

 ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳಿಗೆ ಇತರೆ ಭಾಷೆಯ ಜೊತೆಗೆ  ಮಾತೃ ಭಾಷೆ ಸಂಸ್ಕೃತಿಯನ್ನು ತಿಳಿಸಬೇಕು, ಕಲಿಸಬೇಕು ಮತ್ತು ಮಾತನಾಡಿಸಬೇಕು. ಮಾತೃ ಭಾಷೆಗೆ ಮಾತ್ರ ಭಾಷೆಯನ್ನು ಪ್ರೀತಿಸುವ ಹಾಗೂ ಇತರೆ ಭಾಷೆಯನ್ನು  ಪ್ರೀಯಿಸುವ ಗೌರವಿಸುವ ಶಕ್ತಿಯಿದೆ.  ಯಾವಾಗ ಮಾತೃ ಬಾಷೆಯನ್ನು ಮಾತಾಡಿತ್ತಿರೊ ಪ್ರೀತಿಸುತ್ತಿರೊ  ಆ ಭಾಷೆಗೆ ಇತರೆ ಭಾಷೆಯನ್ನು ಪ್ರೀತಿಸುವ , ಗೌರವವಿಸುವ ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.

 ಲೇಖಕರು ಬರೆದ ಪುಸ್ತಕಗಳನ್ನು ಓದಬೇಕು. ಬರವಣಿಗೆಯ ಕೊಂಡಿಯನ್ನು ಪ್ರಾರಂಭಿಸಬೇಕು. ಇದರಿಂದ ಓದುವುದು ಬರೆಯುವುದು ನಿರತಂರ ಪ್ರಕ್ರಿಯೆವಾಗುತ್ತದೆ. ಪುಸ್ತಕಗಳನ್ನು ಓದುವ ಹವ್ಯಾಸ ಅಳವಡಿಸಿಕೊಳ್ಳಬೇಕು. ಪುಸ್ತಕಗಳನ್ನು ಓದಿ,  ಬರವಣಿಗೆಗೆ ಪ್ರತಿಕ್ರಿಯೆ ನೀಡಿದಾಗ ಮಾತ್ರ ಲೇಖಕರಿಗೆ ಪ್ರೇರೆಪಣೆ ನೀಡಿದಂತಾಗುತ್ತದೆ ಎಂದರು.

 ಹಿರಿಯ ವಿದ್ವಾಂಸರಾದ ಡಾ.ಪ್ರಭಾಕರ ಶಿಶಿಲ ಅವರು ಮಾತನಾಡಿ ಒಂದು ಭಾಷೆ ಉಳಿಯಬೇಕಾದರೆ ಆ ಭಾಷೆಯ ಪುಸ್ತಕಗಳು ಪ್ರಮುಖ ಪಾತ್ರ ವಹಿಸುತ್ತದೆ. ಭಾಷೆಯನ್ನು ಮಾತನಾಡುವುದರಿಂದ ಭಾಷೆ ಉಳಿಯುತ್ತದೆ. ಭಾಷೆಯನ್ನು  ಬಳಸದಿದ್ದರೆ ಭಾಷೆ ಉಳಿಯುವುದಿಲ್ಲ, ಬೆಳವಣಿಗೆಯೂ ಸಹ ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಅರೆ ಭಾಷೆಯಲ್ಲಿ ಏಕಕಾಲದಲ್ಲಿ ಏಳು ಪುಸ್ತಕಗಳನ್ನು ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ. ಪುಸ್ತಕ ಓದುವ ಆಸಕ್ತಿ ಪ್ರಸ್ತುತ ದಿನದಲ್ಲಿ  ಕಡಿಮೆಯಾಗಿದೆ ಎಲ್ಲರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಎಲ್ಲರಿಗೂ ಅರೆಭಾಷೆಯಲ್ಲಿ ಪುಸ್ತಕ ಬರೆಯಲು ಸಾಧ್ಯವಿಲ್ಲ ಆದರೆ ಬೇರೆ ಭಾಷೆಯಲ್ಲಿ ಬಂದAತಹ ಹಲವಾರು ಕೃತಿಗಳನ್ನು ಅರೆಭಾಷೆಗೆ ಅನುವಾದ ಮಾಡಲು ಸಾಧ್ಯವಿದೆ. ಇದರಿಂದ ಬೇರೆ ಭಾಷೆಯ ಸಂಸ್ಕೃತಿಯನ್ನು ತಿಳಿದುಕೊಳ್ಳಬಹುದು. ಜೊತೆಗೆ ಅರೆಭಾಷೆಯನ್ನು ಶ್ರೀಮಂತಗೊಳಿಸಲು ಸಹಕಾರಿಯಾಗುತ್ತದೆ. ಮನಸಿದ್ದರೆ ಮಾರ್ಗ ಎಂದು ಅವರು ಹೇಳಿದರು.

ಅರೆಭಾಷೆಯಲ್ಲಿ ಬಿಡುಗಡೆಯಾದ ಪುಸ್ತಕಗಳನ್ನು ಹಳ್ಳಿಹಳ್ಳಿಗೂ ಮುಟ್ಟಿಸುವ ಕೆಲಸ ಆಗಬೇಕು. ನಮ್ಮ ನಡುವೆ ಹಲವಾರು ಪ್ರತಿಭಾನ್ವಿತರು ಇದ್ದಾರೆ ಆದರೆ ಅವರಿಗೆ ಅವಕಾಶಗಳು ಕಡಿಮೆ ಇದೆ. ಭಾರತದಲ್ಲಿನ ಬಲಿಷ್ಠ ಭಾಷೆಗಳಲ್ಲಿ ಅರೆಭಾಷೆಯೂ ಆಗುವಂತಾಗಲಿ ಎಂದು ಅವರು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ ಹಳ್ಳಿ ಹಳ್ಳಿಗಳಿಗೂ ಸಾಹಿತ್ಯದ ಬಗ್ಗೆ ಜನರಲ್ಲಿ ಅಭಿರುಚಿ ಹಾಗೂ ಅರಿವು ಮೂಡಿಸುವ ದೃಷ್ಟಿಯಿಂದ ಚೆಟ್ಟಳ್ಳಿ ಗ್ರಾಮದಲ್ಲಿ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಅರೆ ಭಾಷೆಯಲ್ಲಿ ಬರೆದ ಕೃತಿಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಭಾಷೆಯನ್ನು ಉಳಿಸಿ ಬೆಳಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಕಾಡೆಮಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಅವರು ಹೇಳಿದರು.

ಲೇಖಕರಾದ ಬಾರಿಯಂಡ ಜೋಯಪ್ಪ,  ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ, ಚೆಟ್ಟಳ್ಳಿ ಚೇರಳ ಗೌಡ ಸಂಘದ ಅಧ್ಯಕ್ಷರಾದ ಅಯ್ಯಂಡ್ರ ರಾಘವಯ್ಯ, ಚೆಟ್ಟಳ್ಳಿ ಕೂಡ್ಲೂರು ಗೌಡ ಸಂಘದ ಅಧ್ಯಕ್ಷರಾದ ಅಕ್ಕಾರಿ ದಯಾನಂದ, ಪಿಎಸಿಎಸ್ ಅಧ್ಯಕ್ಷರಾದ ಬಲ್ಲಾರಂಡ ಮಣಿಉತ್ತಪ್ಪ  ಅಕಾಡೆಮಿ ಸದಸ್ಯರು ಇತರರು ಇದ್ದರು.

ಸದಸ್ಯರಾದ ಪ್ರೇಮಾ ರಾಘವಯ್ಯ ಪ್ರಾರ್ಥಿಸಿದರು. ಸ್ಮೀತಾ ಅಮೃತರಾಜ್ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿ ವಂದಿಸಿದರು.

ಬಿಡುಗಡೆಯಾದ ಪುಸ್ತಕಗಳು: ಗಂಗಾವತರಣ ಭೀಷ್ಮೋದಯ (ಪ್ರೊ.ಕೆ.ಕುಶಾಲಪ್ಪಗೌಡ), ಯಾಕೀ ಕತೆ ಹಿಂಗಾತ್ (ಕುತ್ಯಾಳ ನಾಗಪ್ಪಗೌಡ (ಕಿರಣ), ಮುತ್ತುಮಣಿ (ಕಣಜಾಲ್ ಪೂವಯ್ಯ), ಬಲೀಂದ್ರನ ಸಂದಿ(ಕರಾವೇ ಶಿವರಾಮೇಗೌಡ ಬಣ), ಚೆಂಚಿ (ಬಾರಿಯಂಡ ಜೋಯಪ್ಪ), ಅರೆಭಾಷೆ ಗಾದೆಗ(ತೆಕ್ಕಡೆ ಕುಮಾರಸ್ವಾಮಿ), ಅಟ್ಟಿ(ಕೊಟ್ಟಕೇರಿಯನ ಲೀಲಾ ದಯಾನಂದ).

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,